ಬೆಂಗಳೂರು: ವಿದ್ಯಾರ್ಥಿ ನಾಯಕ, ಹಿರಿಯ ರಾಜಕಾರಣಿ ಮಾಜಿ ಸಫಾಯಿ ಕರ್ಮಚಾರಿ ನಿಗಮದ ಅಧ್ಯಕ್ಷ ಆರ್.ವಿ.ಹರೀಶ್ ಅವರು ತಮ್ಮ ಹುಟ್ಟು ಹಬ್ಬವನ್ನು ಅವರ ನಿವಾಸದಲ್ಲಿ ಅಭಿಮಾನಿಗಳೊಂದಿಗೆ ಆಚರಿಸಿಕೊಂಡರು.
ನೂರಾರು ಅಭಿಮಾನಿಗಳು, ಮುಖಂಡರು, ಕುಟುಂಬ ವರ್ಗದವರೊಂದಿಗೆ ಕೇಕ್ ಕತ್ತರಿಸಿ ಸಿಹಿ ಹಂಚಿದರು. ಮಲೇಶ್ವರಂ ಜೆಡಿಎಸ್ ಮುಖಂಡ ಸಿ. ಅಶೋಕ್ ಕುಮಾರ್, ಸಾ.ರಾ.ಗೋವಿಂದು, ದೇವರಾಜ್, ಆನಂದ್ ಕುಮಾರ್ ಸೇರಿದಂತೆ ವಿವಿಧ ಮುಖಂಡರು ಅವರಿಗೆ ಶುಭ ಕೋರಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷದಲ್ಲಿ ನಮ್ಮನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡದೆ ಮೋಸ ಮಾಡಿದರು, ರಾಜಕೀಯದಲ್ಲಿ ಸಮಯ ಸಾಧಕರಿದ್ದರೆ. ನಮ್ಮನ್ನು ನಂಬಿಸಿ ವಂಚನೆ ಮಾಡುವವರನ್ನು ನಂಬಬಾರದು, ಶಾಸಕ ಸುರೇಶ್ ಘೋಮುಖ ವ್ಯಾಗ್ರ ಅವರು ರಾಜಾಜಿ ನಗರ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ, ಕೇವಲ ಪೋಟೋಗಳಿಗೆ ಪೋಸ್ ನೀಡುವ ಜಾಯಮಾನ ಬೆಳಸಿಕೊಂಡಿದ್ದಾರೆ ಎಂದರು.















