ಬೆಂಗಳೂರು: ರಾಜ್ಯ ಸರ್ಕಾರ ಕೊಡಮಾಡುವ 2020ನೇ ಸಾಲಿನ ಪ್ರತಿಷ್ಠಿತ ಡಾ. ರಾಜಕುಮಾರ್ ಜೀವಮಾನಸಾಧನೆ ಪ್ರಶಸ್ತಿಗೆ ಹಿರಿಯ ನಟಿ ಡಾ. ಜಯಮಾಲ ಹಾಗೂ 2021ನೇ ಸಾಲಿಗೆ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು ಭಾಜನರಾಗಿದ್ದಾರೆ.
2020 ಹಾಗೂ 2021ನೇ ಕ್ಯಾಲೆಂಡರ್ ವರ್ಷದ ಪ್ರಶಸ್ತಿ ಆಯ್ಕೆ ಸಲಹಾ ಸಮಿತಿ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಿ, ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. 2020ನೇ ಸಾಲಿನ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಹಿರಿಯ ನಿರ್ದೇಶಕ ಎಂ.ಎಸ್. ಸತ್ಯು, 2021ನೇ ಸಾಲಿಗೆ ಕೆ. ಶಿವರುದ್ರಯ್ಯ ಹಾಗೂ ಡಾ. ವಿಷ್ಣುವರ್ದನ್ ಪ್ರಶಸ್ತಿಗೆ ಹಿರಿಯ ಸ್ಥಿರ ಛಾಯಗ್ರಾಹಕ ಪ್ರಗತಿ ಅಶ್ವತ್ಥನಾರಾಯಣ, 2021ನೇ ಸಾಲಿಗೆ ಹಿರಿಯ ನಟ ಸುಂದರ್‌ರಾಜ್ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ತಲಾ 5 ಲಕ್ಷ ರೂ. ನಗದು ಮತ್ತು 50 ಗ್ರಾಂ ಚಿನ್ನದ ಪದಕವನ್ನು ಹೊಂದಿದೆ.













