ಬೆಳಗಾವಿ: ಸಮಾಗಾರ ಸಮಾಜದ ಬಂಧುಗಳಿಗಾಗಿ ಇದೇ ಮಾರ್ಚ್ 15 ರಂದು ಪ್ರೋತ್ಸಾಹ ಫೌಂಡೇಶನ್ ವತಿಯಿಂದ ಬೆಳಗಾವಿಯ ನೆಹರು ನಗರದಲ್ಲಿರುವ ಕನ್ನಡ ಭವನದಲ್ಲಿ ವಧು ವರರ ಪರಿಚಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಂದ ಅನೇಕ ವಧು ವರರು ಭಾಗವಹಿಸಲಿದ್ದಾರೆ. ಉತ್ತಮ ಕುಟುಂಬಗಳ ಪರಿಚಯವನ್ನು ಒಂದೇ ವೇದಿಕೆಯಲ್ಲಿ ಪಡೆಯುವ ಅಪರೂಪದ ಸುವರ್ಣಾವಕಾಶ ಇದಾಗಿದೆ.
ನೀವು ನಿಮ್ಮ ಮನೆಯಲ್ಲಿ ವಧು ವರರ ಹುಡುಕಾಟದಲ್ಲಿ ಇದ್ದರೆ ಈ ಕಾರ್ಯಕ್ರಮದಲ್ಲಿ ಭಾವಹಿಸಿ ನಿಮ್ಮ ಅಮೂಲ್ಯ ಸಮಯ ಮತ್ತು ಹಣವನ್ನು ಉಳಿಸಿಕೊಳ್ಳಿ. ಒಂದೇ ಸೂರಿನಡಿ ಪಾರದರ್ಶಕ ಮತ್ತು ಗೌರವವಿತ ವಾತಾವರಣದಲ್ಲಿ ಸೂಕ್ತ ಪರಿಚಯ ಮಾಡಿಕೊಂಡು ನಿಮ್ಮ ಆಯ್ಕೆಯನ್ನು ಸುಲಭಗೊಳಿಸಿಕೊಳ್ಳಬಹುದು ಎಂದು ಪ್ರೋತ್ಸಾಹ ಫೌಂಡೇಶನ್ ತಿಳಿಸಿದೆ.
ಭಾಗವಹಿಸಲು ಇಚ್ಛಿಸುವವರು, ವಾಟ್ಸ್ ಆಪ್ ಸಂಖ್ಯೆಗಳಿಗೆ ಬಯೋ ಡೇಟಾವನ್ನು ಕಳುಹಿಸಿ ಬರುವಿಕೆಯನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಸಂಪರ್ಕಿಸಬೇಕಾದವರು ಸಂತೋಷ ಹೊಂಗಲ – 9341981880, ಶಂಕರ ಕಾಂಬಳೆ– 9341101926, ಸುರೇಶ್ ಸಂಗಾಲಿ – 9449925791, ಸಾಗರ ಕಿತ್ತೂರ – 9986211892.















