ರಾಜಕಾರಣಿಗಳು ಕೇವಲ ಓಟಿನ ರಾಜಕೀಯ ಮಾಡಬೇಡಿ: ಆರ್.ಅಶೋಕ್

WhatsApp
Telegram
Facebook
Twitter
LinkedIn

ಬೆಂಗಳೂರು: ರಾಜಕಾರಣಿಗಳು ಕೇವಲ ಓಟಿನ ರಾಜಕೀಯ ಮಾಡಬೇಡಿ, ಪ್ರತಿಯೊಬ್ಬ ಶಾಸಕರು ಸಿ.ಕೆ.ರಾಮಮೂರ್ತಿ ಅವರಂತೆ ಮಕ್ಕಳ ಶಿಕ್ಷಣಕ್ಕೆ ಸಹಾಯ, ಸಹಕಾರ ನೀಡಬೇಕು ಎಂದು ಪ್ರತಿ ಪಕ್ಷ ನಾಯಕ ಆರ್.ಅಶೋಕ್ ಕಿವಿಮಾತು ಹೇಳಿದರು.

ಶನಿವಾರ ಜಯನಗರದ ಚಂದ್ರಗುಪ್ತಮೌರ್ಯ ಆಟದ ಮೈದಾನದಲ್ಲಿ ರಕ್ಷಾ ಫೌಂಡೇಷನ್ ವತಿಯಿಂದ 14ನೇ ವರ್ಷದ ಉಚಿತ ನೋಟ್ ಪುಸ್ತಕ ವಿತರಣೆ ಮತ್ತು ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಮತ್ತು ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ, ಸಂಘ, ಸಂಸ್ಥೆಗಳಿಗೆ  ದೇಣಿಗೆ , ವಿಕಲಚೇತನರಿಗೆ ವೀಲ್ ಚೇರ್ ವಿತರಣೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮಾತಾಡಿದ ಆರ್ ಅಶೋಕ್, ಪ್ರತಿವರ್ಷ ರಕ್ಷಾ ಫೌಂಡೇಷನ್ ವತಿಯಿಂದ ಮಕ್ಕಳ ಶಿಕ್ಷಣಕ್ಕಾಗಿ ಉಚಿತ ನೋಟ್ ಪುಸ್ತಕ, ಲ್ಯಾಪ್ ಟಾಪ್, ವಿದ್ಯಾರ್ಥಿ ವೇತನ ಪವಿತ್ರವಾದ ಕೆಲಸ ಮಾಡುತ್ತಿದ್ದಾರೆ. ಅಡಂಬರ, ಪ್ರಚಾರವಿಲ್ಲದೇ ಸಮಾಜಕ್ಕೆ ಸೇವೆ ಹೇಗೆ ಮಾಡಬೇಕು ಎನ್ನುವುದನ್ನು ರಕ್ಷಾ ಫೌಂಡೇಷನ್ ತೋರಿಸಿ ಕೊಟ್ಟಿದೆ. ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಬೇಕು. ಮಾಜಿ ಶಾಸಕ ವಿಜಯಕುಮಾರ್ ಅವರು ಈ ಹಿಂದೆ ಜಯನಗರ ವಿಧಾನಸಭಾ ಕ್ಷೇತ್ರ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಶಿಷ್ಯರಾದ ಸಿ.ಕೆ.ರಾಮಮೂರ್ತಿ ಅವರು ಕೂಡ ಅದೇ ಆದರ್ಶಗಳನ್ನು ಪಾಲಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಸಂತಸ ವ್ಯಕ್ತಪಡಿಸಿದರು.

ಸಿ.ಕೆ.ರಾಮಮೂರ್ತಿ ಮಾತನಾಡಿ, ಶಿಕ್ಷಣದಿಂದ ದೇಶ ಅಭಿವೃದ್ಧಿಯಾಗುತ್ತದೆ, ವಿದ್ಯಾವಂತ ಸಮಾಜ ನಿರ್ಮಾಣ ಮಾಡಬೇಕು ಎಂಬ ಉದ್ದೇಶದಿಂದ ಕಳೆದ 14 ವರ್ಷಗಳಿಂದ ರಕ್ಷಾ ಫೌಂಡೇಷನ್ ಉಚಿತ ನೋಟ್ ಪುಸ್ತಕ, ಲ್ಯಾಪ್ ಟಾಪ್ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದೆ. ಫೌಂಡೇಷನ್ ಮಕ್ಕಳ ಶಿಕ್ಷಣ ಮತ್ತು ಆರೋಗ್ಯ, ಪರಿಸರ ಉಳಿಸಿ ಬೆಳಸಲು ಶ್ರಮಿಸುತ್ತಿದೆ. ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ, ತುಮಕೂರು, ತುರುವೆಕೆರೆ , ರಾಮನಗರ ವಿವಿಧ ಕಡೆಗಳಲ್ಲಿ 2 ಲಕ್ಷ ನೋಟ್ ಪುಸ್ತಕಗಳನ್ನು ವಿತರಿಸಲಾಗುತ್ತಿದೆ ಎಂದರು.

ದೇಶದ ಭವಿಷ್ಯ ಎಳೆ ಮನಸ್ಸುಗಳ ಕೈಯಲ್ಲಿ ಇದೆ. ಮಕ್ಕಳಿಗೆ ಗುರಿ ಮತ್ತು ಗುರುಗಳ ಮಾರ್ಗದರ್ಶನ ಸಿಗಬೇಕು. ಶಿಕ್ಷಣದಿಂದ ಮಕ್ಕಳು ವಂಚಿತರಾಗಬಾರದು, ಪ್ರತಿಯೊಬ್ಬ ಮಕ್ಕಳಿಗೆ ಶಿಕ್ಷಣ ಸಿಗಬೇಕು ಈ ನಿಟ್ಟಿನಲ್ಲಿ ರಕ್ಷಾ ಫೌಂಡೇಷನ್ ದಿಟ್ಟ ಹೆಜ್ಜೆ ಇಡುತ್ತಿದೆ ಎಂದು ಹೇಳಿದರು.

ಶಾಸಕರುಗಳಾದ ಎಂ.ಕೃಷ್ಣಪ್ಪ, ರವಿಸುಬ್ರಹ್ಮಣ್ಯ, ಸತೀಶ್ ರೆಡ್ಡಿ, ಬಿಗ್ ಬಾಸ್ ವಿನ್ನರ್ ನಟ ಗಿಲ್ಲಿ, ಜಯದೇವ ಆಸ್ಪತ್ರೆ ನಿರ್ದಶಕ ಡಾ.ಜಿ.ದಿನೇಶ್, ನಿಕಟಪೂರ್ವ ಬಿಬಿಎಂಪಿ ಸದಸ್ಯೆ ನಾಗರತ್ನ ರಾಮಮೂರ್ತಿ, ಕೇಂದ್ರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಪ್ತಗಿರಿಗೌಡ, ನಟಿ ತಾರ ಆನುರಾಧ, ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಜಿ.ದಿನೇಶ್, ಪದ್ಮನಾಭನಗರ ಮಂಡಲ ಬಿಜೆಪಿ ಅಧ್ಯಕ್ಷ ಲಕ್ಷ್ಮೀಕಾಂತ್, ಮಾಜಿ ಬಿಬಿಎಂಪಿ ಸದಸ್ಯರುಗಳಾದ ಬಿ.ಸೋಮಶೇಖರ್, ಗೋವಿಂದನಾಯ್ಡು, ದೀಪಿಕಾ ಮಂಜುನಾಥ್ ರೆಡ್ಡಿ, ಚನ್ನಗಿರಿಯಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಜಯದೇವ ಆಸ್ಪತ್ರೆ ಮತ್ತು ಗೀತಾ ಏಜುಕೇಷನ್ ಸೊಸೈಟಿ, ವಾತ್ಯಲಪುರಂಸೇವಾ ಸಂಸ್ಥೆಗಳಿಗೆ ದೇಣಿಗೆ ನೀಡಲಾಯಿತು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon