15 ದಿನ ಬೆಳಗಾವಿ ಹೊರವಲಯ, ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ

WhatsApp
Telegram
Facebook
Twitter
LinkedIn

ಹುಬ್ಬಳ್ಳಿ/ಬೆಳಗಾವಿ: ನಾಳೆಯಿಂದ 15 ದಿನಗಳ ಕಾಲ ಪ್ರತಿದಿನ ಬೆಳಿಗ್ಗೆ 10 ರಿಂದ ಸಾಯಂಕಾಲ 6 ಗಂಟೆಯವರೆಗೆ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ವತಿಯಿಂದ 11ಕೆ.ವಿ ಮಾರ್ಗವನ್ನು ನಿರ್ಮಿಸುತ್ತಿರುವುದರಿಂದ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಪೂರೈಸಬೇಕಾಗಿರುವುದರಿಂದ ಬೆಳಗಾವಿ ಹೊರವಲಯ ಮತ್ತು ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಅಡಚಣೆ ಉಂಟಾಗಲಿದೆ.

110 ಕೆ.ವಿ ಬೀಡಿ ಉಪಕೇಂದ್ರದಿಂದ ಸರಬರಾಜು ಆಗುವ ಬೀಡಿ, ರಾಮಾಪೂರ, ಸುರಪೂರ, ಗೋಲಿಹಳ್ಳಿ, ಭುರುಣಕಿ, ಕರಿಕಟ್ಟಿ, ಗಸ್ತೋಳ್ಳಿದಡ್ಡಿ, ಗಸೊಳ್ಳೆ, ಹೊಸೆಟ್ಟಿ, ಶಿವಾಜಿ ನಗರ, ಹಾಲಜುಂಜವಾಡ, ಚನ್ನಕೇಬೈಲ, ಸುರಪುರ ಕೆರವಾಡ, ಕಲೇಶ್ವರ ನಗರ ಹಾಗೂ ಕಕ್ಕೇರಿ ಗ್ರಾಮಗಳಿಗೆ ಮತ್ತು ಅಲ್ಲಿನ ನೀರಾವರಿ ಪಂಪ್‌ಸೆಟ್‌ಗಳ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸಂಬಂಧಪಟ್ಟ ಕಾರ್ಯನಿರ್ವಾಹಕ ಇಂಜಿನೀಯರ್ ಮಾಹಿತಿ ನೀಡಿದ್ದಾರೆ.

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon