ಮಟಮಟ ಮಧ್ಯಾಹ್ನವೇ ತಹಶೀಲ್ದಾರ ಕೋಮಾರರ ಭರ್ಜರಿ ಎಣ್ಣೆ ಪಾರ್ಟಿ, ಭೋಜನ ಕೂಟ!

WhatsApp
Telegram
Facebook
Twitter
LinkedIn

ಖಾನಾಪುರ: ತಾಲೂಕಿನ ತಹಶೀಲ್ದಾರ ದುಂಡಪ್ಪ ಕೋಮಾರ ಇವರು ಕರ್ತವ್ಯದ ಅವಧಿಯಲ್ಲಿಯೇ ಮದ್ಯ ಸೇವನೆ ಮಾಡುತ್ತ ಕುಳಿತಿರುವುದು ನಮ್ಮ ಪ್ರಜಾ ನೆರಳು ಪತ್ರಿಕೆಯ ಪ್ರತಿನಿಧಿಗೆ ಕಂಡು ಬಂದಿದೆ. ಬುಧವಾರ ದಿನಾಂಕ 30 ಸೆಪ್ಟೆಂಬರ್ 2026 ರಂದು ಸದರಿ ತಹಶೀಲ್ದಾರ ಕೋಮಾರ ಇವರು ಜಾಂಬೋಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಗೀತಾ ಹೋಟೆಲ್‌ನಲ್ಲಿ ಮದ್ಯ ಸೇವನೆ ಮಾಡುತ್ತ ಕುಳಿತಿರುವಾಗ ನಮ್ಮ ಪ್ರತಿನಿಧಿಯ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕು ಬಿದ್ದಿದ್ದಾರೆ.

ಕೋಮಾರ ಅವರೊಂದಿಗೆ ಗ್ರೇಡ್ -2 ತಹಶೀಲ್ದಾರ ಎಸ್.ಕೆ. ತಂಗೋಳಿ, ರೆವಿನ್ಯೂ ಇನ್ಸ್ ಪೆಕ್ಟರ್ ರಮೇಶ ಕೋಲ್ಕಾರ ಇವರೂ ಕೂಡ ಅವರೊಂದಿಗೆ ಭೋಜನಕೂಟದಲ್ಲಿ ಭಾಗಿಯಾಗಿದ್ದರು ಎನ್ನುವುದು ಕಂಡು ಬಂದಿದೆ. ಈ ಘಟನೆ ನಡೆದಿದ್ದು ಬುಧವಾರ ಮಧ್ಯಾಹ್ನ ಸುಮಾರು 3 ಗಂಟೆಗೆ. ಕರ್ತವ್ಯದ ಅವಧಿಯಲ್ಲಿ ತಹಶೀಲ್ದಾರ ಕೋಮಾರ ಅವರು ಪಾರ್ಟಿ ಮಾಡುತ್ತ ಮೋಜಿನಲ್ಲಿ ಮೈಮರೆತಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಈಗ ಮೂಡಿದೆ. ಒಬ್ಬ ತಾಲೂಕಾ ದಂಡಾಧಿಕಾರಿಗಳು ಆನ್ ಡ್ಯೂಟಿ ಇರುವಾಗಲೇ ನಶೆ ಮಾಡುವುದು ಸರ್ಕಾರದ ನಿಯಮಾವಳಿಯ ಸ್ಪಷ್ಟ ಉಲ್ಲಂಘನೆಯಾಗಿದೆ.

ಅತ್ಯಂತ ಉನ್ನತವಾದ ಘನತೆಯ ಸ್ಥಾನದಲ್ಲಿರುವ ಅಧಿಕಾರಿಯೊಬ್ಬರು ಮಟಮಟ ಮಧ್ಯಾಹ್ನ ಬಿಯರ್ ಸೇವನೆ ಮಾಡುತ್ತ ಕುಳಿತಿರುವುದು ಸಮಾಜಕ್ಕೆ ಎಂಥ ಸಂದೇಶ ರವಾನಿಸುತ್ತದೆ ಎಂಬ ಬಗ್ಗೆ ಕೂಡ ಕನಿಷ್ಠ ಜ್ಞಾನ ಇಲ್ಲದಿರುವುದು ವಿಷಾದನೀಯವಾಗಿದೆ. ಇತ್ತೀಚಿನ ದಿನಗಳಲ್ಲಿ ಧಾರವಾಡದ ತಹಶೀಲ್ದಾರ ಒಬ್ಬರು ಹಾಡಹಗಲೇ 50 ಲಕ್ಷ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿದ್ದರು. ಇದರೊಂದಿಗೆ ಹಲವಾರು ಸರ್ಕಾರಿ ಅಧಿಕಾರಿಗಳು ಕರ್ತವ್ಯ ಚ್ಯುತಿ ಎಸಗುತ್ತಿರುವ ಕಂಡು ಬರುತ್ತಿವೆ. ಈ ಹಿಂದೆ ವಿಶೇಷವಾಗಿ ಖಾನಾಪುರದ ತಹಶೀಲ್ದಾರ ಆಗಿದ್ದ ಗಾಯಕವಾಡ ಎಂಬುವರು ಅಕ್ರಮ ಆಸ್ತಿ ಗಳಿಸಿದ ಆರೋಪದ ಮೇಲೆ ಲೋಕಾಯುಕ್ತ ದಾಳಿಯಾಗಿತ್ತು

ಸದ್ಯ ಇಂದಿನ ಪ್ರಕರಣದಲ್ಲಿ ಕೋಮಾರ ಅವರೊಂದಿಗೆ ಇದ್ದ ಗ್ರೇಡ್-2 ತಹಶಿಲ್ದಾರ ಆಗಿರುವ ಎಸ್.ಕೆ. ತಂಗೋಳಿ ಇವರು ಕೂಡ ಅಪಾರ ಪ್ರಮಾಣದಲ್ಲಿ ಅಕ್ರಮ ಆಸ್ತಿ ಗಳಿಸಿದ್ದಾರೆ ಎಂಬ ಆರೋಪಗಳಿವೆ. ಈ ಬಗ್ಗೆಯೂ ಲೋಕಾಯುಕ್ತ ತನಿಖೆಯಾಗಲಿ ಎಂದು ಜನ ಆಗ್ರಹಿಸುತ್ತಿದ್ದಾರೆ.0ಇಂದಿನ ಘಟನೆಯಲ್ಲಿ ತಹಶೀಲ್ದಾರ ಕೋಮಾರ ಇವರು ಮದ್ಯ ಸೇವನೆ ಮಾಡುತ್ತಿರುವ ಛಾಯಾಚಿತ್ರಗಳು ಪ್ರಜಾ ನೆರಳು ಪತ್ರಿಕೆಯ ಪ್ರತಿನಿಧಿಯ ಬಳಿ ಇವೆ. ಆದರೆ ಸಮಾಜಕ್ಕೆ ತಪ್ಪು ಸಂದೇಶ ಹೋಗಬಾರದು ಎಂಬ ಕಳಕಳಿಯಿಂದ ಪತ್ರಿಕೆ ಅವನ್ನು ಪ್ರಕಟಿಸುತ್ತಿಲ್ಲ.

ಮಾನ್ಯ ಜಿಲ್ಲಾಧಿಕಾರಿಯವರು ಹಾಗೂ ಪ್ರಾದೇಶಿಕ ಆಯುಕ್ತರು ವಿಶೇಷವಾಗಿ ಈ ಪ್ರಕರಣದ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. ಈ ಮೂಲಕ ಕಾನೂನು ಸುವ್ಯವಸ್ಥೆಯ ಬಗ್ಗೆ ಸಮಾಜಕ್ಕೆ ನಂಬಿಕೆಯನ್ನು ಹುಟ್ಟಿಸಬೇಕಿದೆ.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon