ಎಲ್ಲರಲ್ಲೂ ಅಪ್ರತಿಮ ಸಾಧನೆಗೈಯುವ ಶಕ್ತಿ ಅಡಗಿದೆ: ಶ್ರಿಯೋಗಿ ಸ್ವಾಮೀಜಿ

WhatsApp
Telegram
Facebook
Twitter
LinkedIn

ಬೆಂಗಳೂರು: ಎಲ್ಲರಲ್ಲೂ ಅತ್ಯುತ್ತಮವಾದ ಶಕ್ತಿಯಿದೆ. ಅಪ್ರತಿಮ ಸಾಧನೆಯನ್ನು ಮಾಡುವ ಹುಮ್ಮಸ್ಸು ಅಡಗಿದೆ. ತಮ್ಮನ್ನೂ ತಾವೇ ಅವಲೋಕಿಸಿ ಮುನ್ನಡೆದರೆ ಧರ್ಮದೊಂದಿಗೆ ಅತ್ಯುನ್ನತ ಉನ್ನತಿಯನ್ನು ಸಾಧಿಸಬಹುದು ಎಂದು ಶ್ರಿಯೋಗಿ ಜಗದ್ಗುರುಗಳು ಹೇಳಿದರು.

ಗುರುವಾರ ಇಂದಿರಾನಗರದ ಅಟ್ಟ ಗಲಾಟ ನಡೆದ ದ ವಾಂಡರರ್ ಹು ಒನ್ಸ್ ದ ವರ್ಲ್ಡ್ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಮನುಷ್ಯನೂ ತನಗೆ ತಾನು ಸತ್ಯವಂತನಾಗಿ ನಡೆದುಕೊಳ್ಳಬೇಕು ಆಗ ಮಾತ್ರ ಇಡೀ ಜಗತ್ತೆ ಬದಲಾವಣೆಯನ್ನು ಕಾಣುತ್ತದೆ. ಮನುಷ್ಯ ಪ್ರಕಾಶ ಹೊಂದಲು ಯಾವುದೇ ಸರಳ ಮಾರ್ಗವಿಲ್ಲ ಅಪ್ರತಿಮ ಅಧ್ಯಾತ್ಮ ಸಾಧನೆಯೊಂದೇ ಮಾರ್ಗವಾಗಿದೆ ಇದನ್ನೇ ನನ್ನ ಪುಸ್ತಕದಲ್ಲಿ ತಿಳಿಹೇಳಿದ್ದೇನೆ ಇದನ್ನು ಇಡೀ ಮನುಕುಲಕ್ಕೆ ಸಮರ್ಪಿಸುತ್ತೇನೆ ಎಂದು ತಿಳಿಸಿದರು.

ಜಾತಿ, ಧರ್ಮ ರೂಪಿಸಿದ್ದು ನಾವು ಮನುಷ್ಯರಾಗಿದ್ದೇವೆ. ಬ್ರಹ್ಮ ಜ್ಞಾನವನ್ನು ಪಡೆದವನು ಮಾತ್ರ ಉನ್ನತ ವ್ಯಕ್ತಿಯಾಗಿದ್ದಾನೆ ಹೊರತು ಹುಟ್ಟಿನಿಂದಲ್ಲ. ಈ ಪುಸ್ತಕದಲ್ಲಿ ಅದನ್ನೇ ಹೇಳಲು ಹೊರಟಿದ್ದೇನೆ. ಇದು ಅಜ್ಞಾನದ ಯುಗ ಎಂದೇ ಹೇಳಲು ಬಯಸುತ್ತೇನೆ ಯಾಕೆಂದರೆ ಯಾರೂ ತಮ್ಮ ಒಳಗಿರುವ ಅಂತರ್ ಜ್ಯೋತಿಯನ್ನು ಬೆಳಗಿಸುವು ತಯಾರಿಯಲ್ಲ. ಈಗಿನ ಸಮಸ್ಯೆಗಳ ಮೂಲ ಕಾರಣ ಇವೇ ಎರಡು ವಿಚಾರವಾಗಿದೆ ಎಂದು ವ್ಯಾಖ್ಯಾನಿಸಿದರು.

ಇಸ್ರೋ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಮಾತನಾಡಿ, ಮನುಷ್ಯ ಹೈಲಿ ಎವಾಲವ್ಡ್ ರೊಬೋಟಿಕ್ ಸಿಸ್ಟಮ್ ಇದ್ದ ಹಾಗೆ. ರೊಬೋಟ್ ಗಳಿಗೆ ತೀರಾ ಹೆಚ್ಚು ಒವರ್ ಲೋಡ್ ಆಗದಂತೆ ಕೆಲ ಬದಲಾವಣೆಗಳನ್ನು ಬೇಕಂತಲೇ ಮಾಡಲಾಗುತ್ತದೆ. ಹೀಗೆ ಮನುಷ್ಯನಿಗೂ ವಿಜ್ಞಾನಕ್ಕೂ ಸಾಕಷ್ಟು ಸ್ವಾಮ್ಯತೆ ಇದ್ದು,  ಅನುವಂಶೀಯವಾಗಿ ಮತ್ತು ವಾತಾವರಣಕ್ಕೆ ಅನುಗುಣವಾಗಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸದಂತೆ ಮನುಷ್ಯನ ಮೆದಳು ತಡೆಯುತ್ತದೆ ಆದರೆ ಸಿದ್ದಪುರುಷರು ಇದನ್ನು ಮೀರಿ ಕಾರ್ಯನಿರ್ವಹಿಸುತ್ತಾರೆ. ಅತೀಂದ್ರಿಯ ಜ್ಞಾನವನ್ನು ಹೊರತರಲು ನಿಷ್ಟೆ, ಸಾಧನೆ ಮುಖ್ಯವಾಗಿದ್ದು, ಇದನ್ನೇ ದ ವಾಂಡರರ್ ಹು ಒನ್ಸ್ ದ ವರ್ಲ್ಡ್ ನಲ್ಲಿ ಗುರುಗಳಾದ ಶ್ರೀಯೋಗಿಗಳು ಜಗತ್ತಿಗೆ ತಿಳಿಸಲು ಹೊರಟಿದ್ದಾರೆ ಎಂದು ಅಭಿಪ್ರಾಯಿಸಿದರು.

ಕವಿ, ಲೇಖಕ ಮಂಡಲಗಿರಿ ಪ್ರಸನ್ನ ಮಾತನಾಡಿ, ಶ್ರಿಯೋಗಿಗಳು ತಮ್ಮ ಅಪಾರವಾದ ಪ್ರೇರಕ ಶಕ್ತಿ, ಅನುಭವ ಮತ್ತು ಜ್ಞಾನದಿಂದ ಮನುಕುಲಕ್ಕೆ ಮಾರ್ಗದರ್ಶನ ನೀಡುವ ಕೆಲಸವನ್ನು ಈ ಪುಸ್ತಕದ ಮೂಲಕ ನೀಡಿದ್ದಾರೆ. ಸ್ವಾಮೀಜಿಗಳು ಹೀಗೆಯೇ ಮನುಕುಲಕ್ಕೆ ಮಾರ್ಗ ತೋರಿಸುವ ಕಾರ್ಯವನ್ನು ಮುಂದವೆಸುವಂತಾಗಲಿ ಎಂದು ಆಶಿಸಿದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಸಮಗ್ರ ಆರೋಗ್ಯ ತಜ್ಞ ಡಾ ಪದ್ಮನಾಭನ್, ಡಿ.ವೈ.ಎಸ್.ಪಿ ಸುಧೀಂದ್ರ ಹೆಗಡೆ, ಮಾಜಿ ಸಚಿವ ಎಸ್.ರಾಮದಾಸ್, ಫಿಸಿಷಿಯನ್ ಸಂಜಯ್ ನೀರಲಗಿ, ಪೀಡಿಯಾಟ್ರಿಕ್ ತಜ್ಞೆ ಡಾ. ಸವಿತಾ ಎಸ್ ನೀರಲಗಿ, ಚಿತ್ರ ನಟ ರಾಣಾ ಉಪಸ್ಥಿತರಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon