ಬೆಂಗಳೂರು: ಭಾರತ ಕಲಾ ಗ್ರಾಮದ ವತಿಯಿಂದ ಎರಡು ದಿನಗಳ ಕಾಲ ಭಾರತದ ಪ್ರತಿಷ್ಠಿತ ನೃತ್ಯ ಉತ್ಸವವಾದ ನೃತ್ಯ ವಸಂತಮ್ ನಯನ ಸಭಾಂಗಣದಲ್ಲಿ ನಡೆಯಲಿದೆ.
ನಾಟ್ಯಾಚಾರ್ಯ ಡಾ.ವಸಂತ ಕಿರಣ್ ರಾಯಸಂ ಅವರ ನೇತೃತ್ವದಲ್ಲಿ ನೃತ್ಯ ವಸಂತಮ್ ನಡೆಯಲಿದ್ದು, ಕೇರಳದ ಪದ್ಮಶ್ರೀ ವಿಮಲಾ ಮೆನನ್, ದೆಹಲಿಯ ಸಂಗೀತ ನಾಟಕ ಆಕಾಡೆಮಿಯ ಪದ್ಮಶ್ರೀ ಗುರು ಜಯರಾಂ ರಾವ್, ವನ ಶ್ರೀ ರಾವ್, ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ವಿಜೇತೆ ಡಾ.ವಸುಂಧರೆ ದೊರೆಸ್ವಾಮಿ, ತಮಿಳುನಾಡಿನ ಪದ್ಮಶ್ರೀ ವೈರಲ್ ಮಲೈ ಮುತ್ತು ಕನ್ನಮಾಲ್ ಮತ್ತಿತರರು ಉತ್ಸವದಲ್ಲಿ ಭಾಗವಹಿಸಲಿದ್ದಾರೆ.
ಮುದ್ದೇನಹಳ್ಳಿಯ ಸತ್ಯಸಾಯಿ ವಿಶ್ವವಿದ್ಯಾಲಯದ ರೇವತಿ ರಾಮಚಂದ್ರನ್, ಪರಿಸರವಾದಿ ರೇವತಿ ಕಾಮತ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸೆಪ್ಟೆಂಬರ್ 6 ರಂದು ಸಂಜೆ ಕಂಸ ವಧೆ ಯಕ್ಷಗಾನ ಪ್ರದರ್ಶನ, ಅತುಲ್ ಬಾಲು ಮತ್ತು ಶಮಂತಕ್ ಅವರಿಂದ ಭರತ ನಾಟ್ಯ, ಶರವಣ ತೆರ್ಲಾ, ಪವನ್ ಚಕ್ರತುಲಾ, ಮಲ್ಲಿಕಾರ್ಜುನ ಬಾಚ್ಲಾ ಅವರಿಂದ ಕುಚುಪಡಿ ನೃತ್ಯ ಪ್ರದರ್ಶನ ನಡೆಯಲಿದೆ ಎಂದು ಭಾರತ ಕಲಾ ಗ್ರಾಮ ನಿರ್ದೇಶಕಿ ಡಾ.ವಸಂತ ಕಿರಣ್ ರಾಯಸಮ್ ತಿಳಿಸಿದ್ದಾರೆ.















