ಚಿತ್ರಕಲಾ ಪರಿಷತ್ತಿನಲ್ಲಿ ಓಡಿಸ್ಸಾ ಇತಿಹಾಸ ಸಾರುವ “ದಿ ಆರ್ಟ್‌ ಆಫ್ ಪಟಚಿತ್ರ” ಪ್ರದರ್ಶನ

WhatsApp
Telegram
Facebook
Twitter
LinkedIn

ಬೆಂಗಳೂರು: ಓಡಿಸ್ಸಾದ ವಿವಿಧ ಐತಿಹಾಸಿಕ ಮತ್ತು ಸಾಂಸ್ಕೃತಿಕ ಕುರುಹುಗಳನ್ನು ಸಾರುವ ಲಿಪಿಕಾ ಮಹಾಪಾತ್ರ ಅವರ ಅವರ “ದಿ ಆರ್ಟ್‌ ಆಫ್ ಪಟಚಿತ್ರ” ಪ್ರದರ್ಶನ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯುತ್ತಿದೆ.

ಈ ಚಿತ್ರಪ್ರದರ್ಶನಕ್ಕೆ ಡೆಕ್ಕನ್ ಅಂತಾರಾಷ್ಟ್ರೀಯ ಸ್ಕೂಲ್ ನ ಪ್ರಾಂಶುಪಾಲೆ ಉಷಾದೇವಿ, ಫೈನ್ ಆರ್ಟ್‌ ನ ಮುಖ್ಯಸ್ಥೆ ಸೀಮಾ ಕವಲೆ ಚಾಲನೆ ನೀಡಿದರು. ಪಟಚಿತ್ರ ಪ್ರದರ್ಶನದಲ್ಲಿ ಓಡಿಸ್ಸಾದ ಪುರಿ ದೇವಾಲಯ ಇತಿಹಾಸ, ಅಲ್ಲಿನ ವಿವಿಧ ಸಾಂಸ್ಕೃತಿ, ಜಾನಪದ ಕಲೆಗಳು, ನೃತ್ಯ ಸಂಗೀತ ಪರಂಪರೆ ಸಾರುವ ಚಿತ್ರಪಟಗಳು ನೋಡುಗರ ಗಮನ ಸೆಳೆಯುತ್ತಿವೆ. ಕಾನೂನು ಸಚಿವ ಹೆಚ್.ಕೆ ಪಾಟೀಲ್ ಕೂಡ ಪ್ರದರ್ಶನಕ್ಕೆ ಖುದ್ದಾಗಿ ಭೇಟಿ ನೀಡಿದ್ದು, ವಿಶಿಷ್ಟ ಚಿತ್ರಕಲೆಯನ್ನು ಅಸ್ವಾಧಿಸಿ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ಸದ್ಯ ಬೆಂಗಳೂರಿನಲ್ಲಿಯೇ ನೆಲೆಸಿರುವ ಓಡಿಸ್ಸಾ ಮೂಲದ ಖ್ಯಾತ ಕಲಾವಿದೆ ಲಿಪಿಕಾ ಮಹಾಪಾತ್ರ ಅವರಿಗೆ ಪತಿ ಪ್ರಭಾತ್ ಮಹಾಪಾತ್ರ ಅವರು ಬೆನ್ನೆಲುಬಾಗಿ ನಿಂತು ಈ ವಿಶಿಷ್ಟ ಪಟಚಿತ್ರ ಪ್ರದರ್ಶನವನ್ನು ಅಚ್ಚುಕಟ್ಟಾಗಿ ಸಜ್ಜುಗೊಳಿಸಿದ್ದಾರೆ. ಓಡಿಸ್ಸಾ ಜಗನ್ನಾಥಪುರಿಗೆ ಸೇರಿದ ಪ್ರಾಚೀನ ಮತ್ತು ಸಾಂಪ್ರದಾಯಿಕ ಕಲೆಯಾದ ಪಟಚಿತ್ರಕ್ಕೆ ಕಲಾಪ್ರೇಮಿಗಳಿಂದ ಅತ್ಯುತ್ತಮ ಸ್ಪಂದನೆ ಅಂತೂ ದೊರೆಯುತ್ತಿದೆ. ತಮಿಳುನಾಡಿನ ತಂಜಾವೂರಿಗೆ ಸಂಬಂಧಿಸಿದ ಚಿತ್ರಕಲೆ ಮತ್ತು ಮೈಸೂರು ಅರಮನೆಯ ಭಿತ್ತಿಚಿತ್ರಗಳಂತೂ ಪ್ರಶಂಸನೀಯವಾಗಿದೆ.

ಸಂಪೂರ್ಣವಾಗಿ ಟಸರ್ ಬಟ್ಟೆಯ ಮೇಲೆ ಸಾಂಪ್ರದಾಯಿಕ ಹಾಗೂ ನೈಸರ್ಗಿಕ ಬಣ್ಣಗಳನ್ನು ಬಳಸಿ ಪಟಚಿತ್ರವನ್ನು ತಯಾರಿಸಲಾಗುತ್ತದೆ. ಹೂವುಗಳು, ಸಮುದ್ರದ ಚಿಪ್ಪುಗಳು ಮತ್ತು ವಿವಿಧ ನೈಸರ್ಗಿಕ ಮೂಲಗಳಿಂದ ತಯಾರಿಸಿದ ಬಣ್ಣಗಳನ್ನು ಮಾತ್ರ ಇದರಲ್ಲಿ ಬಳಸಾಗುತ್ತದೆ. ಯಾವುದೇ ರಾಸಾಯನಿಕಗಳನ್ನು ಬಳಸಲಾಗುವುದಿಲ್ಲ. ಶ್ರೀಕೃಷ್ಣ, ಹನುಮಂತ, ರಾಮ ಹಾಗೂ ಜಗನ್ನಾಥ ಸ್ವಾಮಿಯ ವಿವಿಧ ಸ್ವರೂಪಗಳು ಮತ್ತು ಧಾರ್ಮಿಕ ಕಥೆಗಳ ಆಧಾರದ ಮೇಲೆ ಈ ವರ್ಣಚಿತ್ರಗಳನ್ನು ರಚಿಸಲಾಗುತ್ತದೆ.

ಲಿಪಿಕಾ ಮಹಾಪಾತ್ರ ಪ್ರದರ್ಶನದ ಕುರಿತು ಮಾತನಾಡಿ, ಓಡಿಸ್ಸಾದ ಸಾಂಪ್ರದಾಯಿಕ ಕಲೆಯನ್ನು ಸಾರುವ ಚಿತ್ರಗಳನ್ನು ದೇಶದ ಜನರಿಗೆ ಪರಿಚಯಿಸುವ ಹಿನ್ನೆಲೆಯಲ್ಲಿ ಈ ಪ್ರದರ್ಶನ ಆಯೋಜಿಸಲಾಗಿದೆ. ಕಳೆದ ಇಪ್ಪತ್ತೈದು ವರ್ಷಗಳಿಂದ ಈ ಕ್ಷೇತ್ರದಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದು, ಸುಮಾರು ಎಂಟು ತಿಂಗಳುಗಳ ಪರಿಶ್ರಮದಿಂದ ಪೂರ್ಣ ಹನುಮಾನ್ ಚಾಲೀಸಾ ಕಥೆ ಮತ್ತು ಮಂತ್ರಗಳನ್ನು ಒಳಗೊಂಡ ಬೃಹತ್ ಚಿತ್ರಕಲಾಕೃತಿಯನ್ನು ರಚಿಸಿದ್ದೇನೆ. ಇಲ್ಲಿ ಪ್ರದರ್ಶನಕ್ಕಿಡಲಾದ ಕಲಾಕೃತಿಗಳ ಬೆಲೆಯನ್ನು ಐದು ಸಾವಿರ ರೂಪಾಯಿಗಳಿಂದ ಆರಂಭಗೊಂಡು ಎರಡು ಲಕ್ಷ ರೂಪಾಯಿಗಳವರೆಗೆ ನಿಗದಿಪಡಿಸಲಾಗಿದೆ ಎಂದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon