ಬೇಕರಿ ಕಾಂಡಿಮೆಂಟ್ಸ್, ಬೀಡಾ, ಸಣ್ಣ ಉದ್ಯಮಿಗಳ ಮೇಲೆ ವೃಥಾ ಪ್ರಹಾರ ನಿಲ್ಲಿಸಿ: ಡಾ.ರವಿ ಶೆಟ್ಟಿ ಬೈಂದೂರ್

WhatsApp
Telegram
Facebook
Twitter
LinkedIn

ಬೆಂಗಳೂರು: ಬೇಕರಿ ಕಾಂಡಿಮೆಂಟ್ಸ್, ಬೀಡಾ ಮತ್ತು ಸಣ್ಣ ಉದ್ಯಮಿಗಳ ಮೇಲೆ ಅಧಿಕಾರಿಗಳು ನಡೆಸುವ ದರ್ಪ ನಿಲ್ಲಬೇಕು, ಕೋಟಾ ಕಾಯ್ದೆಯ ಹೆಸರಿನಲ್ಲಿ ನಮ್ಮ ಮೇಲೆ ನಡೆಯುವ ದೌರ್ಜನ್ಯ ನಿಲ್ಲಿಸಿ ಪುಡಿ ರೌಡಿಗಳ ಉಪಟಳಕ್ಕೆ ಕಡಿವಾಣ ಹಾಕಬೇಕು ಎಂದು ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ರವಿ ಶೆಟ್ಟಿ ಬೈಂದೂರು ಒತ್ತಾಯಿಸಿದರು.

ಸೋಮವಾರ ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಧಿಕಾರಿಗಳ ದೌರ್ಜನ್ಯ ಮುಂದುವರೆದರೆ ಬದುಕಲು ಅವಕಾಶ ಕೊಡಿ ಇಲ್ಲ ಒಂದು ತೊಟ್ಟು ವಿಷಕೊಡಿ ಎನ್ನುವವರಿದ್ದೇವೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತು ಸ್ವಾಭಿಮಾನಿ ಬೇಕರಿ ಕಾಂಡಿಮೆಂಟ್ಸ್, ಬೀಡಾ ಅಂಗಡಿ, ಸಣ್ಣ ಉದ್ಯಮಿಗಳು ಹಾಗೂ ಬೀದಿ ಬದಿ ವ್ಯಾಪಾರಿಗಳ ವಿಭಾಗದಿಂದ ಇದೇ 18 ರಂದು ಅನಿರ್ದಿಷ್ಟಾವಧಿ ಮುಷ್ಕರವನ್ನು  ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.

ಸಣ್ಣ ಉದ್ದಿಮೆದಾರರಿಗೆ ಆಗುತ್ತಿರುವ ಸಮಸ್ಯೆ ಜನವಿರೋಧಿಯಾಗಿದೆ. ಈ ಹಿನ್ನಲೆಯಲ್ಲಿ 58 ಸಾವಿರ ಸಣ್ಣ ಉದ್ದಿಮೆದಾರರು, ಅಂಗಡಿ ಮುಂಗಟ್ಟುಗಳನ್ನು  ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಮುಷ್ಕರ ನಡೆಸಲಾಗುತ್ತಿದೆ. ನಮ್ಮನ್ನು ಬದುಕಲು ಬಿಡಿ ಎಂಬ ಸಂದೇಶದೊಂದಿಗೆ ಈ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ. ಗುರುವಾರ ಬೆಳಗ್ಗೆಯಿಂದ ಅನಿರ್ದಿಷ್ಟವಾಗಿ ಮುಷ್ಕರ ನಡೆಸಲಾಗುತ್ತದೆ ಎಂದು ತಿಳಿಸಿದರು.

ತಂಬಾಕು ಉತ್ಪನ್ನಗಳನ್ನು ಮುಕ್ತವಾಗಿ ಮಾರಾಟ ಮಾಡಲು ಅವಕಾಶ ನೀಡಬೇಕು, ಅಂತಹ ಇಲ್ಲವೇ ಉತ್ಪನ್ನಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು, ಹಣ ಕೊಟ್ಟು ತಂದಿರುವ ವಸ್ತುಗಳನ್ನು ಇಲಾಖೆಯವರು ಹೊತ್ಯೊಯುವ ಅಧಿಕಾರವನ್ನು  ಮೊಟಕುಗೊಳಿಸಬೇಕು, ನಮಗೆ ವ್ಯಾಪಾರ ವ್ಯವಹಾರ ನಡೆಸಲು ಸರಿಯಾದ ಸಮಯವನ್ನು ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಪರಿಷತ್ತಿನ ಗೌರವ ಸಲಹೆಗಾರ ಗಂಡಸಿ ಸದಾನಂದ ಸೇರಿದಂತೆ ವಿವಿಧ ಪದಾಧಿಕಾರಿಗಳು, ವ್ಯಾಪಾರಿಗಳು ಹಾಜರಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon