ವಿಶ್ವ ದಾಖಲೆಗಳ ಸರದಾರರು ಸಿಲಿಕಾನ್ ಸಿಟಿಯ ಗಿನ್ನಿಸ್ ಗಿರೀಶ್ ಕುಟುಂಬ

WhatsApp
Telegram
Facebook
Twitter
LinkedIn

ಬೆಂಗಳೂರು: ನಗರದ ಸಂಪಂಗಿರಾಮನಗರದ ಗಿರೀಶ್ ಕುಮಾರ್ ಅವರ ಕುಟುಂಬ ಇಡೀ ಭಾರತ ದೇಶದಲ್ಲೇ ಅತಿ ಹೆಚ್ಚು ಗಿನೀಸ್ ದಾಖಲೆಗಳನ್ನು ಪಡೆದಿರುವ ಕುಟುಂಬ ಎನ್ನುವ ಹೆಗ್ಗಳಿಕೆಗೆ ಭಾಜನವಾಗಿದೆ.

ಗಿರೀಶ್ ಕುಮಾರ್ ಅವರ ಕುಟುಂಬ ಒಟ್ಟು ಒಂಬತ್ತು ವರ್ಲ್ಡ್ ಗಿನ್ನಿಸ್ ರೆಕಾರ್ಡ್ಸ್, ಐದು ಯೂನಿಕ್ ವರ್ಲ್ಡ್ ರೆಕಾರ್ಡ್ಸ್ ಹಾಗೂ ಎರಡು ಮಿರಾಕಲ್ ವರ್ಲ್ಡ್ ರೆಕಾರ್ಡ್ಸ್‌ಗಳನ್ನು ತಮ್ಮದಾಗಿಸಿಕೊಂಡಿದೆ. ಅವರ ಹಿರಿಯ ಮಗಳು ಅಥ್ಲೀಟ್ ಆಗಿದ್ದು, ಅಂತರರಾಷ್ಟ್ರೀಯ ಚಿಲ್ಡ್ರನ್ಸ್ ಒಲಿಂಪಿಕ್ಸ್‌ನಲ್ಲಿ ಅಂಡರ್-16 ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿ 18ನೇ ಸ್ಥಾನ ಪಡೆದು ಗಿನೀಸ್ ದಾಖಲೆ ಬರೆದಿರುವುದು ಅತಿ ವಿಶೇಷವಾಗಿದೆ. ಅವರು 30 ಸೆಕೆಂಡ್ ಗಳಲ್ಲಿ 148.85 ಮೀ ಉದ್ಧನೇಯ ಪೈಪ್ ಮೂಗಿನಿಂದ ಎಳೆದು ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ.

ಕ್ರೀಡೆಯಲ್ಲಿ ಕುಟುಂಬದ ಹೆಮ್ಮೆಯ ಸಾಧನೆ:

ಇವರ ಕಿರಿಯ ಮಗಳು ಜಿಮ್ನಾಸ್ಟಿಕ್ಸ್‌ನಲ್ಲಿ ರಾಷ್ಟ್ರೀಯ ಪದಕ ವಿಜೇತೆಯಾಗಿದ್ದು, ಡೆಹ್ರಾಡೂನ್‌ನಲ್ಲಿ ನಡೆದ ರಾಷ್ಟ್ರೀಯ ಜಿಮ್ನಾಸ್ಟಿಕ್ಸ್ ಸ್ಪರ್ಧೆಯಲ್ಲಿ ಪದಕ ವಿಜೇತರಾಗಿದ್ದಾರೆ. ತಮ್ಮ ಎಂಟನೇ ವಯಸ್ಸಿನಲ್ಲಿ ಒಂದು ಗಂಟೆಯಲ್ಲಿ ನಿರಂತರವಾಗಿ 2,776 ಫಾರ್ವರ್ಡ್ ರೋಲ್ ಮಾಡಿ ವಿಶ್ವ ದಾಖಲೆ ನಿರ್ಮಿಸಿರುವ ಅವರ ದಾಖಲೆಯನ್ನು ಯಾರು ಮುರಿಯಲಾಗಿಲ್ಲ. ಗಿರೀಶ್ ಅವರ ಮಡದಿ ಕೂಡ ಒಂದು ನಿಮಿಷದಲ್ಲಿ 57 ಮೊಟ್ಟೆಗಳನ್ನು ಒಡೆದು ದಾಖಲೆ ಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಮಾಸ್ಟರ್ ಮೀಟ್‌ನಲ್ಲಿ 35 ವರ್ಷ ವಯೋಮಿತಿಯ 5 ಕಿಮೀ ಓಟದಲ್ಲಿ ಚಿನ್ನದ ಪದಕವನ್ನು ಪಡೆದು ವಿಜೇತರಾಗಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಹಸಗಳ ಗುರುತು:

ಗಿರೀಶ್ ಕುಮಾರ್ ಅವರು ತಮ್ಮ ಜೀವನದಲ್ಲಿ ಹಲವು ರೋಮಾಂಚನಕಾರಿ ಸಾಧನೆಗಳನ್ನು ಮಾಡಿದ್ದು, ಹಲ್ಲುಗಳಿಂದ ಅತಿ ಹೆಚ್ಚು ಬಾಟಲ್ ಕ್ಯಾಪ್‌ಗಳನ್ನು ತೆರೆದಿರುವ ದಾಖಲೆಯನ್ನು ಹೊಂದಿದ್ದಾರೆ. 2011ರಲ್ಲಿ ಇಟಲಿಯ ಮಿಲನ್‌ನಲ್ಲಿ ನಡೆದ ಗಿನೀಸ್ ಶೋಗೆ ಆಹ್ವಾನ ಪಡೆದಿದ್ದ ಅವರು 63 ಬಾಟಲ್ ತೆರೆದು ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಹೆಸರನ್ನು ದಾಖಲಿಸಿಕೊಂಡಿದ್ದಾರೆ. 2013ರಲ್ಲಿ ಇಡೀ ಕುಟುಂಬವೇ ಸೇರಿ ಗಿನ್ನಿಸ್ ದಾಖಲೆ ಮಾಡಿದ್ದು, ಒಂದು ನಿಮಿಷದಲ್ಲಿ 25 ಮೊಟ್ಟೆಗಳನ್ನು ನುಂಗಿ ವಾಪಸ್ ತೆಗೆಯುವ ಸಾಹಸ ಮೆರೆದಿದ್ದಾರೆ. ಸರ್ಜಿಕಲ್ ಪೈಪ್ ಮೂಗಿನಿಂದ ಹಾಕಿ ಬಾಯಿಂದ ಹೊರತೆಗೆಯುವ ಸಾಹಸದಲ್ಲಿ ಕೇವಲ 53 ಸೆಕೆಂಡ್‌ಗಳಲ್ಲಿ 377 ಅಡಿ ಉದ್ದದ ಪೈಪ್ ಬಳಸಿ ಅದ್ಭುತ ದಾಖಲೆ ನಿರ್ಮಿಸಿದ್ದಾರೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಿಂಬೆಹಣ್ಣುಗಳನ್ನು ಕ್ಯಾಚ್ ಮಾಡುವುದು ಮತ್ತು ಅತ್ಯಂತ ವೇಗವಾಗಿ ಕಿವೀ ಹಣ್ಣಿನ ಸಿಪ್ಪೆ ಸುಲಿದು ತಿನ್ನುವ ದಾಖಲೆಯನ್ನೂ ಅವರು ಹೊಂದಿದ್ದಾರೆ.

ಸಾಧನೆಗೆ ಪ್ರೇರಣೆ ಕುಟುಂಬದ ಶಿಸ್ತು:

ಈ ಎಲ್ಲಾ ಸಾಧನೆಗಳ ಹಿಂದೆ ತಂದೆ-ತಾಯಿಯರ ಪ್ರೇರಣೆ ಹಾಗೂ ಕುಟುಂಬದ ಶಿಸ್ತು ಪ್ರಮುಖ ಕಾರಣವಾಗಿದೆ ಎಂದು ಅವರ ಇಬ್ಬರು ಪುತ್ರಿಯರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಕೇವಲ ಶಿಕ್ಷಣ ಮತ್ತು ಸಾಮಾನ್ಯ ಜೀವನಕ್ಕೆ ಸೀಮಿತವಾಗದೆ, ಕ್ರೀಡೆ ಹಾಗೂ ದೇಶಕ್ಕೆ ಕೀರ್ತಿ ತರುವ ನಿಟ್ಟಿನಲ್ಲಿ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿರುವ ಗಿರೀಶ್ ಕುಟುಂಬ ಇಂದಿನ ಯುವ ಜನತೆಗೆ ಮಾದರಿಯಾಗಿದೆ ಎಂದರೆ ತಪ್ಪಾಗಲಾರದು. ಗಿರೀಶ್ ಅವರು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸಿರುವುದು ಕರುನಾಡಿಗೆ ಹೆಮ್ಮೆಯ ವಿಚಾರವಾಗಿದೆ.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon