ಬೆಂಗಳೂರು: ಗುರು ಪೂರ್ಣಿಮೆ ಮಹಾನ್ ಪರ್ವವಾಗಿದೆ. ಒಳ್ಳೆಯ ಮತ್ತು ಸತ್ಯವಂತನಾದ ಗುರುವಿನ ನಡುವೆ ವ್ಯತ್ಯಾಸವಿದ್ದು, ಯಾರ ಮನಸಿನಲ್ಲಿ ಪರಮಾತ್ಮನ ಕುರಿತು ಭಕ್ತಿ, ಸದಾಚಾರ, ಸದ್ಭಾವನೆಗಳಿವೆ ಅವರುಗಳು ಮಾತ್ರ ನಿಜವಾದ ಗುರುವಾಗಿದ್ದಾನೆ ಎಂದು ಆಚಾರ್ಯಶ್ರೀ ಅನೇಕಾಂತ ಸಾಗರ್ ಮಹಾರಾಜ್ ಹೇಳಿದರು.
ಬುಧವಾರ ಶಂಕರಪುರದ ಜೈನ ಭವನದಲ್ಲಿ ಗುರು ಪೂರ್ಣಿಮೆಯ ಪ್ರಯುಕ್ತ ನಡೆದ ವಿಶೇಷ ಆಚರಣೆ, ಪ್ರವಚನ ಕಾರ್ಯಕ್ರಮದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮನುಷ್ಯನು ಉನ್ನತಿ, ಸುಖ, ಶಾಂತಿ, ಸಮೃದ್ಧಿಯಿಂದ ಬದುಕಬೇಕಾದರೆ ಗುರುವಿನ ಸಾನಿಧ್ಯ ಅತ್ಯಂತ ಮುಖ್ಯವಾಗಿದೆ. ಆದ್ದರಿಂದ ಗುರುಪೂರ್ಣಿಮೆ ಆಚರಣೆಯನ್ನು ಯಾವುದೇ ಧರ್ಮ ಅಥವಾ ಪಂಥಕ್ಕೆ ಸೀಮಿತಗೊಳಿಸಬರದು ಎಂದು ಹೇಳಿದರು.
ಪಾವನ ವರ್ಷಾಯೋಗ ಕಾರ್ಯಕ್ರಮ:
ಆಗಸ್ಟ್ 1ರಂದು 28ನೇ ಪಾವನ ವರ್ಷಾಯೋಗ ಆಚರಣೆ ಕರ್ನಾಟಕ ಜೈನ ಭವನದಲ್ಲಿ ನಡೆಯಲಿದೆ. ಅಂದು ಮಂಗಳ ಕಳಸ ಸ್ಥಾಪನೆ ಕಾರ್ಯಕ್ರಮ ನಡೆಯಲಿದೆ. ಚಾತುರ್ಮಾಸದ ಪ್ರಯುಕ್ತ ವಿವಿಧ ಕಳಸಗಳ ಪೂಜಾ ಕಾರ್ಯ ನೆರವೇರಲಿದೆ ಎಂದು ಅನೇಕಾಂತ ಸಾಗರ್ ಮಹಾರಾಜ್ ಮಾಹಿತಿಯನ್ನು ನೀಡಿದರು.













