ರಾಗಿಮುದ್ದೆ ನಾಟಿಕೋಳಿ ಸಾರು ಮಹಾಯುದ್ಧ; 14 ಮುದ್ದೆ ತಿಂದು ಟಗರು ಗೆದ್ದ ಶಂಭುಗೌಡ!

WhatsApp
Telegram
Facebook
Twitter
LinkedIn

ಬೆಂಗಳೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ಗ್ರಾಮೀಣ ಸೊಗಡಿನ ದೇಸಿ ಆಹಾರ ಸಂಸ್ಕೃತಿಯನ್ನು ನಗರವಾಸಿಗಳಿಗೆ ಪರಿಚಯಿಸುವ ಉದ್ದೇಶದಿಂದ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ರಾಗಿಮುದ್ದೆ ಮತ್ತು ನಾಟಿಕೋಳಿ ಸಾರು ತಿನ್ನುವ ‘ಮುದ್ದೆ ಮಹಾಯುದ್ಧ’ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಬರೋಬ್ಬರಿ 14 ಮುದ್ದೆ ತಿಂದ ಶಂಭುಗೌಡ ಅವರು ಪ್ರಥಮ ಸ್ಥಾನ ಪಡೆದು ಟಗರನ್ನು ತಮ್ಮದಾಗಿಸಿಕೊಂಡರು.

ಸ್ಪರ್ಧೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ 167ಕ್ಕೂ ಹೆಚ್ಚು ಮಂದಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ನಿಗದಿಪಡಿಸಿದ 45 ನಿಮಿಷಗಳಲ್ಲಿ ಅತಿ ಹೆಚ್ಚು ರಾಗಿಮುದ್ದೆಗಳನ್ನು ನಾಟಿಕೋಳಿ ಸಾರಿನೊಂದಿಗೆ ಸೇವಿಸುವುದು ಸ್ಪರ್ಧೆಯ ಸವಾಲಾಗಿತ್ತು.

ಪುರುಷರ ವಿಭಾಗದಲ್ಲಿ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಿವಾಸಿ ಶಂಭುಗೌಡ ಅವರು ಬರೋಬ್ಬರಿ 14 ರಾಗಿಮುದ್ದೆಗಳನ್ನು ತಿಂದು ಪ್ರಥಮ ಸ್ಥಾನ ಗಳಿಸುವ ಮೂಲಕ ಟಗರು ಬಹುಮಾನವಾಗಿ ಪಡೆದರು. ಶ್ರವಣಬೆಳಗೊಳದ ಯೋಗೇಶ್ ಅವರು ದ್ವಿತೀಯ ಸ್ಥಾನ ಪಡೆದು ಕುರಿ ಬಹುಮಾನ ಪಡೆದರೆ, ಹರೀಶ್ ಅವರು ತೃತೀಯ ಸ್ಥಾನ ಪಡೆದು ನಾಲ್ಕು ನಾಟಿಕೋಳಿಗಳನ್ನು ತಮ್ಮದಾಗಿಸಿಕೊಂಡರು.

ಮಹಿಳಾ ವಿಭಾಗದಲ್ಲಿ ವೈಟ್‌ಫೀಲ್ಡ್‌ನ ಸೌಮ್ಯ ಅವರು 8.5 ರಾಗಿಮುದ್ದೆಗಳನ್ನು ತಿಂದು ಪ್ರಥಮ ಸ್ಥಾನ ಗಳಿಸಿ ಫ್ರಿಡ್ಜ್ ಬಹುಮಾನ ಪಡೆದರು. ದಾವಣಗೆರೆಯ ಭಾಗ್ಯಬಾಯಿ ದ್ವಿತೀಯ ಸ್ಥಾನ ಪಡೆದು ವಾಷಿಂಗ್ ಮಷಿನ್ ಗೆದ್ದರೆ, ಚೈತ್ರ ಟಿ. ತೃತೀಯ ಸ್ಥಾನ ಪಡೆದು ಟಿವಿ ಬಹುಮಾನ ಪಡೆದರು.

ಕಾರ್ಯಕ್ರಮದ ಆಯೋಜಕ ಅನಿಲ್ ರೆಡ್ಡಿ ಮಾತನಾಡಿ, ಬೆಂಗಳೂರಿನ ಜನರಿಗೆ ರಾಗಿಮುದ್ದೆ ತಿನ್ನುವ ಸ್ಪರ್ಧೆ ವಿಶೇಷ ಸಂತಸ ನೀಡಿದೆ. ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ನವೆಂಬರ್ ತಿಂಗಳಲ್ಲಿ ಈ ಸ್ಪರ್ಧೆ ಆಯೋಜಿಸಲಾಗುತ್ತಿದ್ದು, ರಾಜ್ಯದ ವಿವಿಧ ಭಾಗಗಳಿಂದ ನೂರಾರು ಮಂದಿ ಭಾಗವಹಿಸುತ್ತಿದ್ದಾರೆ. ಗ್ರಾಮೀಣ ಆಹಾರ ಪದ್ಧತಿ ಮತ್ತು ಸಂಸ್ಕೃತಿಯನ್ನು ನಗರವಾಸಿಗಳಿಗೆ ಪರಿಚಯಿಸುವುದು ಇದರ ಉದ್ದೇಶವಾಗಿದೆ ಎಂದು ತಿಳಿಸಿದರು.

ನ್ಯೂಸ್ 18 ಮುಖ್ಯ ಸಂಪಾದಕ ಹರಿಪ್ರಸಾದ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿಜೇತರಿಗೆ ಬಹುಮಾನ ವಿತರಿಸಿದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon