ಬೆಂಗಳೂರು: ಮಂಗಳೂರಿನ ಹೆಸರಾಂತ ರಿಯಲ್ ಎಸ್ಟೇಟ್ ಸಂಸ್ಥೆ ರೋಹನ್ ಕಾರ್ಪೋರೇಶನ್ ನ ಕನ್ನಿಂಗ್ಹ್ಯಾಮ್ ರಸ್ತೆಯ ನೂತನ ಕಚೇರಿಯನ್ನು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಉದ್ಘಾಟಿಸಿದರು.
ಉದ್ಘಾಟನೆಯ ಅಂಗವಾಗಿ, ನವೆಂಬರ್ 6, 7 ಮತ್ತು 8ರಂದು ಮೂರು ದಿನಗಳ ಪ್ರಾಜೆಕ್ಟ್ ಎಕ್ಸಿಬಿಷನ್ ಅನ್ನು ಆಯೋಜಿಸಲಾಗಿದ್ದು, ಗ್ರಾಹಕರಿಗೆ ಆಯ್ದ ಯೋಜನೆಗಳನ್ನು ವಿಶೇಷ ದರಗಳಲ್ಲಿ ಖರೀದಿಸುವ ಅವಕಾಶವೂ ದೊರೆಯಲಿದೆ. ಕನ್ನಿಂಗ್ಹ್ಯಾಮ್ ರಸ್ತೆ, ಸ್ಯಾಂಕಿ ರಸ್ತೆ ಕ್ರಾಸ್ನಲ್ಲಿರುವ ದಿ ಕನ್ನಿಂಗ್ಹ್ಯಾಮ್ ಕಮರ್ಷಿಯಲ್ನ ಮೊದಲ ಮಹಡಿಯಲ್ಲಿ ನೂತನ ಕಚೇರಿ ಕಾರ್ಯಾರಂಭ ಮಾಡಿದೆ. ಇದರೊಂದಿಗೆ ಸಿಲಿಕಾನ್ ಸಿಟಿಯಲ್ಲಿ ರೋಹನ್ ಕಾರ್ಪೋರೇಶನ್ ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿದೆ.
ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಬೆಂಗಳೂರು ದೇಶದ ಪ್ರಮುಖ ಉದ್ಯಮ ಮತ್ತು ಹೂಡಿಕೆ ಕೇಂದ್ರವಾಗಿ ಬೆಳೆದಿದೆ. ವಿವಿಧ ಕ್ಷೇತ್ರಗಳ ಉದ್ಯಮಗಳು ಮತ್ತು ಹೂಡಿಕೆದಾರರಿಗೆ ನಗರವು ಅನೇಕ ಅವಕಾಶಗಳನ್ನು ಒದಗಿಸುತ್ತಿದೆ. ಇಂತಹ ಸಂದರ್ಭದಲ್ಲಿ ರೋಹನ್ ಕಾರ್ಪೊರೇಶನ್ ಬೆಂಗಳೂರಿಗೆ ಬಂದಿರುವುದು ನಗರದ ಬೆಳೆಯುತ್ತಿರುವ ಉದ್ಯಮ ಲೋಕಕ್ಕೆ ಸ್ವಾಗತಾರ್ಹ ಸೇರ್ಪಡೆ. ಸಂಸ್ಥೆಗೆ ಮುಂದೆಯೂ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ ಎಂದರು.
ರೋಹನ್ ಕಾರ್ಪೊರೇಶನ್ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ರೋಹನ್ ಮೊಂತೆರೊ ಮಾತನಾಡಿ, ಬೆಂಗಳೂರಿನಲ್ಲಿ ನಮ್ಮ ಕಚೇರಿ ಆರಂಭಿಸಿರುವುದು ಸಂಸ್ಥೆಗೆ ಮಹತ್ವದ ಹೆಜ್ಜೆಯಾಗಿದೆ. ನಮ್ಮ ಯೋಜನೆಗಳನ್ನು ಇಲ್ಲಿನ ಜನರಿಗೆ ಪರಿಚಯಿಸುವುದರ ಜೊತೆಗೆ, ಗ್ರಾಹಕರೊಂದಿಗೆ ವಿಶ್ವಾಸಪೂರ್ಣ ಸಂಬಂಧಗಳನ್ನು ಬೆಳೆಸಲು ಮತ್ತು ಹೊಸ ಸಾಧ್ಯತೆಗಳಿಗೆ ದಾರಿ ಮಾಡಿಕೊಡಲು ನಾವು ಉತ್ಸುಕರಾಗಿದ್ದೇವೆ. ಇದು ನಮ್ಮ ಪಾಲಿಗೆ ಹೊಸ ಜವಾಬ್ದಾರಿ ಹಾಗೂ ಹೊಸ ಅವಕಾಶಗಳ ಆರಂಭವಾಗಿದೆ ಎಂದು ತಿಳಿಸಿದರು.
ಮೂರು ದಿನದ ಪ್ರಾಜೆಕ್ಟ್ ಎಕ್ಸಿಬಿಷನ್ ನಲ್ಲಿ ಸಂಸ್ಥೆಯ ವಿವಿಧ ವಸತಿ ಹಾಗೂ ರಿಯಲ್ ಎಸ್ಟೇಟ್ ಯೋಜನೆಗಳ ಮಾಹಿತಿ ಪಡೆಯಲು, ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಸಮಾಲೋಚಿಸಲು ಗ್ರಾಹಕರಿಗೆ ಅವಕಾಶ ಕಲ್ಪಿಸಲಾಗಿದೆ. ಆಯ್ದ ಯೋಜನೆಗಳನ್ನು ವಿಶೇಷ, ಆಕರ್ಷಕ ದರಗಳಲ್ಲಿ ಖರೀದಿಸುವ ಅವಕಾಶವೂ ಇರಲಿದೆ ಎಂದರು.
ಸಚಿವ ಪ್ರಿಯಾಂಕ್ ಖರ್ಗೆ, ಬೆಂಗಳೂರು ಮಹಾಧರ್ಮ ಪ್ರಾಂತ್ಯದ ಸಹಾಯಕ ಬಿಷಪ್ ಡಾ.ಜೋಸೆಫ್ ಸುಸೈನಾಥನ್ ಮತ್ತಿತರರು ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರೀನಾ ಡಿಸೋಜಾ ನಿರೂಪಿಸಿದರು.













