ಡಾ. ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆಯಿಂದ ಹೊಸ ನೇತ್ರ ಆರೈಕೆ ಕೇಂದ್ರ ಪ್ರಾರಂಭ

WhatsApp
Telegram
Facebook
Twitter
LinkedIn

ಬೆಂಗಳೂರು: ಡಾ. ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆ ನಗರದ ಸುಂಕದಕಟ್ಟೆಯಲ್ಲಿ ಹೊಸ ನೇತ್ರ ಆರೈಕೆ ಕೇಂದ್ರವನ್ನು ಪ್ರಾರಂಭಿಸಿರುವುದಾಗಿ ಘೋಷಿಸಿದೆ.

ಒಟ್ಟು 6,400 ಚದರ ಅಡಿ ಸೂಪರ್ ಬಿಲ್ಟ್-ಅಪ್ ವಿಸ್ತೀರ್ಣ ಹೊಂದಿರುವ ಈ ಕೇಂದ್ರವು ಬೆಂಗಳೂರಿನಲ್ಲಿ ಡಾ. ಅಗರ್ವಾಲ್ಸ್ ಸಮೂಹದ 17ನೇ ಕೇಂದ್ರವಾಗಿದ್ದು, ನಗರದ ಪಶ್ಚಿಮ ಭಾಗದಲ್ಲಿ ವೇಗವಾಗಿ ಬೆಳೆಯುತ್ತಿರುವ ವಸತಿ ಪ್ರದೇಶಗಳಲ್ಲಿ ಒಂದಾದ ಸುಂಕದಕಟ್ಟೆ ಮತ್ತು ಸುತ್ತಮುತ್ತಲಿನ ನಿವಾಸಿಗಳಿಗೆ ಸಮಗ್ರ, ವಿಶ್ವಮಟ್ಟದ ನೇತ್ರ ಆರೈಕೆಯನ್ನು ಇನ್ನಷ್ಟು ಹತ್ತಿರಕ್ಕೆ ತರಲಿದೆ.

ಹೊಸ ಕೇಂದ್ರದಲ್ಲಿ ಸುಂಕದಕಟ್ಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ, ವಕ್ರೀಭವನ ದೋಷಗಳ ಚಿಕಿತ್ಸೆ, ರೆಟಿನಾ ಸೇವೆಗಳು, ಡಯಾಬಿಟಿಕ್ ರೆಟಿನೋಪತಿ ನಿರ್ವಹಣೆ, ಗ್ಲುಕೋಮಾ ನಿರ್ವಹಣೆ, ಕಾರ್ನಿಯಾ ಸೇವೆಗಳು, ಡ್ರೈ ಐ ಮೌಲ್ಯಮಾಪನ, ಕೆರಾಟೋಕೋನಸ್ ನಿರ್ವಹಣೆ, ಸ್ಕ್ವಿಂಟ್ ಚಿಕಿತ್ಸೆ, ಮಕ್ಕಳ ನೇತ್ರ ಚಿಕಿತ್ಸೆ, ಆಕ್ಯುಲೋಪ್ಲಾಸ್ಟಿ ಮತ್ತು ಆರ್ಬಿಟ್ ಸೇವೆಗಳು, ಯುವಿಯಾ ಚಿಕಿತ್ಸೆ, ನ್ಯೂರೋ-ಆಫ್ತಾಲ್ಮಾಲಜಿ, ಕಾಂಟ್ಯಾಕ್ಟ್ ಲೆನ್ಸ್ ಸೇವೆಗಳು ಸೇರಿದಂತೆ ಹಲವು ನೇತ್ರ ಚಿಕಿತ್ಸಾ ಸೇವೆಗಳು ಲಭ್ಯವಿವೆ.

ಈ ಕುರಿತು ಡಾ. ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆಯ ಪ್ರಾದೇಶಿಕ ಮುಖ್ಯಸ್ಥ ಡಾ. ಶ್ರೀನಿವಾಸನ್ ಜಿ. ರಾವ್ ಮಾತನಾಡಿ, ಸುಂಕದಕಟ್ಟೆಯಲ್ಲಿರುವ ನಮ್ಮ ಕೇಂದ್ರವನ್ನು ಅತ್ಯಾಧುನಿಕ ರೋಗನಿರ್ಣಯದಿಂದ ಹಿಡಿದು ಸಂಕೀರ್ಣ ಶಸ್ತ್ರಚಿಕಿತ್ಸಾ ವಿಧಾನಗಳವರೆಗೆ ಸಂಪೂರ್ಣ ನೇತ್ರ ಆರೈಕೆಯನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ ನಿರ್ಮಿಸಲಾಗಿದೆ. ಈ ಪ್ರದೇಶದ ರೋಗಿಗಳು ಇನ್ನು ಮುಂದೆ ವಿಶೇಷ ಚಿಕಿತ್ಸೆಗಳಿಗಾಗಿ ನಗರದ ದೂರದ ಭಾಗಗಳಿಗೆ ಪ್ರಯಾಣಿಸಬೇಕಾಗಿಲ್ಲ. ಸಾಮಾನ್ಯ ವೈದ್ಯಕೀಯ ಸಮಾಲೋಚನೆಯಾಗಿರಲಿ, ಕಣ್ಣಿನ ಪೊರೆ ಮೌಲ್ಯಮಾಪನವಾಗಿರಲಿ ಅಥವಾ ಸಂಕೀರ್ಣ ರೆಟಿನಾ ಮತ್ತು ಕಾರ್ನಿಯಾ ಸಮಸ್ಯೆಗಳಾಗಿರಲಿ, ನಮ್ಮ ತಜ್ಞ ವೈದ್ಯರ ತಂಡ ಮತ್ತು ಅತ್ಯಾಧುನಿಕ ತಂತ್ರಜ್ಞಾನವುಳ್ಳ ಲ್ಯಾಬ್ ಗಳು ಚಿಕಿತ್ಸೆ ಒದಗಿಸಲು ಸಜ್ಜಾಗಿವೆ ಎಂದಿದ್ದಾರೆ.

ಹೊಸ ಕೇಂದ್ರದ ಉದ್ಘಾಟನೆಯ ಅಂಗವಾಗಿ ಮತ್ತು ಸಮುದಾಯಕ್ಕೆ ಕೊಡುಗೆ ನೀಡುವ ಉದ್ದೇಶದಿಂದ ಕಣ್ಣಿನ ಪೊರೆ ನಿರ್ವಹಣೆ, ದೃಷ್ಟಿ ನಷ್ಟಕ್ಕೆ ಕಾರಣವಾಗಬಹುದಾದ ಗ್ಲುಕೋಮಾವನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವ ಮಹತ್ವ, ಡಯಾಬಿಟಿಕ್ ರೆಟಿನೋಪತಿ ತಡೆಗಟ್ಟುವಿಕೆ ಮತ್ತು ಮಕ್ಕಳ ದೃಷ್ಟಿಯ ರಕ್ಷಣೆಯ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ವಿಶೇಷ ನೇತ್ರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

ನೇತ್ರತಜ್ಞ ಡಾ. ಅಂತಾರಿಕ್ಷ್ ಜೆ. ಮೊಹ್ತಾ ಮಾತನಾಡಿ, ಸುಂಕದಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳು ಮತ್ತು ಯುವ ಕುಟುಂಬಗಳು ವಾಸಿಸುತ್ತಿದ್ದಾರೆ. ಇವರುಗಳಲ್ಲಿ ಡಿಜಿಟಲ್ ಪರದೆಗಳ ಮುಂದೆ ಹೆಚ್ಚು ಸಮಯ ಕಳೆಯುವ ಜೀವನಶೈಲಿಯಿಂದ ಕಣ್ಣಿನ ಆಯಾಸ ಮತ್ತು ಮಕ್ಕಳಲ್ಲಿ ಹೆಚ್ಚುತ್ತಿರುವ ಸಮೀಪದೃಷ್ಟಿ ಸೇರಿದಂತೆ ಕಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ರೋಗಲಕ್ಷಣಗಳು ಗಂಭೀರವಾದ ನಂತರ ಚಿಕಿತ್ಸೆ ಪಡೆಯುವ ಬದಲು, ನಿಯಮಿತ ತಪಾಸಣೆ ಮತ್ತು ಸುಲಭವಾಗಿ ಲಭ್ಯವಿರುವ ಆರೈಕೆಯ ಮೂಲಕ ಇಂತಹ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಬೇಕು ಎನ್ನುವುದು ನೂತನ ಕೇಂದ್ರದ ಉದ್ದೇಶವಾಗಿದೆ ಎಂದಿದ್ದಾರೆ.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon