ಪ್ರಜಾನೆರಳು ಇಂಪ್ಯಾಕ್ಟ್: ತಹಶೀಲ್ದಾರ ಕೋಮಾರ ವಿರುದ್ಧ ವಿಚಾರಣೆಗೆ ಆದೇಶ

WhatsApp
Telegram
Facebook
Twitter
LinkedIn

ಬೆಳಗಾವಿ: ಜಾಂಬೋಟಿ ಹತ್ತಿರದ ಧಾಬಾವೊಂದರಲ್ಲಿ ಮಟ ಮಟ ಮಧ್ಯಾಹ್ನವೇ ಎಣ್ಣೆ ಪಾರ್ಟಿ ಮಾಡುವಾಗ ಪ್ರಜಾ ನೆರಳು ಪತ್ರಿಕೆಯ ಪ್ರತಿನಿಧಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದ ಸರ್ಕಾರಿ ಅಧಿಕಾರಿಗಳಿಗೆ ಈಗ ನಡುಕ ಶುರುವಾಗಿದೆ.

ಇದೇ ಸೆಪ್ಟೆಂಬರ್ 30ರ ಮಧ್ಯಾಹ್ನ ಜಾಂಬೋಟಿ ಬಳಿಯ ಸಂಗೀತಾ ಧಾಬಾದಲ್ಲಿ ಎಣ್ಣೆ ಪಾರ್ಟಿ ಮಾಡುತ್ತಿದ್ದ ಖಾನಾಪುರ ತಹಶೀಲ್ದಾರ ದುಂಡಪ್ಪ ಕೋಮಾರ ಇವರು ನಮ್ಮ ಪ್ರತಿನಿಧಿಗೆ ಸಿಕ್ಕಿ ಬಿದ್ದಿದ್ದರು. ಇವರೊಂದಿಗೆ ಧಾಬಾದಲ್ಲಿ ಕಂದಾಯ ನಿರೀಕ್ಷಕ ರಮೇಶ ಕೋಲ್ಕಾರ ಹಾಗೂ ಉಪ ತಹಶೀಲ್ದಾರ ತಂಗೋಳಿ ಇವರು ಕೂಡ ಇದ್ದರು. ಈ ಬಗ್ಗೆ ಪ್ರಜಾ ನೆರಳು ದಿನಪತ್ರಿಕೆಯು ವಿವರವಾದ ವರದಿಯನ್ನು ಪ್ರಕಟಿಸಿತ್ತು.

ಸದ್ಯ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್ ಅವರು ಸದರಿ ಮೂವರು ಅಧಿಕಾರಿಗಳ ವಿರುದ್ಧ ವಿಚಾರಣೆಗೆ ಆದೇಶಿಸಿದ್ದಾರೆ. ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಅವರನ್ನು ಈ ಪ್ರಕರಣದ ವಿಚಾರಣಾ ಅಧಿಕಾರಿಯನ್ನಾಗಿ ಜಿಲ್ಲಾಧಿಕಾರಿಯವರು ನೇಮಿಸಿ ಆದೇಶ ಹೊರಡಿಸಿದ್ದಾರೆ. ನಿಯಮಾನುಸಾರ ಈ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಯವರು ಸೂಚಿಸಿದ್ದಾರೆ.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon