ಸ್ಟಾಕ್ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಸುಪ್ರೀಂಕೋರ್ಟ್ ನಿಂದ ಸಮಿತಿ ರಚನೆ: ಪಿ.ಪಿ. ಹೆಗಡೆ

WhatsApp
Telegram
Facebook
Twitter
LinkedIn

ಬೆಂಗಳೂರು: ಕ್ರಿಮಿನಲ್ ಪ್ರಕರಣಗಳ ತನಿಖೆ ಹಾಗೂ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಪದೇಪದೇ ಸಾಕ್ಷಿಗಳಾಗಿ ಬಳಸಲಾಗುವ ಸ್ಟಾಕ್ ಸಾಕ್ಷಿಗಳ ಪದ್ಧತಿಯನ್ನು ಪರಿಶೀಲಿಸಿ, ಸಾಕ್ಷ್ಯಾಧಾರ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಸುಪ್ರೀಂಕೋರ್ಟ್ ರಚಿಸಿರುವ ಸ್ಟಾಕ್ ಸಾಕ್ಷಿಗಳ ಸುಧಾರಣಾ ಸಮಿತಿ-2026 ತನ್ನ ಕಾರ್ಯಚಟುವಟಿಕೆಗಳನ್ನು ಚುರುಕುಗೊಳಿಸಿದೆ ಎಂದು ಸಮಿತಿಯ ಸದಸ್ಯ, ಹಿರಿಯ ವಕೀಲ ಪಿ.ಪಿ. ಹೆಗಡೆ ತಿಳಿಸಿದರು.

ಗುರುವಾರ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸ್ಟಾಕ್ ಸಾಕ್ಷಿಗಳ ಸಮಿತಿಯ ಸದಸ್ಯ ಹಾಗೂ ಹಿರಿಯ ವಕೀಲ ಪಿ.ಪಿ. ಹೆಗಡೆ ಮಾತನಾಡಿ, ಸ್ಟಾಕ್ ಸಾಕ್ಷಿಗಳ ಪರಿಕಲ್ಪನೆ, ಅದರ ದುರ್ಬಳಕೆಯಿಂದ ಉಂಟಾಗಬಹುದಾದ ಸಮಸ್ಯೆಗಳು, ತನಿಖಾ ಪ್ರಕ್ರಿಯೆಯಲ್ಲಿ ಸಾಕ್ಷಿಗಳ ಆಯ್ಕೆ ಮತ್ತು ಪರಿಶೀಲನೆಯ ಅಗತ್ಯತೆ ಹಾಗೂ ನ್ಯಾಯಯುತ ವಿಚಾರಣೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ಸಮಿತಿ ಮಹತ್ವದ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.

ವಿವಿಧ ಕ್ರಿಮಿನಲ್‌ ಪ್ರಕರಣಗಳಲ್ಲಿ ಒಂದೇ ವ್ಯಕ್ತಿಗಳನ್ನು ಪದೇಪದೇ ಸಾಕ್ಷಿಗಳಾಗಿ ಬಳಸುವ ಪ್ರವೃತ್ತಿ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಈ ವಿಚಾರಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಘಟನೆಯ ಸಂದರ್ಭದಲ್ಲಿ ನಿಜವಾಗಿಯೂ ಸ್ಥಳದಲ್ಲಿದ್ದರೇ? ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಗೆ ನೇರವಾದ ಮಾಹಿತಿ ಇದೆಯೇ? ಸಾಕ್ಷಿಯಾಗಿ ಅವರನ್ನು ದಾಖಲಿಸುವ ಅಗತ್ಯವಿದೆಯೇ? ಎನ್ನುವ ಅಂಶಗಳನ್ನು ತನಿಖಾ ಹಂತದಲ್ಲಿಯೇ ಸಮರ್ಪಕವಾಗಿ ಪರಿಶೀಲಿಸುವ ವ್ಯವಸ್ಥೆ ರೂಪಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಒಬ್ಬ ವ್ಯಕ್ತಿ ಹಲವು ಪ್ರಕರಣಗಳಲ್ಲಿ ಸಾಕ್ಷಿಯಾಗಿರುವುದರಿಂದ ಮಾತ್ರ ಅವರನ್ನು ಅವಿಶ್ವಾಸಾರ್ಹ ಸಾಕ್ಷಿ ಎಂದು ಪರಿಗಣಿಸುವುದು ಸಮಿತಿಯ ಉದ್ದೇಶವಲ್ಲ. ಬದಲಾಗಿ, ಸಾಕ್ಷಿಯ ನೈಜತೆ, ವಿಶ್ವಾಸಾರ್ಹತೆ ಹಾಗೂ ಪ್ರಕರಣಕ್ಕೆ ಅವರ ಸಂಬಂಧವನ್ನು ಕಾನೂನುಬದ್ಧ ರೀತಿಯಲ್ಲಿ ಪರಿಶೀಲಿಸುವ ವ್ಯವಸ್ಥೆ ರೂಪಿಸುವುದು ಸಮಿತಿಯ ಆಶಯವಾಗಿದೆ. ತನಿಖಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಅಗತ್ಯವಾಗಿದೆ. ಪರಿಶೀಲಿಸದ ಅಥವಾ ಕೃತಕವಾಗಿ ಸೃಷ್ಟಿಸಲಾದ ಸಾಕ್ಷ್ಯಾಧಾರಗಳು ನ್ಯಾಯಾಂಗ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದರು.

ಅವಿಶ್ವಾಸಾರ್ಹ ಸಾಕ್ಷಿಗಳಿಂದ ನಿರಪರಾಧಿಗಳಿಗೆ ಅನ್ಯಾಯವಾಗುವುದರ ಜೊತೆಗೆ, ನೈಜ ಅಪರಾಧ ಪ್ರಕರಣಗಳಲ್ಲಿಯೂ ತನಿಖೆಯ ಗುಣಮಟ್ಟ ಕುಸಿಯುವ ಅಪಾಯವಿದೆ. ಆದ್ದರಿಂದ ಪೊಲೀಸ್‌ ತನಿಖಾಧಿಕಾರಿಗಳು, ಪ್ರಾಸಿಕ್ಯೂಷನ್‌ ಅಧಿಕಾರಿಗಳು, ವಕೀಲರು ಹಾಗೂ ನ್ಯಾಯಾಂಗ ವ್ಯವಸ್ಥೆಯ ನಡುವೆ ಸಮನ್ವಯದೊಂದಿಗೆ ಸಾಕ್ಷಿಗಳ ಗುರುತಿಸುವಿಕೆ, ದಾಖಲಾತಿ ಮತ್ತು ಪರಿಶೀಲನೆಗೆ ಸ್ಪಷ್ಟವಾದ ಮಾರ್ಗಸೂಚಿಗಳನ್ನು ರೂಪಿಸುವುದು ಮಹತ್ವವಾಗಿದೆ ಎಂದು ಪಿ.ಪಿ. ಹೆಗಡೆ ತಿಳಿಸಿದರು.

ವಕೀಲ ಪುರುರಾಜ್ ಅಗರವಾಲ್ ಮಾತನಾಡಿ, ವಿಶ್ವಾಸಾರ್ಹ ಸಾಕ್ಷಿಗಳು, ವಿಶ್ವಾಸಾರ್ಹ ನ್ಯಾಯ ಎನ್ನುವ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸಮಿತಿಯ ಪ್ರಮುಖ ಉದ್ದೇಶ ತನಿಖೆಯ ಆರಂಭಿಕ ಹಂತದಲ್ಲಿಯೇ ನೈಜ ಹಾಗೂ ವಿಶ್ವಾಸಾರ್ಹ ಸಾಕ್ಷಿಗಳನ್ನು ಗುರುತಿಸುವುದು ಮತ್ತು ಸಾಕ್ಷಿಗಳ ಪರಿಶೀಲನಾ ವ್ಯವಸ್ಥೆಯನ್ನು ಬಲಪಡಿಸುವುದಾಗಿದೆ ಎಂದರು.

ಸುಪ್ರೀಂ ಕೋರ್ಟ್ ರಚಿಸಿರುವ ಸಮಿತಿಯ ವತಿಯಿಂದ ಸೆ. 5 ಮತ್ತು 6ರಂದು ಬೆಂಗಳೂರಿನ ಕರ್ನಾಟಕ ನ್ಯಾಯಾಂಗ ಅಕಾಡೆಮಿಯಲ್ಲಿ ದಕ್ಷಿಣ ವಲಯ ಸಮಾಲೋಚನೆ ನಡೆಯಲಿದೆ. ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಹಾಗೂ ಪುದುಚೇರಿ ಪ್ರತಿನಿಧಿಗಳು ಈ ಸಮಾಲೋಚನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಪೊಲೀಸ್ ಅಧಿಕಾರಿಗಳು, ತನಿಖಾಧಿಕಾರಿಗಳು, ಪ್ರಾಸಿಕ್ಯೂಷನ್ ಅಧಿಕಾರಿಗಳು, ಬಚಾವು ವಕೀಲರು ಹಾಗೂ ನ್ಯಾಯಾಂಗ ಅಧಿಕಾರಿಗಳೊಂದಿಗೆ ವಿವಿಧ ಹಂತಗಳಲ್ಲಿ ಚರ್ಚೆ ನಡೆಯಲಿದ್ದು, ಪ್ರಸ್ತುತ ವ್ಯವಸ್ಥೆಯಲ್ಲಿರುವ ಸಮಸ್ಯೆಗಳನ್ನು ಗುರುತಿಸಿ, ಕೆಳಮಟ್ಟಣದಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಬಹುದಾದ ಸುಧಾರಣೆಗಳ ಕುರಿತು ಶಿಫಾರಸ್ಸುಗಳನ್ನು ರೂಪಿಸುವುದು ಸಮಾಲೋಚನೆಯ ಪ್ರಮುಖ ಉದ್ದೇಶವಾಗಿದೆ ಎಂದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon