ಅಹಂಭಾವವನ್ನು ದೂರಮಾಡಿದರೆ ಮಾತ್ರ ಜೀವನದಲ್ಲಿ ಸಾಧನೆಯನ್ನು ಮಾಡಬಹುದು: ಶ್ರೀನಿವಾಸ ಪ್ರಭು

WhatsApp
Telegram
Facebook
Twitter
LinkedIn

ಬೆಂಗಳೂರು: ಬದುಕಿನಲ್ಲಿ ಗುರಿ ಮುಖ್ಯ. ಗುರಿ ಮುಟ್ಟುವಾಗ ಅಹಂಭಾವವನ್ನು ದೂರ ಮಾಡಬೇಕು, ಆಗ ಮಾತ್ರ ಮನುಷ್ಯ ಜೀವನದಲ್ಲಿ ಸಾಧನೆಯನ್ನು ಮಾಡಬಹುದು ಎಂದು ಖ್ಯಾತ ನಟ, ನಿರ್ದೇಶಕ, ರಂಗಕರ್ಮಿ ಶ್ರೀನಿವಾಸ ಪ್ರಭು ಹೇಳಿದರು.

ಬುಧವಾರ ಆಚಾರ್ಯ ಪಾಠಶಾಲಾ ವಾಣಿಜ್ಯ ಕಾಲೇಜಿನಲ್ಲಿ ಕಾಲೇಜು ದಿನಾಚರಣೆಯ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಹಂಕಾರ ಎರಡು ಅಲಗಿನ ಖಡ್ಗ, ಮನಸ್ಸಿನ ಒಳಗಡೆ ಮತ್ತೊಂದು ಸಮಾಜದಲ್ಲಿ ನಮ್ಮನ್ನು ನಾವೇ ಕತ್ತರಿಸಿಕೊಳ್ಳುಬಹುದಾದ ಖಡ್ಗ ಇದಾಗಿದೆ. ಅದನ್ನು ಆತ್ಮ ವಿಶ್ವಾಸವನ್ನು ಮಾತ್ರ ಮೈಗೂಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಎ.ಪಿ.ಎಸ್‌ ವಿಶ್ವಸ್ಥ ಸಂಸ್ಥೆಯ ಅಧ್ಯಕ್ಷ ಸಿಎ.ಡಾ.ವಿಷ್ಣುಭರತ್‌ ಆಲ್ಲಂಪಲ್ಲಿ ಮಾತನಾಡಿ, ಶೈಕ್ಷಣಿಕವಾಗಿ ಪದವಿ ಪಡೆಯುವ ಜೊತೆಗೆ ಪ್ರೊಪೆಷನಲ್‌ ಕೋರ್ಸ್‌ಗಳಾದ ಸಿ.ಎ ಮತ್ತು ಇತರೆ ಸಂಬಂಧಿತ ಕೋರ್ಸ್‌ಗಳನ್ನು ಮಾಡಿ ಜೀವನವನ್ನು ಬದಲಾಯಿಸಿ ಕೊಳ್ಳಬಹುದು ಎಂದರು.

ಕಾರ್ಯಕ್ರಮ ನಾಡಗೀತೆಯೊಂದಿಗೆ ಪ್ರಾರಂಭವಾಯಿತು. ಆಶ್ರಿತಾ ಪ್ರಾರ್ಥನೆಯನ್ನು ಹಾಡಿದರು. ನಂತರ ವೇದಿಕೆಯ ಮೇಲಿರುವ ಗಣ್ಯರಿಗೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಪರಮೇಶ್‌ ಸ್ವಾಗತ ಕೋರಿದರು. ಸಂಸ್ಥಾಪಕರ ಭಾವ ಚಿತ್ರಕ್ಕೆ ಪುಷ್ಪ ಸಮರ್ಪಣೆ ಮತ್ತು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅನಂತರ ಮುಖ್ಯ ಅತಿಥಿಗಳಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.

ನಂತರ ವೇದಿಕೆ ಮೇಲಿರುವ ಎಲ್ಲಾ ಗಣ್ಯರು ಸಾಂಸ್ಕೃತಿಕ ಮತ್ತು ಕ್ರೀಡೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ  ಬಹುಮಾನ ಮತ್ತು ಪ್ರಮಾಣ ಪತ್ರ ನೀಡಿದರು. ಕಾರ್ಯಕ್ರಮದ ಅಂತಿಮ ಘಟ್ಟ ವಂದನಾರ್ಪಣೆಯನ್ನು ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೆ.ಎಂ.ವೆಂಕಟೇಶಯ್ಯ ನೆರವೇರಿಸಿದರು, ಇಡೀ ಕಾರ್ಯಕ್ರಮದ ನಿರೂಪಣೆಯನ್ನು ಸಾಂಸ್ಕೃತಿಕ ಸಮಿತಿ ಸಂಚಾಲಕಿ ಡಾ.ಭಾಗ್ಯಲಕ್ಷ್ಮೀ.ಎಸ್‌ ನಿರ್ವಹಿಸಿದರು.

ಸಂಸ್ಥೆಯ ಪದಾಧಿಕಾರಿಗಳಾದ ಪ್ರೊ.ಎ.ಪ್ರಕಾಶ್‌, ಪಿ. ಕೃಷ್ಣಸ್ವಾಮಿ, ಎ.ಆರ್.ಮಂಜುನಾಥ್‌, ದೈಹಿಕ ಶಿಕ್ಷಣ ನಿರ್ದೇಶಕ ಶಂಕರ್‌.ಎಂ, ಅಧ್ಯಾಪಕರು ಮತ್ತು ಅಧ್ಯಾಪಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

 

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon