ಬೆಂಗಳೂರು: 17ನೇ ರಾಜ್ಯಮಟ್ಟದ ದ್ವಿಚಕ್ರ ಮೆಕ್ಯಾನಿಕ್ಸ್ ಬೃಹತ್ ಸಮಾವೇಶ ಮತ್ತು ಕಾರ್ಮಿಕ ದಿನಾಚರಣೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಶುಕ್ರವಾರ ನಡೆಯಿತು.
ಮೇ1 ರಂದು ಬೆಂಗಳೂರು ಪ್ಯಾಲೇಸ್ ಗೇಟ್ ನಂ 5, ಕಿಂಗ್ಸ್ ಕೋರ್ಟ್ ನಲ್ಲಿ ಅಖಿಲ ಭಾರತ ರಾಜ್ಯಮಟ್ಟದ ದ್ವಿಚಕ್ರ ಮಾಲೀಕ, ತಂತ್ರಜ್ಞರಿಂದ ಬೃಹತ್ ಮಟ್ಟದ ಸಮಾವೇಶ ಆಯೋಜಿಸಲಾಗಿತ್ತು 10 ರಿಂದ 15 ಸಾವಿರ ಜನರು ಸಮಾವೇಶದಲ್ಲಿ ಭಾಗವಹಿಸಿ ಕೌಶಲ್ಯ ವೃದ್ಧಿ, ಹೊಸ ಆವಿಷ್ಕಾರ ಪರಿಚಯ ದ್ವಿಚಕ್ರ ಉಚಿತ ಸೇವಾ ಶಿಬಿರ, ಉದ್ಯಮ ಜಾಲ ನಿರ್ಮಾಣ ಕುರಿತು ಮಾಹಿತಿ ಪಡೆದರು.
ಸಮಾವೇಶದಲ್ಲಿ ನೂರಕ್ಕೂ ಅಧಿಕ ಮೆಕಾನಿಕಲ್ ವಲಯ,ದ್ವಿಚಕ್ರ ಉಪಕರಣಗಳ ಮಳಿಗೆ ಗ್ರಾಹಕರ ಆಕರ್ಷಣೆಯಾಗಿದ್ದವು,ಮೆಕಾನಿಕ್ ಗ್ರಾಹಕರು ಮಾಹಿತಿ ಪಡೆದರು.
ಕರ್ನಾಟಕ ದ್ವಿಚಕ್ರವಾಹನ ಕಾರ್ಯಾಗಾರ ಮಾಲೀಕರು ಮತ್ತು ತಂತ್ರಜ್ಞರ ಸಂಘದ ಕಾರ್ಯದರ್ಶಿ ಭಾಸ್ಕರ್. ಜಿ. ನಾಯ್ಡು ಮಾಧ್ಯಮಗಳ ಜೊತೆ ಮಾತನಾಡಿ, ದೇಶದ ಎಲ್ಲಾ ಮೆಕ್ಯಾನಿಕ್ ಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಅವರ ಕಲ್ಯಾಣ, ಕೌಶಲ್ಯಾಭಿವೃದ್ಧಿ ಮತ್ತು ವೃತ್ತಿಪರ ಗುರುತಿಗಾಗಿ ಈ ಸಮಾವೇಶ ನಡೆಸಲಾಗಿದ್ದು, ಸಾವಿರಾರು ಮಂದಿ ಗ್ರಾಹಕರು, ಮೆಕ್ಯಾನಿಕ್ ಗಳು ಭಾಗವಹಿಸಿ ಮಾಹಿತಿ ಪಡೆದು ಇದರ ಪ್ರಯೋಜನ ಪಡೆದುಕೊಂಡರು ಎಂದು ತಿಳಿಸಿದರು.














