ಸಂತೋಷ್‌ ಲಾಡ್‌, ಶ್ರೀನಿವಾಸ ಮಾನೆ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಿ: ಮರಾಠರ ಒತ್ತಾಯ

WhatsApp
Telegram
Facebook
Twitter
LinkedIn

ಬೆಂಗಳೂರು: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಡಿ.ಕೆ ಶಿವಕುಮಾರ್ ಅವರಿಗೆ ಅಭಿನಂದನೆ ಮಾರಾಟ ಸಮಾಜ ಅಭಿನಂದನೆ ಸಲ್ಲಿಸುತ್ತಿದ್ದು, ಹೊಸ ಸಂಪುಟದಲ್ಲಿ ಶಾಸಕರಾದ ಸಂತೋಷ್‌ ಲಾಡ್‌ ಮತ್ತು ಶ್ರೀನಿವಾಸ ಮಾನೆ ಅವರುಗಳಿಗೆ ಸ್ಥಾನವನ್ನು ನೀಡಬೇಕು ಎಂದು ಸಕಲ ಮರಾಠ ಸಮಾಜದಿಂದ ಒತ್ತಾಯಿಸಲಾಯಿತು.

ಈ ಕುರಿತು ಬುಧವಾರ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಕಲ ಮರಾಠ ಸಮಾಜದ ಅಧ್ಯಕ್ಷ ರವಿಶಂಕರ್ ಮೆಹಡಿಕ್ ಮರಾಠ, ನಮ್ಮ ಸಮುದಾಯಕ್ಕೆ ಸೇರಿದ ಸಂತೋಷ್ ಲಾಡ್ ಜನಪ್ರಿಯತೆ ಸಾಕಷ್ಟು ಇದ್ದು, ಕಾರ್ಯಕ್ಷಮತೆ, ದಕ್ಷತೆ ಪರಿಗಣಿಸಿ ಈ ಹಿಂದಿನ ಬಹುತೇಕ ಸರ್ಕಾರಗಳು ಅವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವರನ್ನಾಗಿ ನೇಮಕ ಮಾಡಿ ಸಮಾಜದ ಸೇವೆಗಾಗಿ ನಿಯೋಜನೆ ಮಾಡಿದ್ದಾರೆ. ಲಾಡ್ ರಾಜ್ಯಮಟ್ಟದ ನಾಯಕರಾಗಿದ್ದು ಮರಾಠ ಸಮುದಾಯ ಮಾತ್ರವಲ್ಲದೆ ಜಾತ್ಯಾತೀತ ನೇತಾರರಾಗಿದ್ದಾರೆ. ಹಿಂದಿನ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿ ಎಲ್ಲಾ ಕಾರ್ಮಿಕರ ಸಮಸ್ಯೆಗಳಿಗೆ, ಕ್ಷೇಮಾಭಿವೃದ್ಧಿಗೆ, ವಿಕಲಾಂಗರಿಗೆ ಅನುಕೂಲವಾಗುವಂತಹ ಹತ್ತು ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ ಎಂದರು.

ರಾಜ್ಯಾದ್ಯಂತ ಸುಮಾರು 40 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಮರಾಠ ಸಮುದಾಯ ಹೊಂದಿದ್ದು,   ಪ್ರಮುಖ ನಾಯಕರಾದ ಸಂತೋಷ್ ಲಾಡ್ ಮತ್ತು ಶ್ರೀನಿವಾಸ ಮಾನೆಯವರ ಹಿರಿತನವನ್ನು ಗಮನಿಸಿ ನೂತನ ಸರ್ಕಾರದಲ್ಲಿ ಪ್ರಾಮುಖ್ಯ ಸ್ಥಾನ ನೀಡಬೇಕು. ಬಹುಮುಖ್ಯವಾಗಿ ಸಂತೋಷ್ ಲಾಡ್ ಅವರ ಜನಪ್ರಿಯತೆಯನ್ನು ಪರಿಗಣಿಸಿ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.

ಇನ್ನು ಹಾನಗಲ್ ಕ್ಷೇತ್ರದ ಶಾಸಕರಾದ ಶ್ರೀನಿವಾಸ ಮಾನೆಯವರು ಜಿಲ್ಲೆಯ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದ್ದು, ಜನಪ್ರಿಯ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಇವರಿಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ನೀಡಿದಲ್ಲಿ, ರಾಜ್ಯಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಅವಕಾಶವಾಗುತ್ತದೆ ಎಂದು ರವಿಶಂಕರ್ ಮೆಹಡಿಕ್ ಮರಾಠ ಅಭಿಪ್ರಾಯ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಮಾರುತಿ ರಾವ್, ಪ್ರವೀಣ್ ಮಾನೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon