ಬೆಂಗಳೂರು: ಸುಮಾರು 26 ವರ್ಷಗಳಿಂದ ಯುರಾಲಜಿ ಮತ್ತು ಟ್ರಾನ್ಸ್ ಪ್ಲಾಂಟ್ ಸೇವೆಗಳನ್ನು ಒಂದೇ ಸ್ಥಳದಲ್ಲಿ ನೀಡುತ್ತಾ ಬಂದಿರುವ ಎನ್.ಯು ಆಸ್ಪತ್ರೆ ಈಗ ಬೆಂಗಳೂರಿನ ಮಿಷನ್ ರಸ್ತೆಯಲ್ಲಿ ತನ್ನ ಹೊಸ ಶಾಖೆಯಿಂದ ನೆಫ್ರಾಲಜಿ ಮತ್ತು ಯೂರಾಲಜಿ ಸೌಲಭ್ಯವನ್ನು ಪ್ರಾರಂಭಿಸುವುದಾಗಿ ಸಂಸ್ಥಾಪಕ ಅಧ್ಯಕ್ಷ ಡಾ. ವೆಂಕಟೇಶ್ ಕೃಷ್ಣಮೂರ್ತಿ ತಿಳಿಸಿದರು.
ಗುರುವಾರ ಪ್ರೆಸ್ ಕ್ಲಬ್ ನಲ್ಲಿ ನೆಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಇವರು, ಮೂತ್ರಪಿಂಡ ವಿಜ್ಞಾನದಲ್ಲಿ 26 ವರ್ಷದ ಪರಂಪರೆಯನ್ನು ಆಧಾರವಾಗಿಟ್ಟುಕೊಂಡು ಸೇವೆ ಸಲ್ಲಿಸುತಿರುವ ಎನ್.ಯು ಆಸ್ಪತ್ರೆ ಈಗ ಹೊಸತನದಲ್ಲಿ ವಿಸ್ತರಣೆಯಾಗುತ್ತದೆ. ಇದು ಸುಧಾರಿತ ಕಿಡ್ನಿ ಆರೈಕೆ, ಯೂರಾಲಜಿ ಮತ್ತು ಟ್ರಾನ್ಸ್ಪ್ಲಾಂಟ್ ಸೇವೆಗಳನ್ನು ಒಂದೇ ಸ್ಥಳದಲ್ಲಿ ಒಟ್ಟುಗೂಡಿಸುತ್ತದೆ. ಈ ಸೌಲಭ್ಯವು ಸಂಪೂರ್ಣ ಏಕೀಕೃತ, ಬಹುಶಾಖಾ ಮಾದರಿಯ ಮೂಲಕ ಉನ್ನತ ಮಟ್ಟದ ವಿಶೇಷ ಚಿಕಿತ್ಸೆಯನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಒಳರೋಗಿ ಮತ್ತು ಹೊರರೋಗಿ ವಿಭಾಗಗಳಲ್ಲಿ ಶೂನ್ಯ-ಕಾಗದ ವ್ಯವಸ್ಥೆಯನ್ನು ಅನುಸರಿಸುವ ಮೂಲಕ ಸಮಾಲೋಚನೆಯಿಂದ ಬಿಡುಗಡೆವರೆಗೆ ಸಂಪೂರ್ಣ ರೋಗಿ ಪ್ರಯಾಣವನ್ನು ನೇರ ಸಮಯದ ಎಲೆಕ್ಟ್ರಾನಿಕ್ ವೈದ್ಯಕೀಯ ದಾಖಲೆಗಳ ಮೂಲಕ ನಿರ್ವಹಿಸುತ್ತೇವೆ. ಇದು ಕಾರ್ಯಕ್ಷಮತೆ ಮತ್ತು ನಿಖರತೆಯನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ಮಕ್ಕಳಲ್ಲಿ ಉಂಟಾಗುವ ಮೂತ್ರ ಸಂಬಂಧಿ ಖಾಯಿಲಗಳ ಚಿಕಿತ್ಸೆ ಕೊಡಲು ನೆರವಾಗುತ್ತದೆ ಎಂದು ಹೇಳಿದರು.
ಪ್ರೋಟೋಕಾಲ್ಗಳು ಮತ್ತು ಬಹುಶಾಖಾ ಸಹಕಾರದಿಂದ ಚಾಲಿತವಾದ ವೈದ್ಯಕೀಯ ಫಲಿತಾಂಶಗಳು ಉತ್ತಮವಾಗಿವೆ. ಈ ಸೌಲಭ್ಯವು ದೊಡ್ಡ ಮಟ್ಟದಲ್ಲಿ ನಿರಂತರ ಮತ್ತು ಉನ್ನತ ಗುಣಮಟ್ಟದ ಆರೈಕೆಯನ್ನು ಒದಗಿಸುವ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಡಯಾಲಿಸಿಸ್, ಟ್ರಾನ್ಸ್ಪ್ಲಾಂಟ್, ರೋಬೋಟಿಕ್ಸ್, ಪುರುಷ ವಂಧ್ಯತ್ವ, ಪೀಡಿಯಾಟ್ರಿಕ್, ಆಂಕಾಲಜಿ ಹಾಗೂ ಉಪ-ವಿಶೇಷತೆಗಳಲ್ಲಿ ಶ್ರೇಷ್ಠತೆ ಈ ಗುರಿಯನ್ನು ಸಾಧಿಸಲು ನೆರವಾಗುತ್ತದೆ ಎಂದರು.
ಯುರೋ-ಅಂಕಾಲಜಿ, ಪೀಡಿಯಾಟ್ರಿಕ್ ನೆಫ್ರೊ-ಯೂರಾಲಜಿ, ಯುರೋ ಗೈನಕಾಲಜಿ, ನ್ಯೂರೋ-ಯೂರಾಲಜಿ ಮತ್ತು ಆಂಡ್ರಾಲಜಿ. ಟ್ರಾನ್ಸ್ಪ್ಲಾಂಟ್ ಸೇವೆಗಳು ಸಮಗ್ರ ಕಿಡ್ನಿ ಟ್ರಾನ್ಸ್ ಪ್ಯಾಂಟ್ ಕಾರ್ಯಕ್ರಮ, ಡಿಜಿಟಲ್ ರೋಗನಿರ್ಣಯ ಮುಂತಾದ ಅನೇಕ ಹೊಸ ಆವಿಷ್ಕಾರದ ವೈಜ್ಞಾನಿಕ ಸೇವೆಗಳು ಲಭಿಸಲಿವೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಎನ್.ಯು ಆಸ್ಪತ್ರೆಯ ಡಾ. ಪ್ರಸನ್ನ ವೆಂಕಟೇಶ್, ಡಾ. ದಿಲೀಪ್ ರಂಗರಾಜನ್ ,ಡಾ.ಸುನಿತಾ ರಾವ್, ರಮೇಶ್ ಕಣ್ಣನ್,ಡಾ. ಮನೀಶ್ ಸಿನ್ಹಾ, ಡಾ. ರವಿ ಪ್ರಕಾಶ್ ದೇಶಪಾಂಡೆ ಮುಂತಾದ ವೈದ್ಯರು ಉಪಸ್ಥಿತರಿದ್ದರು.















