ವಿಧಾನ ಪರಿಷತ್ ಚುನಾವಣೆ 2026: ಪಕ್ಷ ನಿಷ್ಠೆ, ಸಂಘಟನಾ ಚಾತುರ್ಯಕ್ಕೆ ಕಾಂಗ್ರೆಸ್, ಬಿಜೆಪಿ ಶಾಸಕರ ಮಣೆ

WhatsApp
Telegram
Facebook
Twitter
LinkedIn

ಲೇಖನ: ಸನತ್ ದೇಸಾಯಿ

ವಿಧಾನಸಭಾ ಸದಸ್ಯರಿಂದ ವಿಧಾನ ಪರಿಷತ್ ಗೆ ಸದಸ್ಯರನ್ನು ಆಯ್ಕೆ ಮಾಡುವ ಚುನಾವಣಾ ಪ್ರಕ್ರಿಯೆ ಸಂಪೂರ್ಣವಾಗಿ ಪೂರ್ಣಗೊಂಡಿದ್ದು, ಕಾಂಗ್ರೆಸ್, ಬಿಜೆಪಿ ಪಕ್ಷಗಳಿಂದ ಒಟ್ಟು 7 ಸದಸ್ಯರು ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ಇವರಲ್ಲಿ ಬಹುತೇಕರನ್ನು ಪಕ್ಷ ನಿಷ್ಠೆ, ಸಂಘಟನಾ ಚಾತುರ್ಯ ವನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ ಎಂದರೆ ತಪ್ಪಾಗಲಾರದು

ಮುಖ್ಯವಾಗಿ ಹಿರಿಯ ಕಾಂಗ್ರೆಸ್ ಮುಖಂಡ ತಿಪ್ಪಣ್ಣಪ್ಪ ಕಮಕನೂರ್, ಪಿ.ವಿ ಮೋಹನ್ ಮತ್ತು ಬಿ.ಜೆ.ಪಿಯ ಆರ್.ರಘು ಕೌಟಿಲ್ಯ ಅವರುಗಳು ಹೈಕಮಾಂಡ್ ಮಟ್ಟದಲ್ಲಿ ತಮ್ಮ ಪಕ್ಷ ನಿಷ್ಠೆಯನ್ನು ಗುರುತಿಸಿಕೊಂಡು ಹಲವು ಚುನಾವಣೆಗಳಲ್ಲಿ ತಮ್ಮ ಸಂಘಟನಾ ಚಾತುರ್ಯದಿಂದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬಂದಿರುವುದನ್ನು ಇಲ್ಲಿ ಗುರುತಿಸಲಾಗಿದೆ. ಇನ್ನೂ ಶಾಸಕರು ಸಹ ಈ ಮೂವರ ಮೇಲೆ ವಿಶ್ವಾಸವನ್ನು ಇಟ್ಟು ಅತಿ ಹೆಚ್ಚು ಮೊದಲ ಪ್ರಾಶ್ಯಸ್ಥದ ಮತಗಳನ್ನು ನೀಡಿರುವುದು ಸಹ ಅವರುಗಳ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಚುನಾವಣೆಯಲ್ಲಿ ಎರಡನೇ ಪ್ರಾಶ್ಯಸ್ಥದ ಮತ ಎಣಿಕೆಯೇ ಅಪ್ರಸ್ತುತವಾಗಿರುವುದು ಈ ಎರಡೂ ವಿಚಾರಗಳಿಗೆ ಮತ್ತು ಅಭ್ಯರ್ಥಿಗಳ ಮೇಲಿನ ವಿಶ್ವಾಸಕ್ಕೆ ಸಾಕ್ಷಿಯಾಗಿದೆ.

ಕಮಕನೂರ್ ಮತ್ತು ಪಿ.ವಿ ಮೋಹನ್ ಅವರುಗಳು 30 ಮತ್ತು 29 ಮತ ಪಡೆದು ತಮ್ಮ ಮತ್ತು ಶಾಸಕರ ಶಿಸ್ತು ಪಾಲನೆಗೆ ಮಾದರಿಯಾಗಿದ್ದಾರೆ. ಇನ್ನು ಇದೇ ಹಾದಿಯಲ್ಲಿ ರಘು ಕೌಟಿಲ್ಯ ಅವರು ಕೂಡ 29 ಮತ ಪಡೆದು ಗೆಲುವಿನ ನಗೆ ಬೀರಿದ್ದಾರೆ. ಕಮಕನೂರ್ ಮತ್ತು ಪಿ.ವಿ ಮೋಹನ್ ಅವರುಗಳ ಗೆಲುವಿನಲ್ಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರ ಪಾತ್ರ ಕೂಡ ಹಿಡಿದಾಗಿದೆ. ಇನ್ನು ರಘು ಕೌಟಿಲ್ಯ ಅವರ ಗೆಲುವಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರುಗಳ ಚಾಣಾಕ್ಷ ನಡೆ ಇದೆ.

ಇನ್ನು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಶಾಸಕರಿಂದ ಅಡ್ಡ ಮತದಾನ ಕೂಡ ನಡೆದಿದ್ದು ಇದು ಬಿಜೆಪಿಯ ರಘು ಕೌಟಿಲ್ಯ ಅವರ ಗೆಲುವಿಗೆ ಯಾವುದೇ ತೊಂದರೆ ಮಾಡಿಲ್ಲ. ಈ ಕುರಿತು ಮಾತನಾಡಿರುವ ಕೌಟಿಲ್ಯ ಅವರು ಪಕ್ಷದ ನಾಯಕರಿಗೆ ಧನ್ಯವಾದಗಳು ನನ್ನ ಆರಾಧ್ಯ ದೈವ ವಾದ ಬಿಎಸ್ ಯಡಿಯೂರಪ್ಪ ಅವರಿಗೆ ಆಭಾರಿಯಾಗಿದ್ದೇನೆ ಹಿಂದುಳಿದ ವರ್ಗಗಳ ಧ್ವನಿಯಾಗಿ ಸದನದ ಹೊರಗೆ ಮತ್ತು ಒಳಗೆ ಹೋರಾಟ ಮಾಡುತ್ತೇನೆ ಎಂದಿದ್ದಾರೆ.

ನನ್ನ ಗೆಲುವನ್ನು ಕಾರ್ಯಕರ್ತರಿಗೆ ಅರ್ಪಿಸುತ್ತೇನೆ ಸಂಘಟಕರ ಕೋಟದಲ್ಲಿ ನನಗೆ ಪರಿಷತ್ ಟಿಕೆಟ್ ಸಿಕ್ಕಿತ್ತು. ಕೇರಳ ತಮಿಳುನಾಡಿನ ಚುನಾವಣೆಗಳಲ್ಲಿ ಕೆಲಸ ಮಾಡಿದ್ದೆ. ಹಾಗಾಗಿ ವರಿಷ್ಠರು ಅವಕಾಶ ನೀಡಿದ್ದಾರೆ ಎಂದು ಪಿ.ವಿ ಮೋಹನ್ ಹೇಳಿದ್ದಾರೆ. ತಿಪ್ಪಣ್ಣಪ್ಪ ಕಮಕೂರು ಅವರು ಮಾತನಾಡಿ ನನ್ನ ಕೆಲಸ ನೋಡಿ ಶಾಸಕರು ಮತ ನೀಡುವ ಭರವಸೆ ನೀಡಿದ್ದರು. ಮುಂದಿನ ದಿನಗಳಲ್ಲಿ ಸಾಮಾಜಿಕ ನ್ಯಾಯ ಸಿಗುವಂತೆ ಕೆಲಸ ಮಾಡುವೆ. ಬಡವರು, ಶ್ರಮಿಕರು ಹಿಂದುಳಿದವರ ಧ್ವನಿಯಾಗಿ ನಿಲ್ಲುತ್ತೇನೆ ಎಂದು ತಿಳಿಸಿದ್ದಾರೆ.

 

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon