ಕುಟುಂಬಸ್ಥರನ್ನೇ ಕೊಲೆ ಮಾಡಿದ್ದ ಪಾಪಿ ಎನ್‌ಕೌಂಟರ್ ಗೆ ಬಲಿ

WhatsApp
Telegram
Facebook
Twitter
LinkedIn

ಬರೇಲಿ: 38 ವರ್ಷದ ವ್ಯಕ್ತಿ ತನ್ನ ಅತ್ತೆ, ಭಾವನನ್ನು ಕೊಲೆ ಮಾಡಿ, 30 ವರ್ಷದ ಪತ್ನಿಯನ್ನು ಮತ್ತು ಮಕ್ಕಳನ್ನು ಗಂಭೀರವಾಗಿ ಗಾಯಗೊಳಿಸಿದ ಘಟನೆಯ ಮರುದಿನವೇ ಪೊಲೀಸ್ ಎನ್‌ಕೌಂಟರ್ ನಲ್ಲಿ ಆತನನ್ನು ಗುಂಡಿಕ್ಕಿ ಕೊಂದಿದ್ದಾರೆ.

ಸರಣಿ ಕೊಲೆ ಆರೋಪಿ ಅಫ್ಜರ್ ಖಾನ್ ಗ್ರಾಮದ ಹೊರವಲಯದಲ್ಲಿ ಇದ್ದು ಶಸ್ತ್ರಸಜ್ಜಿತನಾಗಿದ್ದಾನೆ ಎನ್ನುವ ಸುಳಿವು ದೊರೆತಿತ್ತು. ಆತ ಪುನಃ ತನ್ನ ಹೆಂಡತಿಯನ್ನು ಕೊಲ್ಲಲು ಯೋಜನೆ ಹಾಕುತ್ತಿದ್ದಾನೆ ಎನ್ನುವ ಮಾಹಿತಿ ಇತ್ತು. ಈ ಕಾರಣಗಳಿಗೆ ಅವನನ್ನು ಬಂಧಿಸಲು ಪೊಲೀಸ್ ತಂಡ ತೆರಳಿದಾಗ ಆತ ಮನಬಂದಂತೆ ಗುಂಡು ಹಾರಿಸಿದ. ಈ ಸಮಯದಲ್ಲಿ ಇಬ್ಬರು ಸಿಬ್ಬಂದಿಗಳಿಗೆ ಗಾಯಗಳಾದವು. ನಮ್ಮ ಸಿಬ್ಬಂದಿಗಳು ಪ್ರತಿ ದಾಳಿ ನಡೆಸಿದಾಗ ಆತ ಮೃತಪಟ್ಟ ಎಂದು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಖಾನ್ ಪತ್ನಿ ಸೈಮಾ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಲಾಗಿದೆ, ಘಟನಾ ಸ್ಥಳದ  ಪರಿಶೀಲನೆಯನ್ನು ನಡೆಸಲಾಗುತ್ತಿದೆ. ಬಿಎನ್ಎಸ್ ಸೆಕ್ಷನ್ 103 (ಕೊಲೆ) ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ತಿಳಿಸಿದ್ದಾರೆ.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon