80ನೇ ಸ್ವಾತಂತ್ರ್ಯ ದಿನಾಚರಣೆಯಂದು ಡಿಜಿಟಲ್ ಭಾರತಕ್ಕೆ ಬಿಎಸ್ಎನ್ಎಲ್ ನಿಂದ ಹೊಸ ಕೊಡುಗೆ

WhatsApp
Telegram
Facebook
Twitter
LinkedIn

ಬೆಂಗಳೂರು: ವಿಶೇಷ ಸ್ವಾತಂತ್ರ್ಯ ದಿನಾಚರಣೆ ಕೊಡುಗೆಯಾಗಿ ಬಿ.ಎಸ್. ಎನ್.ಎಲ್ 1 ರೂಪಾಯಿಗೆ ಸಿಮ್ ಹಾಗೂ ಫೈಬರ್ 2.0 ಆಫರ್‌ಗಳನ್ನು ಪರಿಚಯಿಸಿದೆ.

ಪ್ರೆಸ್ ಕ್ಲಬ್ ನಲ್ಲಿ ಸಂಸ್ಥೆಯ ಚೀಫ್ ಜನರಲ್ ಮ್ಯಾನೇಜರ್ ಎಂ.ಕೆ. ಸುಗುಮಾರನ್ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬಿ.ಎಸ್.ಎನ್.ಎಲ್ ನ ವಿವಿಧ ಉಪಕ್ರಮಗಳು ಹಾಗೂ ಸೇವಾ ವಿಸ್ತರಣೆಯ ಕುರಿತು ಮಾತನಾಡಿದರು. ಒಂದು ರೂಪಾಯಿ ಸಿಮ್ ಆಫರ್‌ನಲ್ಲಿ ಗ್ರಾಹಕರಿಗೆ ದಿನಕ್ಕೆ 1 ಜಿಬಿ ಡೇಟಾ, ದಿನಕ್ಕೆ 100 ಎಸ್ಎಮ್ಎಸ್, ಅನಿಯಮಿತ ಧ್ವನಿ ಕರೆಗಳು ಹಾಗೂ 24 ದಿನಗಳ ಮಾನ್ಯತೆ ದೊರೆಯಲಿದೆ. ಇನ್ನು ಬಿಎಸ್ಎನ್ಎಲ್ ಫೈಬರ್ ಸೇವೆಯಲ್ಲಿ ರೂಪಾಯಿ 1,111ರ ಹೊಸ ಫೈಬರ್ ಪ್ಲಾನ್‌ನ್ನು ಪರಿಚಯಿಸಲಾಗಿದ್ದು, ಗ್ರಾಹಕರಿಗೆ 200 ಎಂಬಿಪಿಎಸ್ ವೇಗ, 5,000 ಜಿಬಿ ಮಾಸಿಕ ಡೇಟಾ ಹಾಗೂ 25ಕ್ಕೂ ಹೆಚ್ಚು ಪ್ರೀಮಿಯಂ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶ ಸೇರಿದಂತೆ ಹಲವು ಸೌಲಭ್ಯಗಳು ದೊರೆಯಲಿವೆ ಎಂದರು.

ಗ್ರಾಹಕರಿಗೆ ಮತ್ತಷ್ಟು ಸುಲಭ ಹಾಗೂ ವೇಗದ ಸೇವೆ ಒದಗಿಸುವ ಉದ್ದೇಶದಿಂದ ಬಿಎಸ್ಎನ್ಎಲ್ ತನ್ನ ಸೆಲ್ಪ್ ಕೇರ್ ಮೊಬೈಲ್ ಅಪ್ಲಿಕೇಶನ್‌ನ್ನು ಅಂಡ್ರಾಡ್ ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪರಿಚಯಿಸಿದೆ.ಈ ಅಪ್ಲಿಕೇಶನ್ ಮೂಲಕ ರೀಚಾರ್ಜ್‌, ಪ್ಲಾನ್‌ ನಿರ್ವಹಣೆ, ಬಿಲ್‌ ಪಾವತಿ, ಡೇಟಾ ಬಳಕೆ ಸೇರಿದಂತೆ ವಿವಿಧ ಸೇವೆಗಳನ್ನು ಸುಲಭವಾಗಿ ನಿರ್ವಹಿಸಬಹುದಾಗಿದೆ ಎಂದು ಹೇಳಿದರು.

ಗ್ರಾಹಕರಿಗೆ ದೀರ್ಘಾವಧಿಯ ಸೇವಾ ಸೌಲಭ್ಯ ಒದಗಿಸುವ ಉದ್ದೇಶದಿಂದ ಬಿಎಸ್ಎನ್ಎಲ್ ತನ್ನ 2,399 ರೂಪಾಯಿ ಪ್ರೀಪೇಯ್ಡ್ ಯೋಜನೆಗೆ ಒಟ್ಟು 412 ದಿನಗಳ ಮಾನ್ಯತೆ ನೀಡುತ್ತಿದೆ. ಈ ಯೋಜನೆಯು ದೀರ್ಘಾವಧಿ ರೀಚಾರ್ಜ್‌ ಮಾಡಿಕೊಳ್ಳಲು ಬಯಸುವ ಗ್ರಾಹಕರಿಗೆ ಅನುಕೂಲಕರವಾಗಿದ್ದು, ನಿರಂತರ ಮೊಬೈಲ್ ಸೇವೆಯನ್ನು ಪಡೆಯಲು ಸಹಕಾರಿಯಾಗಲಿದೆ. ಸಂಸ್ಥೆ ತನ್ನ ಸೇವಾ ವಿಸ್ತರಣೆಯಲ್ಲಿ ಗ್ರಾಮೀಣ ಭಾರತಕ್ಕೆ ವಿಶೇಷ ಆದ್ಯತೆ ನೀಡುತ್ತಿದೆ. ದೇಶದ ದೂರದ ಮತ್ತು ಸಂಪರ್ಕ ಸೌಲಭ್ಯ ಕಡಿಮೆ ಇರುವ ಪ್ರದೇಶಗಳಲ್ಲಿಯೂ ಮೊಬೈಲ್ ಹಾಗೂ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ತಲುಪಿಸುವ ಮೂಲಕ ಡಿಜಿಟಲ್ ಅಂತರವನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ಸಂಪರ್ಕ ಹೆಚ್ಚಿರುವುದರಿಂದ ಶಿಕ್ಷಣ, ಆರೋಗ್ಯ, ಕೃಷಿ, ಉದ್ಯೋಗ, ಬ್ಯಾಂಕಿಂಗ್ ಮತ್ತು ಸರ್ಕಾರಿ ಸೇವೆಗಳನ್ನು ಜನರು ಸುಲಭವಾಗಿ ಪಡೆಯಲು ಸಾಧ್ಯವಾಗಲಿದೆ. ಇನ್ನು 80ನೇ ಸ್ವಾತಂತ್ರ್ಯ ದಿನಾಚರಣೆಯ ಸುಸಂದರ್ಭದಲ್ಲಿ ಬಿಎಸ್ಎನ್ಎಲ್ ಕೈಗೊಂಡಿರುವ ಈ ಹೊಸ ಉಪಕ್ರಮಗಳು ಡಿಜಿಟಲ್ ಭಾರತದ ಗುರಿಯನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಿವೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಿಜಿಎಮ್ ಮೊಬೈಲ್ ನ ವೆಂಕಟೇಶ್ವರಲು, ಟೋಪನ್ ಮೈಥನ್, ದೀಪಕ್ ಅಗರ್ವಾಲ್, ದೀಪಕ್ ಶರ್ಮಾ ಪಾರ್ಥಸಾರಥಿ ಹಾಗೂ ಅಶೋಕ್ ಕಲ್ಲರ್ ಸೇರಿದಂತೆ ಬಿಎಸ್ಎನ್ಎಲ್ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಕಾರ್ಮಿಕ ವರ್ಗದವರು ಭಾಗವಹಿಸಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon