ಖಾನಾಪುರದ ವಿದ್ಯುತ್ ಬಳಕೆದಾರರರಿಗೆ ಸಿಹಿ ಸುದ್ದಿ; ಹೆಸ್ಕಾಂ ನಿಂದ ಏಕೀಕೃತ ಸಂಪರ್ಕ ವ್ಯವಸ್ಥೆ ಜಾರಿ

WhatsApp
Telegram
Facebook
Twitter
LinkedIn

ಬೆಳಗಾವಿ: ಖಾನಾಪುರ ತಾಲೂಕಿನ ವಿದ್ಯುತ್ ಬಳಕೆದಾರರರಿಗೆ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಸಿಹಿ ಸುದ್ದಿ ನೀಡಿದ್ದು, ದೂರುಗಳನ್ನು ದಾಖಲಿಸಲು ಏಕೀಕೃತ ಸಂಪರ್ಕ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಇಡೀ ಖಾನಾಪುರ ತಾಲೂಕಿನಲ್ಲಿ ಸುಮಾರು ಒಂದು ಲಕ್ಷ ವಿದ್ಯುತ್ ಶಕ್ತಿ ಗ್ರಾಹಕರಿದ್ದು, ಪ್ರತಿ ದಿನ ಸುಮಾರು 5 ರಿಂದ 10 ದೂರುಗಳು ದಾಖಲಾಗುತ್ತಿವೆ. ಕೆಲವೊಂದು ಸಾರಿ ಗ್ರಾಹಕರಿಗೆ ಸಂಪರ್ಕ ಕೊರತೆಯಿಂದ ದೂರು ದಾಖಲಿಸಲು ಸಾಧ್ಯವಾಗದೆ ಕಛೇರಿಯವರೆಗೆ ಖುದ್ದಾಗಿ ಹೋಗುವ ಸಮಸ್ಯೆ ಉಂಟಾಗುತ್ತಿತ್ತು ಎಂದು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಸಹಾಯಕ ಅಭಿಯಂತರರು ತಿಳಿಸಿದ್ದಾರೆ.

ಎಲ್ಲ ಸಮಸ್ಯೆಗಳನ್ನು ಸರಿಪಡಿಸಲು ಮತ್ತು ಗ್ರಾಹಕರು ತಮ್ಮ ದೂರುಗಳನ್ನು ಸುಲಭವಾಗಿ ದಾಖಲಿಸಲು ಏಕೀಕೃತ ಸಂಪರ್ಕ ವ್ಯವಸ್ಥೆಯನ್ನು ಆರಂಭಿಸಲಾಗಿದೆ. ಈ ದೂರು ನಿರ್ವಹಣಾ ಕೇಂದ್ರವು ಬೆಳಿಗ್ಗೆ 9 ರಿಂದ ಸಾಯಂಕಾಲ 8 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಗ್ರಾಹಕರು ತಮ್ಮ ದೂರುಗಳನ್ನು ದಾಖಲಿಸಲು ಮೊಬೈಲ್ ಸಂಖ್ಯೆ 9480882236 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon