ಗದಗ ಜಿಲ್ಲೆಯಿಂದ ಮೊದಲ ನರ್ಸಿಂಗ್ ಡಾಕ್ಟರೇಟ್ ಪದವೀಧರರಾಗಿ ಹೊರಹೊಮ್ಮಿದ ಡಾ ಸ್ಟೀಫನ್ ಜಾನ್

WhatsApp
Telegram
Facebook
Twitter
LinkedIn

ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ವಾರ್ಷಿಕ ಘಟಿಕೋತ್ಸವದಲ್ಲಿ ಗದಗದ ಕೆ. ಎಚ್ ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನರ್ಸಿಂಗ್ ವಿಭಾಗದ ಹೆಚ್.ಒ.ಡಿ ಡಾ ಸ್ಟೀಫನ್ ಜಾನ್ ಡಾಕ್ಟರೇಟ್ ಪದವಿಯನ್ನು ಸ್ವೀಕರಿಸಿದ್ದಾರೆ.

ಇವರು ಡಾಕ್ಟರೇಟ್ ಪದವಿ ಪಡೆದ ಕರ್ನಾಟಕದ ಮೊದಲ ನರ್ಸಿಂಗ್ ಆಫೀಸರ್ ಆಗಿದ್ದಾರೆ. ನರ್ಸಿಂಗ್ ಕ್ಷೇತ್ರದಲ್ಲಿ ಗದಗ ಜಿಲ್ಲೆಯಿಂದ ಪಿ.ಹೆಚ್.ಡಿ ಪಡೆದ ಮೊದಲಿಗರೂ ಆಗಿದ್ದಾರೆ. ಸ್ಟೀಫನ್ ಜಾನ್ ಅವರು ಹುಬ್ಬಳಿಯ ಕಿಮ್ಸ್ ನಲ್ಲಿ ಬಿ.ಎಸ್.ಸಿ ನರ್ಸಿಂಗ್ ಪದವಿಯನ್ನು ಪೂರೈಸಿದ್ದು, ಎಂ.ಎಸ್.ಸಿ ಯನ್ನು ಬೆಂಗಳೂರಿನ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಪಡೆದಿದ್ದಾರೆ. ಎಂ.ಫಿಲ್ ಪದವಿಯನ್ನು ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ ಮೂಲಕ ಪಡೆದಿದ್ದಾರೆ. ಈಗ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದು ವಿಶೇಷ ಸಾಧನೆ ಮಾಡಿದ್ದಾರೆ.

ವೈದ್ಯಕೀಯವಾಗಿ ಸಾಕಷ್ಟು ಹಿಂದುಳಿದಿರುವ ಗದಗ ಜಿಲ್ಲೆಯಲ್ಲಿ ತಮ್ಮ ಶಕ್ತಿಗೂ ಮೀರಿ ಸೇವೆಯನ್ನು ಸ್ಟೀಫನ್ ಜಾನ್ ಸಲ್ಲಿಸುತ್ತಿದ್ದು, ತಮ್ಮ ವೃತ್ತಿ ಜೀವನದ ಮೊದಲ ಹೆಜ್ಜೆಯಾದ ಮೆಡಿಕಲ್ ಆಫೀಸರ್ ಹುದ್ದೆಯಲ್ಲಿಯೇ ಉತ್ತಮ ಸೇವೆಯನ್ನು ಸಲ್ಲಿಸಿ ಹಿರಿಯ ಅಧಿಕಾರಿಗಳ ಶ್ಲಾಘನೆಗೆ ಪಾತ್ರರಾಗಿದ್ದರು. ನಂತರ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಾಧ್ಯಾಪಕರಾಗಿ ವಿದ್ಯಾರ್ಥಿಗಳಿಗೆ ಮೇಲ್ಪಂಕ್ತಿ ಹಾಕಿ ಕೊಡುವ ಕೆಲಸದಲ್ಲಿ ನಿರತರಾಗಿ ಅಲ್ಲೂ ತಮ್ಮ ಸೇವೆಗೆ ಶಿಕ್ಷಣಶ್ರೀ ಮತ್ತು ಸೇವಸಿಂಧು ಪ್ರಸ್ತಿಗಳನ್ನು ಸ್ವೀಕರಿಸಿದ್ದಾರೆ.

2023 ರಲ್ಲಿ ನರ್ಸಿಂಗ್ ಕ್ಷೇತ್ರದ ಶೈಕ್ಷಣಿಕ ಸಾಧನೆಗಾಗಿ ಡಾ ಸರ್ವಪಲ್ಲಿ ರಾಧಾಕೃಷ್ಣ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿನ ನಿಸ್ವಾರ್ಥ ಸಾಧನೆಗಾಗಿ 2024 ರಲ್ಲಿ ಯಂಗ್ ಅಚಿವರ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಕೇಂದ್ರ ಸರ್ಕಾರದ ಎಂ.ಎಸ್.ಎಂ.ಇ ಇಲಾಖೆಯಿಂದ ಇನ್ಸ್ಪಿರೇಷನಲ್ ಟೀಚರ್ ಅವಾರ್ಡ್ ಗೆ ಕೂಡ ಭಾಜನರಾಗಿರುವುದು ಅವರ ನರ್ಸಿಂಗ್ ಶಿಕ್ಷಣದ ಕುರಿತ ಅವರ ಆಸ್ಥೆಗೆ ಕೈಗನ್ನಡಿಯಾಗಿದೆ.

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon