ಬೆಂಗಳೂರು: ಕರ್ನಾಟಕ ಸಾಫ್ಟ್ ಬಾಲ್ ಪ್ರೀಮಿಯರ್ ಲೀಗ್ ಸೀಸನ್-3 ಕರ್ನಾಟಕ ಕ್ರಿಕೆಟ್ ಸಮರ ಇಂದಿನಿಂದ ನವೆಂಬರ್ 23ರವರಗೆ ಜರುಗಲಿದೆ ಎಂದು ಸಿದ್ದು ಐ.ದೇಸಾಯಿ ತಿಳಿಸಿದರು.
ಈ ಕುರಿತು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಐ.ಪಿ.ಎಲ್.ಮಾದರಿಯಲ್ಲಿ ಕೆ.ಎಸ್.ಪಿ.ಎಲ್. ಸಾಫ್ಟ್ ಬಾಲ್ ಕ್ರಿಕೆಟ್ ನವೆಂಬರ್ 1ರಿಂದ 23ರವರೆಗೆ ಸೊಲದೇವನಹಳ್ಳಿ ಆಚಾರ್ಯ ಸ್ಪೇಡಿಯಂನಲ್ಲಿ ನಡೆಯುತ್ತಿದೆ. ರಾಜ್ಯದ 31 ಜಿಲ್ಲೆಯ 32 ತಂಡಗಳು ಭಾಗವಹಿಸಿವೆ. ಪ್ರಥಮ ಬಹುಮಾನ 30ಲಕ್ಷ, ದ್ವಿತೀಯ ಬಹುಮಾನ 20ಲಕ್ಷ, ಮೊದಲ ಸಮಾಧಾನಕರ ಬಹುಮಾನ 10ಲಕ್ಷ, ಎರಡನೇಯ ಸಮಾಧಾನಕರ 10ಲಕ್ಷ ಸೇರಿಂದರೆ ಒಟ್ಟು ಬಹುಮಾನ ಮೊತ್ತ 70ಲಕ್ಷ ಒಳಗೊಂಡಿದೆ ಎಂದು ಮಾಹಿತಿ ನೀಡಿದರು.
ಕ್ರಿಕೆಟ್ ವಿಶ್ವ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಗ್ರಾಮೀಣ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಕರ್ನಾಟಕ ಸಾಫ್ಟ್ ಬಾಲ್ ಪ್ರೀಮಿಯರ್ ಲೀಗ್ ಆರಂಭಿಸಲಾಯಿತು. ಎರಡು ಸೀಸನ್ ಅತ್ತುತ್ಯಮವಾಗಿ ಜರುಗಿದೆ. ಮೂರನೇಯ ಸೀಸನ್ ಗೆ ಭರ್ಜರಿ ತಯಾರಿ ಮಾಡಿಕೊಳ್ಳಲಾಗಿದ್ದು, ಕ್ರಿಕೆಟ್ ಪ್ರೇಮಿಗಳು ಆಗಮಿಸಿ ಪ್ರೋತ್ಸಾಹ ನೀಡಬೇಕು. ಇನ್ನು ಚಿತ್ರನಟ ಡಾಲಿ ಧನಂಜಯ್ ಮತ್ತು ಕಲಾವಿದರುಗಳು, ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರರು ಟೂರ್ನಿಗೆ ಆಗಮಿಸಲಿದ್ದಾರೆ ಎಂದು ಹೇಳಿದರು.













