ವಕೀಲರ ಸಂರಕ್ಷಣಾಕಾಯ್ದೆ ಬಲಪಡಿಸಲು ಬೃಹತ್ ಪ್ರತಿಭಟನೆ: ವಿವೇಕ್ ಸುಬ್ಬಾರೆಡ್ಡಿ

WhatsApp
Telegram
Facebook
Twitter
LinkedIn

ಬೆಂಗಳೂರು: ವಕೀಲರ ರಕ್ಷಣೆಗೆ ಸಂಬಂಧಪಟ್ಟ ಕಾನೂನು ಮತಷ್ಟು ಬಲಪಡಿಸಿ ಸಮಗ್ರವಾದ ವಕೀಲರ ರಕ್ಷಣಾ ಕಾಯ್ದೆಯನ್ನು  ಜಾರಿಗೆ ತರಲು ಆಗ್ರಹಿಸಿ ಮಂಗಳವಾರ(ನ.3) ನ್ಯಾಯಾಲಯದ ಕಲಾಪಗಳಿಂದ ದೂರವಿದ್ದು, ಹೈಕೋರ್ಟ್ ಗೋಲ್ಡನ್‌ ಗೇಟ್ ಬಳಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ವಕೀಲ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ತಿಳಿಸಿದರು.

ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚೆಗೆ ಬೆಂಗಳೂರಿನ ವೈಟ್ ಫೀಲ್ಡ್ ನ ವಕೀಲ ಮಂಜುನಾಥ್, ಅನ್ನಪೂರ್ಣೇಶ್ವರಿ ನಗರದ ವಕೀಲ ಶ್ರೀ ರಾಮ್ ಅವರುಗಳ ಬರ್ಬರ ಹತ್ಯೆಯಾಗಿದೆ. ಗೌರಿ ಬಿದನೂರಿನ ವಕೀಲ ವೆಂಕಟರಮಣ ಸನ್ನಕಿ ಅವರ ಮೇಲೆ ಕೊಲೆ ಯತ್ನದ ಪ್ರಯತ್ನ ನಡೆದಿದೆ. ಈ ಹಿನ್ನಲೆಯಲ್ಲಿ ವಕೀಲರ ರಕ್ಷಣೆಗಾಗಿ ಇರುವ ಕಾನೂನನ್ನು ಬಲಪಡಿಸಿ ಮುಂಬರುವ ಅದಿವೇಶನದಲ್ಲಿ ತಿದ್ದುಪಡಿ ಕಾನೂನು ಮಂಡಿಸಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯ ಅಂಗವಾಗಿ ಸಿವಿಲ್ ನ್ಯಾಯಾಲಯದಿಂದ ಮೆರವಣಿಗೆಯ ಮೂಲಕ ವಕೀಲರು ನಿಗಧಿತ ಸ್ಥಳಕ್ಕೆ ಬಂದು ಸೇರಲಿದ್ದಾರೆ. ನ್ಯಾಯಾಲಯದ ಎಲ್ಲ ಕಲಾಪಗಳನ್ನು ಬಹಿಷ್ಕಾರ ಮಾಡಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ವಕೀಲರ ಮೇಲೆ ರಾಜ್ಯದಲ್ಲಿ ನಡೆಯುತ್ತಿರುವ ದೌರ್ಜನ್ಯದಬ್ಬಾಳಿಕೆಯ ವಿರುದ್ಧ ದಿನಾಂಕ ಅ. 29 ರಂದು ನಡೆದ ಬೆಂಗಳೂರು ವಕೀಲರ ಸಂಘದ ವಿಶೇಷ ಸದಸ್ಯರ ಸಭೆಯಲ್ಲಿ ಪ್ರತಿಭಟನೆ ನಡೆಸಲು ನಿರ್ಣಯಿಸಲಾಗಿದೆ ಎಂದು ವಿವೇಕ್ ಸುಬ್ಬಾರೆಡ್ಡಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್‌.ವಿ. ಪ್ರವೀಣ್‌ ಗೌಡ, ಉಪಾಧ್ಯಕ್ಷ ಗಿರೀಶ್ ಕುಮಾ‌ರ್, ಖಜಾಂಚಿ ಶ್ವೇತಾ ರವಿಶಂಕ‌ರ್, ವಕೀಲರ ಪರಿಷತ್ ಅಧ್ಯಕ್ಷ ರಾಜಣ್ಣ ಇದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon