ಕ್ರೋಮ್ಯಾಟಿಕ್ ಕಾನ್ಫ್ಲುಯೆನ್ಸ್ ಸಂಸ್ಥೆಯಿಂದ ವೈವಿಧ್ಯಮಯ ವರ್ಣಚಿತ್ರ ಕಲಾ ಪ್ರದರ್ಶನ

WhatsApp
Telegram
Facebook
Twitter
LinkedIn

ಬೆಂಗಳೂರು: ಕ್ರೋಮ್ಯಾಟಿಕ್ ಕಾನ್ಫ್ಲುಯೆನ್ಸ್ ಸಂಸ್ಥೆಯ ವತಿಯಿಂದ ಶ್ಯಾಡೋ ಶೇಪ್ಸ್ ಸ್ಟೋರೀಸ್ ಶೀರ್ಷಿಕೆಯಡಿ ಆಯೋಜಿಸಲಾಗಿರುವ ವರ್ಣಚಿತ್ರ ಕಲಾ ಪ್ರದರ್ಶನವು ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಗ್ಯಾಲರಿ 3 ಹಾಗೂ 4ರಲ್ಲಿ ನಡೆಯುತ್ತಿದ್ದು, ನೋಡುಗರನ್ನು ಅಯಸ್ಕಾಂತದಂತೆ ತನ್ನತ್ತ ಸೆಳೆಯುತ್ತಿದೆ.

ಪ್ರದರ್ಶನದ ಕುರಿತು ಕ್ರೋಮ್ಯಾಟಿಕ್ ಕಾನ್ಫ್ಲುಯೆನ್ಸ್ ಸಂಸ್ಥೆಯ ಸಂಸ್ಥಾಪಕಿ ಹಾಗೂ ಕ್ಯುರೇಟರ್ ನೆಹನಾಜ್ ತಾಜ್ ಮಾದ್ಯಮಗಳ ಜೊತೆ ಮಾತನಾಡಿ, ನಮ್ಮ ಸಂಸ್ಥೆ 3 ವರ್ಷಗಳನ್ನು ಪೂರೈಸಿದೆ, ಇದು ನಮ್ಮ 10ನೇ ಚಿತ್ರಕಲಾ ಪ್ರದರ್ಶನವಾಗಿದೆ. ಈ ಹಿಂದೆ ನಾವು ಇದೇ ಚಿತ್ರಕಲಾ ಪರಿಷತ್, ರಂಗೋಲಿ ಆರ್ಟ್ ಸೆಂಟರ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಹಾಗೂ ಗೋವಾದ ಉಜ್ವಲ ಆರ್ಟ್ ಗ್ಯಾಲರಿ ಸೇರಿದಂತೆ ಹಲವು ಪ್ರಮುಖ ಸ್ಥಳಗಳಲ್ಲಿ ಕಲಾ ಪ್ರದರ್ಶನಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದೇವೆ ಎಂದು ತಿಳಿಸಿದರು.

ರಿಯಲಿಸ್ಟಿಕ್, ಚಾರ್ಕೋಲ್, ಟೆಕ್ಸ್ಚರ್ ಆರ್ಟ್, ಅಬ್ಸ್ಟ್ರಾಕ್ಟ್, ಇಂಪ್ರೆಷನ್ ಹಾಗೂ ಕ್ಯಾನ್ವಾಸ್ ಮೇಲೆ ಅಕ್ರಿಲಿಕ್ ಬಳಸಿ ಮೂಡಿಬಂದಿರುವ ವೈವಿಧ್ಯಮಯ ಚಿತ್ರಕಲಾ ಕೃತಿಗಳು ಪ್ರದರ್ಶನಗೊಳ್ಳುತ್ತಿವೆ. ಬೆಂಗಳೂರು, ದೆಹಲಿ, ಪುಣೆ, ಗುಜರಾತ್ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿರುವ 28 ಕಲಾವಿದರು ತಮ್ಮ ವಿಶಿಷ್ಟ ಕಲಾಕೃತಿಗಳನ್ನು ಪ್ರದರ್ಶಿಸುತ್ತಿದ್ದಾರೆ. ಕಲಾಭಿಮಾನಿಗಳಿಗೆ ಕೈಗೆಟುಕುವ ದರದಲ್ಲಿ ಕಲಾಕೃತಿಗಳು ಲಭ್ಯವಿದ್ದು, ಆರಂಭಿಕ ಬೆಲೆಯನ್ನು 2,500 ರೂ ಗೆ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹಿರಿಯ ವಾಟರ್ ಕಲರ್ ಕಲಾವಿದರಾದ ಕಾಂತರಾಜ್ ಅವರು ಪ್ರದರ್ಶನವನ್ನು ಉದ್ಘಾಟಿಸಿದ್ದಾರೆ. 3 ವರ್ಷಗಳ ಹಿಂದೆ ನಮ್ಮ ಮೊದಲ ಪ್ರದರ್ಶನವನ್ನೂ ಅವರೇ ಉದ್ಘಾಟಿಸಿದ್ದರು. ಇದೀಗ 10ನೇ ಪ್ರದರ್ಶನಕ್ಕೂ ಅವರೇ ಚಾಲನೆ ನೀಡಿ, ಯುವ ಹಾಗೂ ಹಿರಿಯ ಕಲಾವಿದರ ವರ್ಣಚಿತ್ರಗಳನ್ನು ವೀಕ್ಷಿಸಿ, ಅವರುಗಳ ಪರಿಶ್ರಮ ಮತ್ತು ವೃತ್ತಿಪರತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ ಎಂದು ಹೇಳಿದರು.

ಈ ಪ್ರದರ್ಶನವು ಆಗಸ್ಟ್ 30 ರವರೆಗೆ, ಬೆಳಗ್ಗೆ 11 ರಿಂದ ಸಂಜೆ 7 ಗಂಟೆಯವರೆಗೆ ನಡೆಯಲಿದ್ದು, ಸಾರ್ವಜನಿಕರು, ಕಲಾಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರದರ್ಶನವನ್ನು ವೀಕ್ಷಿಸಬೇಕು ಎಂದು ಸಂಸ್ಥೆಯ ಪರವಾಗಿ ನೆಹನಾಜ್ ತಾಜ್ ಕೋರಿದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon