ಬೆಂಗಳೂರು: ಜೈನ್ ಇಂಡಸ್ಟ್ರಿಯಲ್ ಟ್ರೇಡ್ ಆರ್ಗನೈಸೇಶನ್ ನ ಸುಸಜ್ಜಿತ ಬಹು ವ್ಯವಸ್ಥೆಯ ಉತ್ತರ ಬೆಂಗಳೂರು ನೂತನ ಕಚೇರಿಯ ಉದ್ಘಾಟನಾ ಸಮಾರಂಭ ಗಾಂಧಿನಗರದಲ್ಲಿ ನಡೆಯಿತು.
ಬೆಂಗಳೂರು ಉತ್ತರ ಜಿತೋ ಅಧ್ಯಕ್ಷ ವಿಮಲ್ ಕಟಾರಿಯಾ ನೂತನ ಕಚೇರಿಯನ್ನು ವಿದ್ಯುಕ್ತವಾಗಿ ಉದ್ಘಾಟಿಸಿದರು. ಜೀತೋ ಬೆಂಗಳೂರು ಉತ್ತರ ಮತ್ತು ಜೀತೋ ಬೆಂಗಳೂರು ದಕ್ಷಿಣ ನಿರ್ದೇಶಕರು ಸೇರಿದಂತೆ ದೇಶದ ವಿವಿಧ ಭಾಗಗಳ 100 ಚಾಪ್ಟರ್ ನ ಎಲ್ಲ 42 ನಿರ್ದೇಶಕರು ಸಮಾರಂಭದಲ್ಲಿ ಭಾಗವಹಿಸಿದ್ದರು. ಬೆಂಗಳೂರು ಉತ್ತರ ಜಿತೋ ನಿರ್ದೇಶಕರಾದ ದಿನೇಶ್ ಕೇಸರ್, ವಿನೋದ್ ನಂದಾವರ್, ರಮೇಶ್ ಚಂದ್, ಅರವಿಂದ್ ಜೈನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನೂತನ ಕಟ್ಟಡದ ಉದ್ಘಾಟನೆ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಉತ್ತರ ಬೆಂಗಳೂರು ಜಿತೋ ಅಧ್ಯಕ್ಷ ವಿಮಲ್ ಕಟಾರಿಯಾ, 33 ದೇಶಗಳಲ್ಲಿ ನಮ್ಮ ಚಾಪ್ಟರ್ ಗಳು ಕಾರ್ಯನಿರ್ವಹಿಸುತ್ತಿವೆ. ಸೇವೆ, ಜ್ಞಾನ, ಆರ್ಥಿಕತೆ, ಸಬಲೀಕರಣ ಸಂಸ್ಥೆಯ ಮುಖ್ಯ ಧ್ಯೇಯವಾಗಿವೆ. ಕೋವಿಡ್ ಸಮಯದಲ್ಲಿ ದಿನಕ್ಕೆ 5 ಲಕ್ಷ ಪ್ಯಾಕೆಟ್ ತಿಂಡಿ, ಊಟವನ್ನು ಉಚಿತವಾಗಿ ಹಂಚಿದ ಸಂಸ್ಥೆ ಜಿತೋ ಆಗಿದೆ. ಟ್ರಾಫಿಕ್ ಮತ್ತು ಸಿವಿಲ್ ಪೊಲೀಸರಿಗೆ, ಆಶಾ ಹಾಗೂ ಸೇವಾ ಕಾರ್ಯಕರ್ತೆಯರಿಗೆ, ಬಡವರಿಗೆ, ಕಾರ್ಖಾನೆಗಳ ಕಾರ್ಮಿಕರಿಗೆ ಫುಡ್ ಕಿಟ್ ನಿರಂತರವಾಗಿ ಕೊಟ್ಟ ಕೀರ್ತಿ ಎಂದು ವ್ಯಾಖ್ಯಾನಿಸಿದರು.
ಚಾರಿಟೆಬಲ್ ಸ್ಕೂಲ್, ಕಾಲೇಜುಗಳು, ಆಸ್ಪತ್ರೆಗಳು ಹಾಗೂ ಡಯೋಗ್ನೋಸ್ಟಿಕ್ ಲ್ಯಾಬ್ ಗಳನ್ನು ನಮ್ಮ ಸಂಸ್ಥೆಯ ಅಡಿಯ ಬಹುತೇಕ ಜೈನ ಸಮಾಜದ ಸಂಸ್ಥೆಗಳು ನಡೆಸುತ್ತಿವೆ. ಆರ್ಥಿಕವಾಗಿ ಸದೃಢರಾಗಿ ನಮ್ಮ ರಾಜ್ಯ ಮತ್ತು ದೇಶವನ್ನು ಸಮೃದ್ಧಿಯ ಪತದತ್ತ ಕೊಂಡೊಯ್ಯಲು ಹಲವು ಕಾರ್ಯಕರ್ಮಗಳು ನಡೆಯುತ್ತಿವೆ. ಹೊಸ ಕಾರ್ಖಾನೆಗಳನ್ನು ನಿರ್ಮಿಸಿ, ಉದ್ಯೋಗ ಸೃಷ್ಟಿಯನ್ನು ಸಹ ಮಾಡಲಾಗುತ್ತಿದೆ. ಮನುಷ್ಯರಾಗಿ ಈ ಪವಿತ್ರ ಭೂಮಿಯಲ್ಲಿ ಹುಟ್ಟಿರುವ ಋಣವನ್ನು ತೀರಿಸುವುದು ಸಂಸ್ಥೆಯ ಉದ್ದೇಶವಾಗಿದೆ ಎಂದು ವಿವರಿಸಿದರು.
ಒಟ್ಟಾರೆ ದೇಶದ ಜೈನ ಸಮಾಜವು ಜಿಎಸ್ಟಿ ಮತ್ತು ಆದಾಯ ತೆರಿಗೆಯ ಪಾಲಿನ ಶೇಕಡ 24ರಷ್ಟನ್ನು ಕಟ್ಟುತ್ತಿದೆ. ಇನ್ನೂ ಉತ್ತಮ ಉದ್ಯಮಗಳನ್ನು ಹಾಗೂ ಕಾರ್ಖಾನೆಗಳನ್ನು ನಿರ್ಮಿಸಿ ಮತ್ತಷ್ಟು ಕೊಡುಗೆ ನೀಡುವಂತೆ ಮಾಡುವುದು ಸಂಸ್ಥೆಯ ಮುಂದಿನ ಕಾರ್ಯೋದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ಕಚೇರಿಯು ಸ್ಕಿಲ್ ಡೆವಲಪ್ಮೆಂಟ್ ಗೆ ಒತ್ತು ನೀಡಿ ಹೊಸ ಹೊಸ ಹೂಡಿಕೆದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ವಿಮಲ್ ಕಟಾರಿಯಾ ಮಾಹಿತಿ ನೀಡಿದರು.















