ಬೆಂಗಳೂರು: ಬಸವನಗುಡಿಯ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಕ್ಷಯ ತೃತೀಯ ಆಚರಣೆಯಲ್ಲಿ ಖ್ಯಾತ ನಟಿ ಸುಧಾರಾಣಿ ಭಾಗಿಯಾಗಿ ಸಂಭ್ರಮವನ್ನು ಇಮ್ಮಡಿಗೊಳಿಸಿದರು. ಅವರು ಸೀರೆ ಉಟ್ಟು ಅಪ್ಪಟ ಭಾರತೀಯ ಶೈಲಿಯಲ್ಲಿ ಆಭರಣಗಳನ್ನು ಧರಿಸಿ ಕಂಗೊಳಿಸಿದ್ದು ವಿಶೇಷವಾಗಿತ್ತು.
ಅತ್ಯುತ್ತಮ ಗ್ರಾಹಕ ಸೇವೆಗೆ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಪ್ರಸಿದ್ಧವಾಗಿದೆ. ಕುಸುರಿ ಮತ್ತು ಕಲಾತ್ಮಕತೆಯಿಂದ ಕೂಡಿದ ಸುಂದರ, ಆಕರ್ಷಕ, ಮನಮೋಹಕ ಆಭರಣಗಳಿಗೆ ಹೆಸರುವಾಸಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ನ ಮಾಲೀಕ, ವಿಧಾನಪರಿಷತ್ ಸದಸ್ಯ ಟಿ. ಎ ಶರವಣ ಮಾತನಾಡಿ, ಗ್ರಾಹಕರು ನಮ್ಮ ಕುಟುಂಬದವರಿದ್ದಂತೆ. ಉತ್ತಮ ಗ್ರಾಹಕ ಸೇವೆ ನೀಡುತ್ತ ಅವರ ವಿಶ್ವಾಸ ಉಳಿಸಿಕೊಂಡು ಬಂದಿದ್ದೇವೆ. ಈ ಎಲ್ಲ ಕೊಡುಗೆಗಳು ನಮ್ಮ ನೂತನ ಮಳಿಗೆ ಕನಕಪುರ ರಸ್ತೆಯ ರಘುವನಹಳ್ಳಿ ಮಾತ್ರವಲ್ಲದೆ, ಬಸವನಗುಡಿ, ಮಲ್ಲೇಶ್ವರಂ, ಎಚ್ಎಸ್ಆರ್ ಲೇಔಟ್, ಯಲಹಂಕ, ಕೆ.ಆರ್.ಪುರಂ ಮತ್ತು ನಾಗರಬಾವಿ ಶಾಖೆಗಳಲ್ಲಿ ಲಭ್ಯವಿದೆ. ಎಲ್ಲರೂ ನಿಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಿ ಈ ವಿಶೇಷ ರಿಯಾಯಿತಿಯ ಸದುಪಯೋಗಪಡಿಸಿಕೊಳ್ಳಬೇಕು. ಗ್ರಾಹಕರಿಗೆ ಈ ಅಕ್ಷಯ ತೃತೀಯ ಸಮೃದ್ಧಿ ತರಲಿ ಎಂದು ಆಶಿಸಿದರು.
ಮೆಗಾ ಆಫರ್ ಗಳಿಗೆ ಗ್ರಾಹಕರ ಉತ್ತಮ ಸ್ಪಂದನೆ:
ಬೆಂಗಳೂರಿನ ವಿಶ್ವಾಸಾರ್ಹ ಆಭರಣ ಮಳಿಗೆ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ತನ್ನ ಎಲ್ಲ ಶಾಖೆಗಳಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಅಕ್ಷಯ ತೃತೀಯದ ಮೆಗಾ ಆಫರ್ ನೀಡುತ್ತಿದೆ. ಅದಕ್ಕೆ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.
ಅಪೂರ್ವ ಸಂಗ್ರಹ:
ಜೈಪುರದ ರಾಜಮನೆತನದ ಮಾದರಿಯ ಪಾರಂಪರಿಕ ಒಡವೆಗಳು, ಭಾರತೀಯ ಸಂಸ್ಕೃತಿಯನ್ನು ಪ್ರತಿನಿಧಿಸುವ ಮತ್ತು ಶತಮಾನಗಳ ಹಳೆಯ ವಿನ್ಯಾಸದ ದೈವಿಕ ಆಭರಣಗಳು, ಭಕ್ತಿ ಬಿಂಬಿಸುವ ಲೈಟ್ ವೇಟ್ ಟೆಂಪಲ್ ಜ್ಯುವೆಲರಿ, ಹೊಳೆಯುವ ವಜ್ರದ ಸೆಟ್ಗಳು, ಬೆಳ್ಳಿ ಆಭರಣಗಳು ಮತ್ತು ಚಿನ್ನದ ಆ್ಯಂಟಿಕ್ ಆಭರಣಗಳ ಅದ್ಭುತ ಮತ್ತು ಅಮೋಘ ಸಂಗ್ರಹಗಳನ್ನು ಹೊಂದಿರುವ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮಳಿಗೆಗಳು ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿವೆ. ತೃಪ್ತಿದಾಯಕ ಗ್ರಾಹಕ ಸೇವೆ ನೀಡಲು ಸಿದ್ಧವಾಗಿದೆ.














