ದಿ ಗ್ರೀನ್ ಪಾತ್ ನಿಂದ ಮೂರು ದಿನಗಳ ಕನ್ನಡ ಸಂತೆ; ಕನ್ನಡ ವೈಭವ ಸಾರಿದ ಕಥಕ್ ನೃತ್ಯ

WhatsApp
Telegram
Facebook
Twitter
LinkedIn

ಬೆಂಗಳೂರು: ದಿ ಗ್ರೀನ್ ಪಾತ್ ಫೌಂಡೇಶನ್ ವತಿಯಿಂದ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಕನ್ನಡ ಸಂತೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಚಾಲನೆ ನೀಡಿದರು.

ಈ ವೇಳೆ ಪುರುಷೋತ್ತಮ ಬಿಳಿಮಲೆ ಅವರು ಮಾತನಾಡಿ, ಕನ್ನಡ ಸಂಸ್ಕತಿ ಮತ್ತು ವೈವಿಧ್ಯತೆಯನ್ನು ಕಾಪಾಡಲು ಇಂತಹ ಕನ್ನಡ ಸಂತೆಯ ಹೆಸರಿನ ಕಾರ್ಯಕ್ರಮಗಳು ಅವಶ್ಯಕ ಎಂದರು.

ಅಕ್ಟೋಬರ್ 30, 31, ನವಂಬರ್ 1 ರಂದು ಮೂರು ದಿನಗಳ ಕಾಲ ಕನ್ನಡ ಸಂತೆ ನಡೆಯಲಿದ್ದು, ವಿವಿಧ ಸಾಂಸ್ಕೃತಿಕ, ಕನ್ನಡ ಸಂಸ್ಕೃತಿ ಪರಂಪರೆಯನ್ನು ಸಾರುವ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕರುನಾಡ ಸಂಸ್ಕೃತಿ, ಸಮುದಾಯ ಸಾಮರಸ್ಯ ಮತ್ತು ಸುಸ್ಥಿರತೆಯ ಒಂದು ಸುಂದರ ಆಚರಣೆ ಇದಾಗಿದೆ ಎಂದು ಗ್ರೀನ್ ಪಾಥ್ ನ ಮುಖ್ಯಸ್ಥ ಜಯರಾಮ್ ತಿಳಿಸಿದರು.

ನಾಟಕ ಆಕಾಡೆಮಿ ಅಧ್ಯಕ್ಷ ನಾಗರಾಜ ಮೂರ್ತಿ, ಭಾರತ್ ಹಿಂದೂ ಎಕಾನಮಿಕ್ ಪೋರಂ ನ ಶಿವಪ್ರಸಾದ್, ವನ್ಯ ಜೀವಿ ಛಾಯಾಗ್ರಾಹಕ  ಲಯನ್ ಮರಸಪ್ಪ ರವಿ, ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಳಿಕ ಗೀತಾ ಬತ್ತದ್ ಅವರಿಂದ ಮನೋಜ್ಞವಾದ ವೀಣಾ ವಾದನ ನಡೆಯಿತು.

ಉದ್ಘಾಟನಾ ದಿನದಂದು ಸುಧಾ ಶರ್ಮ ಅವರಿಂದ ಭರವಸೆಯ ಸಮುದಾಯ ಎಂಬ ವಿಷಯ ಕುರಿತು ಸಂವಾದ ನಡೆಯಿತು. ಡಾ.ಭಾಗ್ಯ ಶ್ರೀ ಚಂದ್ರಶೇಖರ್ ಅವರಿಂದ ಸಂಗೀತ ಮತ್ತು ವೀಣಾ ವಾದನ ನಡೆಯಿತು. ವಿದುಷಿ ವೀಣಾಭಟ್ ಅವರಿಂದ ಕಥಕ್ ನೃತ್ಯ ವೈಭವ ನೋಡುಗರ ಗಮನ ಸೆಳೆಯಿತು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon