ಇಂಡಿಯನ್ ಎಕ್ಸ್ಪ್ರೆಸ್ ಕಾರ್ಗೋ ಕಂಪನಿಗೆ ಗೋಲ್ಡನ್ ಸ್ಟಾರ್ ಅವಾರ್ಡ್

WhatsApp
Telegram
Facebook
Twitter
LinkedIn

ಬೆಂಗಳೂರು: ಎಲಿಮಾ ಕೊಲ್ಕತ್ತಾ ಮತ್ತು ಇಂದಿರಾ ವಿಶ್ವವಿದ್ಯಾಲಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಗೋಲ್ಡನ್ ಸ್ಟಾರ್ ಅವಾರ್ಡ್ಸ್ ಸಮಾರಂಭದಲ್ಲಿ ಇಂಡಿಯನ್ ಎಕ್ಸ್ಪ್ರೆಸ್ ಕಾರ್ಗೋ ಕಂಪನಿಗೆ ಪ್ರಶಸ್ತಿ ದೊರೆತಿದೆ.

ಗುರುವಾರ ಖಾಸಗಿ ಹೋಟೆಲ್ ನಡೆದ ಭವ್ಯ ಕಾರ್ಯಕ್ರಮದಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್‌ ಕಾರ್ಗೋ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸುಧಾಕರ್ ಕುಂದರ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಜತೆಗೆ ಅವರಿಗೆ ಈ ವರ್ಷದ ಬ್ಯುಸಿನೆಸ್ ಲೀಡರ್ ಆಪ್ ದಿ ಇಯರ್ ಪ್ರಶಸ್ತಿಯನ್ನು ಸಹ ನೀಡಿ ಗೌರವಿಸಲಾಗಿದೆ. ಗೋಲ್ಡನ್ ಸ್ಟಾರ್ ಪ್ರಶಸ್ತಿ ಕೂಡ ಲಾಜಿಸ್ಟಿಕ್ ಸೇವೆಗೆ ನೀಡುವ ಪ್ರಶಸ್ತಿಯಾಗಿದ್ದು, ಬಹಳ ಪರಿಣಾಮಕಾರಿಯಾದ ಅವಾರ್ಡ್ ಇದಾಗಿದೆ. ಈ ಸಂದರ್ಭದಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಕಾರ್ಗೋ ಸಹ ಸಂಸ್ಥಾಪಕ ವಿ.ಪ್ರಭಾಕರನ್ ಕೂಡ ಉಪಸ್ಥಿತರಿದ್ದರು.

ಸುಧಾಕರ್ ಕುಂದರ್ ಅವರ ಕುಟುಂಬ ಮತ್ತು ಸ್ನೇಹ ಬಳಗದವರು ಪ್ರಶಸ್ತಿ ಸ್ವೀಕಾರದ ಸಂದರ್ಭದಲ್ಲಿ ಹಾಜರಿದ್ದರು. ಈ ವೇಳೆ ಅತ್ಯಂತ ಕರುಣಾಮಯಿ, ಸದಾ ನಗುಮುಖದ ಹಾಗೂ ಶ್ರಮಜೀವಿ ವ್ಯಕ್ತಿಯಾದ ಸುಧಾಕರ್ ಕುಂದರ್ ಅವರ ಕಾರ್ಯವೈಖರಿಗೆ ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದರು. ತಮ್ಮತ್ತ ಹರಿದುಬರುವ ಪ್ರತಿಯೊಂದು ಜವಾಬ್ದಾರಿಯನ್ನೂ ಅತ್ಯಂತ ಪ್ರಾಮಾಣಿಕತೆ, ಗೌರವ ಹಾಗೂ ಸಂಪೂರ್ಣ ಸಮರ್ಪಣಾ ಭಾವದಿಂದ ಪೂರೈಸುವ ಅವರ ಶ್ರದ್ಧೆಗೆ ಪ್ರಶಸ್ತಿ ದೊರೆತಿದೆ ಎಂದು ಮನಸಾರೆ ಕೊಂಡಾಡಿದರು.

ನಿಗದಿತ ಗುರಿಯನ್ನು ತಲುಪುವಲ್ಲಿ ಪ್ರದರ್ಶಿಸುವ ನಿರಂತರ ಪ್ರಯತ್ನ ಮತ್ತು ಕಾರ್ಯಕ್ಷಮತೆ ಸುಧಾಕರ್ ಅವರ ಹೆಗ್ಗುರುತಾಗಿದೆ. ಇದು ಅವರ ಹೊಸ ಉದ್ಯಮವಾಗಿದ್ದು, ನೂತನ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಸದಾ ಗುಣಮಟ್ಟದ ಸೇವೆ ಹಾಗೂ ಜನಪರ ಧೋರಣೆಗೆ ಆದ್ಯತೆ ನೀಡುತ್ತಿರುವ ಸಂಸ್ಥೆಯು ವಾಣಿಜ್ಯ ಕ್ಷೇತ್ರದಲ್ಲಿ ಅತ್ಯಂತ ವೇಗವಾಗಿ ಬೆಳೆದು ದೊಡ್ಡ ಮಟ್ಟದ ಯಶಸ್ಸು ಗಳಿಸಲಿದೆ ಎಂದು ಹಾರೈಸಿದರು.

ಪ್ರಶಸ್ತಿ ಪಡೆದು ಹೊಸ ಹಾದಿಯಲ್ಲಿ ಹೆಜ್ಜೆ ಇಡುತ್ತಿರುವ ಸುಧಾಕರ್ ಕುಂದರ್ ಅವರಿಗೆ ಆತ್ಮೀಯರಿಂದ ಹೃದಯಪೂರ್ವಕ ಶುಭಹಾರೈಕೆಗಳು ಹರಿದುಬರುತ್ತಿದ್ದು, ಮುಂಬರುವ ದಿನಗಳಲ್ಲಿ ಅವರ ಸಕಲ ಪ್ರಯತ್ನಗಳಿಗೂ ದೈವಾನುಗ್ರಹ ಹಾಗೂ ಅಭಿವೃದ್ಧಿ ಲಭಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.

 

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon