ಬೆಳಗಾವಿ: ಬೆಳಗಾವಿಯ ಭೂ ದಾಖಲೆಯ ಸಹಾಯಕ ನಿರ್ದೇಶಕರ ಕಚೇರಿಯ ಅವ್ಯವಹಾರ ಅನಾಚಾರದ ಕುರಿತು ಪ್ರಜಾ ನೆರಳು ಪತ್ರಿಕೆ ಈ ಹಿಂದೆ ವರದಿಯನ್ನು ಪ್ರಕಟಿಸಿದ್ದರೂ ಸಹ ಜಿಲ್ಲಾಧಿಕಾರಿಗಳಾಗಲಿ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳಾಗಲಿ ಯಾವುದೇ ಕ್ರಮವನ್ನು ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ.
ಉದಾಹರಣೆಯಾಗಿ ಸರ್ವೆ ನಂಬರ್ ಗಳಾದ 90/2 11, 594, 1197, 236 ಸಂಖ್ಯೆಗಳ ಇ ನಕ್ಷೆಗಳನ್ನು (ಡಿಜಿಟಲ್ ನಕ್ಷೆ) ಮಾಡಿಕೊಡುವುದಾಗಿ ಲಂಚಕ್ಕೆ ಬೇಡಿಕೆ ಇಟ್ಟಿರುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ. ಇದೇ ಮಾದರಿಯಲ್ಲಿ ಭೂ ದಾಖಲೆ ಇಲಾಖೆಯಲ್ಲಿ ದಾಖಲೆಗಳು ಎಷ್ಟು ಸರಿಯಾಗಿದ್ದರೂ ಅದರಲ್ಲಿ ತಪ್ಪು ಹುಡುಕಿ ಅದನ್ನೇ ಹಿಡಿದು ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ ಎನ್ನುವುದು ಕೂಡ ತಿಳಿದು ಬಂದಿದೆ. ಇಲ್ಲಿ ಲಂಚ ಕೊಟ್ಟರೆ ಮಾತ್ರ ಕೆಲಸ ಎನ್ನುವಂತೆ ಜನಸಾಮಾನ್ಯರು ಮಾತನಾಡಿಕೊಳ್ಳುತ್ತಿರುವುದು ಕೂಡ ಬೆಳಗಾವಿ ಜಿಲ್ಲೆಯಲ್ಲಿ ಸರ್ವೇ ಸಾಮಾನ್ಯವಾಗಿ ಕಂಡು ಬರುತ್ತಿದೆ. ಈ ಲಂಚಾವತಾರಕ್ಕೆ ಕಡಿವಾಣ ಹಾಕುವವರು ಯಾರು ಎನ್ನುವ ಪ್ರಶ್ನೆಗಳು ಮೂಡುತ್ತಿವೆ.
ಈಗಲಾದರೂ ಬೆಳಗಾವಿ ಜಿಲ್ಲಾಧಿಕಾರಿಯದ ಮೊಹಮ್ಮದ್ ರೋಷನ್ ಅವರು ಹಾಗೂ ಭೂ ದಾಖಲೆ ಇಲಾಖೆಯ ಹಿರಿಯ ಅಧಿಕಾರಿಗಳು ಅಲ್ಲಿನ ಸಹಾಯಕ ನಿರ್ದೇಶಕರ ಕಚೇರಿಯ ಕುರಿತು ತನಿಖೆಯನ್ನು ನಡೆಸಿ ಪರಿಶೀಲಸಬೇಕು ಎನ್ನುವುದು ಪತ್ರಿಕೆಯ ಕಳಕಳಿಯಾಗಿದೆ. ಈ ಕುರಿತು ಹಲವು ದಾಖಲೆಗಳು ಸಹ ಲಭ್ಯವಿದ್ದು, ಇದನ್ನು ಪರಿಗಣಿಸಿ ಕ್ರಮಕ್ಕೆ ಮುಂದ ಮುಂದಾಗುತ್ತಾರ ಎನ್ನುವುದನ್ನು ಕೂಡ ಕಾದು ನೋಡಬೇಕಿದೆ.














