5,46,698 ವಿದ್ಯಾರ್ಥಿಗಳು ಪಾಸ್, ಫಸ್ಟ್ ಟೈಮ್ ಶೇ.86.48 ಫಲಿತಾಂಶ: ಮಧು ಬಂಗಾರಪ್ಪ

WhatsApp
Telegram
Facebook
Twitter
LinkedIn

ಬೆಂಗಳೂರು: ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 5,46,698 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕರ್ನಾಟಕಕ್ಕೆ ಫಸ್ಟ್ ಟೈಂ ಶೇ.86.48 ಫಲಿತಾಂಶ ಬಂದಿದೆ. ಇದು ಐತಿಹಾಸಿಕ ದಿನ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹರ್ಷ ವ್ಯಕ್ತಪಡಿಸಿದರು.

ಈ ಸಂಬಂಧ ಗುರುವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 6,32,200 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 5,46,698 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಈ ಪೈಕಿ 2,32,928 ( 83.65%) ಬಾಲಕರು, 3,13,770 (88.70%) ಬಾಲಕಿಯರು ಉತ್ತೀರ್ಣರಾಗಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ ಎಂದು ಹೇಳಿದರು.

ಕಲಾ ವಿಭಾಗದಲ್ಲಿ 98,310 (72.86%) ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 1,82,317(88.04%) ವಿದ್ಯಾರ್ಥಿಗಳು ಹಾಗೂ ವಿಜ್ಞಾನ ವಿಭಾಗದಲ್ಲಿ 2,66,071( 86.48%) ಉತ್ತೀರ್ಣರಾಗಿದ್ದಾರೆ. ಈ ಪೈಕಿ ನಗರ ವಿಭಾಗದಲ್ಲಿ 3,71,853 (85.95%) ಮತ್ತು ಗ್ರಾಮೀಣ ವಿಭಾಗದ 1,74,845 (87.62%) ಮಕ್ಕಳು ಉತ್ತೀರ್ಣರಾಗಿದ್ದಾರೆ. ಉನ್ನತ ಶ್ರೇಣಿಯಲ್ಲಿ 1,70,529, ಪ್ರಥಮ ದರ್ಜೆಯಲ್ಲಿ 2,95,385, ದ್ವೀತಿಯ ದರ್ಜೆಯಲ್ಲಿ 63,957 ಉತ್ತೀರ್ಣರಾಗಿದ್ದು, 16,827 ಮಕ್ಕಳು ಜಸ್ಟ್ ಪಾಸ್ ಆಗಿದ್ದಾರೆ ಎಂದು ಮಾಹಿತಿ ನೀಡಿದರು.

ಇನ್ನೂ 5,577 ವಿದ್ಯಾರ್ಥಿಗಳು 35% ನಿಂದ 33% ಪಾಸಿಂಗ್ ಅಂಕದಿಂದ ಪಾಸ್ ಆಗಿದ್ದಾರೆ. ಮಕ್ಕಳಿಗೆ ಫಲಿತಾಂಶ ಮೊದಲು ಕೊಡಬೇಕು ಎಂದು ವೆಬ್ಸೈಟ್ ನಲ್ಲಿ ಫಲಿತಾಂಶ ಪ್ರಕಟ ಮಾಡಿದ್ದೇವೆ. ಇಂದೇ ಡಿಜಿ ಲಾಕರ್ ನಲ್ಲಿ ಅಂಕಪಟ್ಟಿ ಸಿಗಲಿದೆ. ರಾಜ್ಯದಲ್ಲಿ ಫಸ್ಟ್ ಟೈಮ್ 86.48% ಫಲಿತಾಂಶ ಬಂದಿದ್ದು, ಮೊದಲು ಮಕ್ಕಳಿಗೆ ಧನ್ಯವಾದ ಹೇಳುತ್ತೇನೆ ಎಂದು ತಿಳಿಸಿದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon