ಶಾಪರ್ಸ್ ಸ್ಟಾಪ್, ಪೀಟರ್ ಇಂಗ್ಲೆಂಡ್ ಸಹಯೋಗ; ಪುರುಷರ ಉಡುಗೆಗಳ ನೂತನ ಪರ್ವ ಪ್ರಾರಂಭ

WhatsApp
Telegram
Facebook
Twitter
LinkedIn

ಬೆಂಗಳೂರು: ಭಾರತದ ಮುಂಚೂಣಿ ಪ್ರೀಮಿಯಮ್ ಫ್ಯಾಶನ್ ಮತ್ತು ಸೌಂದರ್ಯವರ್ಧಕಗಳ ರಿಟೇಲ್ ಔಟ್ಲೆಟ್ ಶಾಪರ್ಸ್ ಸ್ಟಾಪ್ ಮತ್ತು ಪೀಟರ್ ಇಂಗ್ಲೆಂಡ್ ಬ್ರಾಂಡ್ ಸಹಯೋಗದಲ್ಲಿ ಸ್ಟಾಪ್ X ಪೀಟರ್ ಇಂಗ್ಲೆಂಡ್ ಹೊಸ ಐತಿಹಾಸಿಕ ಪುರುಷರ ಉಡುಗೆಯ ಕಲೆಕ್ಷನ್ ಅನ್ನು ಘೋಷಿಸುವ ಮೂಲಕ ಪುರುಷರ ಉಡುಗೆಗಳ ವಿಚಾರದಲ್ಲಿ ಮಹತ್ತರವಾದ ಅಧ್ಯಾಯ ಪ್ರಾರಂಭಿಸಿವೆ.

ಭಾರತದ ಅತ್ಯಂತ ವಿಶ್ವಸನೀಯ ಪುರುಷರ ಉಡುಗೆ ಬ್ರಾಂಡ್‌ಗಳ ಪೈಕಿ ಒಂದಾದ ಪೀಟರ್ ಇಂಗ್ಲೆಂಡ್‌ ನೊಂದಿಗಿನ ಈ ಪ್ರಮುಖ ಸಹಯೋಗದ ಮೂಲಕ ಸ್ಟಾಪ್ ಮೆನ್ಸ್‌ವೇರ್ ಭಾರತೀಯ ಪುರುಷರಿಗಾಗಿ ಕಾಲಾತೀತ ಸ್ಟೈಲ್‌ಅನ್ನು ತತ್ಕಾಲೀನ ವಿನ್ಯಾಸದೊಂದಿಗೆ ಸಂಯೋಜಿಸಿದೆ. ಇದು ಒಂದು ಹೊಸ ಪಯಣಕ್ಕೆ ಮುನ್ನುಡಿ ಬರೆದಂತಾಗಿದೆ.

ದಶಕಗಳ ಕಾಲದಿಂದಲೂ ಭಾರತದಲ್ಲಿ ಪುರುಷರ ಫ್ಯಾಶನ್‌ ಅನ್ನು ರೂಪಿಸಿರುವ ಬ್ರಾಂಡ್ ಆಗಿರುವ ಪೀಟರ್ ಇಂಗ್ಲೇಂಡ್ ಮತ್ತು ಬಟ್ಟೆ ಮತ್ತು ಸೌಂದರ್ಯವರ್ಧಕಗಳ ಪರಂಪರೆಯ ಮೇಲೆ ನಿರ್ಮಾಣಗೊಂಡಿರುವ ಶಾಪರ್ಸ್ ಸ್ಟಾಪ್, ಸದಾ ಬದಲಾಗುತ್ತಿರುವ ಗ್ರಾಹಕ ಇಚ್ಛೆಗಳನ್ನು ಅರ್ಥಮಾಡಿಕೊಂಡು ಎಲ್ಲರಿಗೂ ಲಭ್ಯವಾಗುವಂತಹ ಗುಣಮಟ್ಟದ ಪುರುಷರ ಉಡುಗೆಗಳನ್ನು ಪರಿಚಯಿಸಿದೆ. ಆಫೀಸ್ ಔಟ್ಫಿಟ್ ಗಳು ಮತ್ತು ವಿಶೇಷ ಆಚರಣೆಗಳಿಗಾಗಿ ಹೊಸ ಕಲೆಕ್ಷನ್ ಗಳನ್ನು ವಿನ್ಯಾಸಗೊಳಿಸಲಾಗಿದೆ. ವಾರ್ಡ್ ರೋಬ್ ಗೆ ಅವಶ್ಯಕ ಉಡುಗೆಗಳನ್ನು ಒದಗಿಸಲು ಮುಂದಾಗುವ ಮೂಲಕ ಹೊಸ ಚಿಂತನಾಶೀಲತೆಗೆ ಮುನ್ನಡಿ ಬರೆದಂತಾಗಿದೆ

ಈ ಸಹಯೋಗವು ಪೀಟರ್ ಇಂಗ್ಲೆಂಡ್‌ ಮತ್ತು ಸ್ಟಾಪ್ ಮೆನ್ಸ್‌ವೇರ್ ನ ವಿಭಿನ್ನ ಸಹಯೋಗವಾಗಿದ್ದು, ಕ್ಲಾಸಿಕ್, ತತ್ಕಾಲೀನ ಸ್ಟೈಲಿಂಗ್ ಹಾಗೂ ಗುಣಮಟ್ಟಕ್ಕೆ ಒತ್ತು ನೀಡಲಾಗಿದೆ. ಈ ಹೊಚ್ಚಹೊಸ ಸಂಗ್ರಹ ರಾಷ್ಟ್ರವ್ಯಾಪಿಯಾಗಿ ಇರುವ 53 ಶಾಪರ್ಸ್ ಸ್ಟಾಪ್ ಮಳಿಗೆಗಳಾದ್ಯಂತ ಲಭ್ಯವಿದ್ದು, ಗ್ರಾಹಕರಿಗೆ ಎರಡೂ ಬ್ರಾಂಡ್‌ಗಳ ಬಲ ಬಂದಾಗಿದೆ. ತದನಂತರದಲ್ಲಿ ಈ ವಿಶೇಷ ಸಂಗ್ರಹವನ್ನು ಭಾರತದಾದ್ಯಂತ ಇರುವ ಎಲ್ಲಾ ಮಳಿಗೆಗಳಲ್ಲೂ ಲಭ್ಯಗೊಳಿಸಲಾಗುತ್ತಿದೆ.

ಬುಧವಾರ ರಾಜಾಜಿನಗರದ ಒರಿಯನ್ ಮಾಲ್ ನಲ್ಲಿ  ಸಹಯೋಗವನ್ನು ಅಧಿಕೃತವಾಗಿದೆ ಘೋಷಿಸಿ ಮಾತನಾಡಿದ ಶಾಪರ್ಸ್‌ ಸ್ಟಾಪ್‌ನ ಎಂ.ಡಿ ಮತ್ತು ಸಿಇಒ ಕವೀಂದ್ರ ಮಿಶ್ರ, ದಶಕಗಳ ಕಾಲದಿಂದಲೂ ಸ್ಟಾಪ್ ಶಾಪರ್ಸ್ ಸ್ಟಾಪ್ ಫ್ಯಾಶನ್ ಲಕ್ಷಾಂತರ ಗ್ರಾಹಕರ ವಿಶ್ವಾಸವನ್ನು ಗಳಿಸಿದೆ. ಗ್ರಾಹಕರ ಇಚ್ಛೆಗಳು ಬದಲಾಗುತ್ತಿದ್ದಂತೆ, ನಾವು ಮುಂದಿನ ಪೀಳಿಗೆಗಾಗಿ ಬ್ರಾಂಡ್‌ ಅನ್ನು ಮರುಸೃಷ್ಟಿಸಬೇಕು ಎಂದು ಯೋಚಿಸಿದೆವು. ಪೀಟರ್ ಇಂಗ್ಲೆಂಡ್‌ನೊಂದಿಗಿನ ನಮ್ಮ ಸಹಯೋಗವು ಗ್ರಾಹಕರಿಗಾಗಿ ಅದ್ವಿತೀಯ ಗುಣಮಟ್ಟ, ತತ್ಕಾಲೀನ ಸ್ಟೈಲ್ ಮತ್ತು ಹೆಚ್ಚಿನ ಮೌಲ್ಯ ಒದಗಿಸಲಿದೆ. ಇದು ಭಾರತೀಯ ಪುರುಷರ ಉಡುಗೆಯಲ್ಲಿನ ಎರಡು ಐತಿಹಾಸಿಕ ಹೆಸರುಗಳನ್ನು ಒಂದುಗೂಡಿಸಿದೆ ಎಂದು ವ್ಯಾಖ್ಯಾನಿಸಿದರು.

ಆದಿತ್ಯ ಬಿರ್ಲಾ ಲೈಫ್‌ಸ್ಟೈಲ್ ಬ್ರಾಂಡ್ಸ್ ಲಿಮಿಟೆಡ್‌ನ ಸಿಇಒ ವಿಶಾಕ್ ಕುಮಾರ್ ಮಾತನಾಡಿ, ಶಾಪರ್ಸ್ ಸ್ಟಾಪ್‌ನೊಂದಿಗಿನ ನಮ್ಮ ಸಹಯೋಗವು ಎರಡು ದಶಕಗಳಿಗಿಂತಲೂ ಹೆಚ್ಚಿನ ಕಾಲದ್ದಾಗಿದೆ. ಇನ್ನೂ ಹೆಚ್ಚಿನ ಗ್ರಾಹಕರಿಗೆ ಒಟ್ಟಿಗೆ ಸೇವೆ ಒದಗಿಸಲು ಹೊಸ ಪರಿಕಲ್ಪನೆಗಳನ್ನು ಪರಿಶೀಲಿಸುತ್ತಿದ್ದಾಗ ಸ್ಟಾಪ್ X ಪೀಟರ್ ಎನ್ನುವ ಶಕ್ತಿಶಾಲಿಯಾದ ಐಡಿಯಾ ನಮ್ಮಲ್ಲಿ ಹುಟ್ಟಿಕೊಂಡಿತು ಎಂದು ಹೇಳಿದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon