ಬೆಂಗಳೂರು: ಜೈಲಿನಲ್ಲಿ ನಿಷೇಧಿತ ವಸ್ತುಗಳ ಸಾಗಾಣೆ ವಿರುದ್ಧ ಪರಪ್ಪನ ಅಗ್ರಹಾರ ಜೈಲಾಧಿಕಾರಿಗಳ ನಿರಂತರವಾಗಿ ಕಾರ್ಯಚರಣೆ ನಡೆಸುತ್ತಿದ್ದರೂ ಕಾರಾಗೃಹದಲ್ಲಿ ಮೊಬೈಲ್ ಸೇರಿದಂತೆ ಇನ್ನಿತರ ವಸ್ತುಗಳ ಪತ್ತೆಯಾಗುತ್ತಿವೆ. ಇದನ್ನು ಹತ್ತಿಕ್ಕುವ ಸಲುವಾಗಿ ಸಮರ ಸಾರಿರುವ ಜೈಲು ಸಿಬ್ಬಂದಿಗಳಿಗೆ ವಿಚಾರಣಾ ಕೈದಿಗಳು ಜೀವ ಬೆದರಿಕೆ ಹಾಕಿದ್ದಾರೆ.
ಮಾ.27ರಂದು ಸಹಾಯಕ ಅಧೀಕಕ್ಷಿ ಸುನಂದ ನೇತೃತ್ವದಲ್ಲಿ ಭದ್ರತಾ ವಿಭಾಗ-3ರಲ್ಲಿನ 1ನೇ ಕೊಠಡಿಯಲ್ಲಿ ತಪಾಸಣೆ ನಡೆಸುವಾಗ ಮೊಬೈಲ್ ಪತ್ತೆಯಾಗಿದ್ದವು. ಸಿಬ್ಬಂದಿ ಮಹೇಶ್ ನಾಯಕ್ ವಶಕ್ಕೆ ಪಡೆಯಲು ಮುಂದಾದಾಗ ಆರೋಪಿಗಳು ಏರುಧ್ವನಿ ಮಾತನಾಡಿ ಮನೆಗೆ ಹೋಗಲ್ಲ ಸ್ಮಶಾನಕ್ಕೆ ಕಳುಹಿಸುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ನೀಡಲಾದ ದೂರಿನ ಅನ್ವಯ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















