ವೇವ್ ಗ್ರೂಪ್ ಆಫ್ ಆರ್ಟ್‌ ವತಿಯಿಂದ ಚಿತ್ರಕಲಾ ಪ್ರದರ್ಶನ

WhatsApp
Telegram
Facebook
Twitter
LinkedIn

ಬೆಂಗಳೂರು: ವೇವ್ ಗ್ರೂಪ್ ಆಪ್ ಆರ್ಟ್‌ ವತಿಯಿಂದ ಪ್ರದರ್ಶನವನ್ನು ಚಿತ್ರಕಲಾ ಪರಿಷತ್ತಿನಲ್ಲಿ ಅಕ್ಟೋಬರ್ 25 ರವರೆಗೆ ಹಮ್ಮಿಕೊಳ್ಳಲಾಗಿದೆ.

ಈ ಕಲಾ ಪ್ರದರ್ಶನಕ್ಕೆ ಖ್ಯಾತ ಕಲಾವಿದರಾದ ಕಷ್ಣ ಚೆಟ್ಟಿ, ಗಣೇಶ್ ದೊಡ್ಡಮನಿ ಚಾಲನೆ ನೀಡಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಸುಸಾಂತಾ ಬಸಕ್ ಸಂಯೋಜಕತ್ವದ ಈ ಪ್ರದರ್ಶನದಲ್ಲಿ 20 ಕಲಾವಿದರ ವಿವಿಧ ಚಿತ್ರಪಟಗಳು ಪ್ರದರ್ಶನಕ್ಕಿವೆ. ಕನ್ನಡತಿ ಅನಿತಾ ಜಯಂತ್ ಅವರ ಕಾಡಿನಲ್ಲಿ ಆನೆಗಳ ಜೀವ ನ ವರ್ಣನೆ ಕುರಿತ ಚಿತ್ರಗಳು, ಸುಶಾಂತ್ ಬಸಕ್ ಅವರ ಆರ್ಕಾಲಿಕ್ ಪೇಂಟಿಂಗ್ ಮಾದರಿಯ ಗುಡ್ಡಗಾಡು ಕುರಿತ ಚಿತ್ರಗಳು,ಪ್ರಶಾಂತ್ ಮೊದಕ್ ನ ದೈವಿಕ ಚಿತ್ರಗಳು, ಸ್ವಪ್ನಾ ಘೋಷ್ ಅವರ ಚಿತ್ರಪಟಗಳು ಚಿತ್ರಕಲಾ ಪ್ರೇಕ್ಷಕರ ಗಮನ ಸೆಳೆಯುತ್ತಿವೆ.

ಚಿತ್ರಕಲಾವಿದೆ ಅನಿತಾ ಜಯಂತ್ ಅವರು ಪ್ರದರ್ಶನದ ಕುರಿತು ಮಾಧ್ಯಮಗಳ ಜೊತೆ ಮಾತನಾಡಿ, ಚಿತ್ರಕಲಾ ಪರಿಷತ್ ನಲ್ಲಿ ವೇವನ್ ಗ್ರೂಪ್ ಜೊತೆ ನನ್ನ ಕಲಾಪ್ರದರ್ಶನ ಮಾಡುತ್ತಿದ್ದೇನೆ. ಈ ಮೊದಲು ಕೂಡ ಸಾಕಷ್ಟು ಆರ್ಟ್ ಶೋ ಗಳಲ್ಲಿ ಭಾಗವಹಿಸಿದ್ದೇನೆ. ನಾನು ಆನೆಗಳ ಕುರಿತು ಚಿತ್ರವನ್ನು ಬಿಡಿಸಿ ಪ್ರದರ್ಶಿಸುವ ಕಡೆಗೆ ಆಸಕ್ತಿಯನ್ನು ಹೊಂದಿದ್ದೇನೆ. ಆನೆಗಳು ಎಂದರೆ ನನಗೆ ಇಷ್ಟವಾದ ಪ್ರಾಣಿಯಾಗಿದೆ. ಅವುಗಳು ಪ್ರಕೃತಿಯ ಜೊತೆಗೆ ಹೊಂದಿಕೊಂಡು ಹೋಗುವ ಪ್ರಕ್ರಿಯೆ ಸೋಜಿಗವಾಗಿದೆ ಎಂದರು.

ಚಾರ್ಕೋಲ್, ಆಕ್ರೆಲಿಕ್, ಆಯಿಲ್ ಪೇಂಟ್, ವಾಟರ್ ಕಲರ್ಸ್ ಮೂಲಕ ಆನೆಗಳು ಮತ್ತು ಸುತ್ತಮುತ್ತಲಿನ ಪ್ರಕೃತಿಯ ಸೊಬಗನ್ನು ತೋರಿಸಲು ಪ್ರಯತ್ನಿಸಿದ್ದೇನೆ. ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟ ಸುಸಾಂತಾ ಬಸಕ್ ಅವರಿಗೆ ಧನ್ಯವಾದವನ್ನು ಅರ್ಪಿಸುತ್ತೇನೆ ಎಂದು ಹೇಳಿದರು.

 

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon