ವಿ ಧ್ಯಾನ್ ಹೀಲಿಂಗ್ ಮಹಿಳೆಯರಿಗಾಗಿಯೇ ಮೀಸಲಾದ ಮೊದಲ ಧ್ಯಾನಕೇಂದ್ರ: ಶ್ರಾವ್ಯ ಮೌಲಿಕ

WhatsApp
Telegram
Facebook
Twitter
LinkedIn

ಬೆಂಗಳೂರು: ವಿ ಧ್ಯಾನ್ ಹೀಲಿಂಗ್ ಮಹಿಳೆಯರಿಗಾಗಿಯೇ ಮೀಸಲಾದ ಮೊದಲ ಧ್ಯಾನಕೇಂದ್ರವಾಗಿದೆ. ಇಲ್ಲಿ ಅವರ ಸರ್ವತೋಮುಖ ಅಭಿವೃದ್ಧಿಯಾಗಲಿದೆ. ಮಹಿಳೆ ಈ ಸೃಷ್ಟಿಯ ಮೂಲವಾಗಿದ್ದು, ಅವಳ ಮಾನಸಿಕ ಸ್ಥಿತಿ ಉತ್ತಮಗೊಳ್ಳುವುದರಿಂದ ಸಮಾಜದಲ್ಲಿ ಸುಸ್ಥಿತಿ ನೆಲೆಸುತ್ತದೆ ಎಂದು ಸಂಸ್ಥಾಪಕಿ ಶ್ರಾವ್ಯ ಮೌಲಿಕ ಹೇಳಿದರು.

ಭಾನುವಾರ ಬ್ರಹ್ಮಶ್ರೀ ಪಿತಾಮಹ ದಿವಂಗತ ಸುಭಾಷ್ ಪತ್ರಾಜಿ ಅವರ ಕೃಪಾರ್ಷಿವಾದದೊಂದಿಗೆ ಜಯನಗರದಲ್ಲಿ ಮಹಿಳೇರಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಿದ ಕಾರ್ಯಕ್ರಮಗಳೊಂದಿಗೆ ವಿ ಧ್ಯಾನ್ ಹೀಲಿಂಗ್ ಸೆಂಟರ್ ಲೋಕಾರ್ಪಣೆಗೊಂಡಿತು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ವಿಶೇಷ ಸಂವಾದ ನಡೆಸಿ ಮಾತನಾಡಿದ ಶ್ರಾವ್ಯ ಮೌಲಿಕ, ಇಲ್ಲಿಯವರೆಗೆ ಕೇವಲ ಆನ್ಲೈನ್ ಪ್ಲಾಟ್ ಫಾರ್ಮ್ ಗಳ ಮೂಲಕ ನಮ್ಮ ಹೀಲಿಂಗ್ ಸೆಂಟರ್ ಮಹಿಳೆಯರಿಗೆ ಮಾನಸಿಕ ಸಮಸ್ಯೆಗಳಿಂದ ಹೊರಬರುವ ಧ್ಯಾನ ಪದ್ಧತಿಗಳ ಶಿಕ್ಷಣವನ್ನು ನೀಡಕಾಗುತಿತ್ತು, ಆದರೆ ಈಗ ಮಹಿಳೆಯರು ಧ್ಯಾನ ಕೇಂದ್ರಕ್ಕೆ ನೇರವಾಗಿ ಭೇಟಿ ನೀಡಿ ಪರಿಹಾರಗಳನ್ನು ಕೊಂಡುಕೊಳ್ಳಬಹುದು. ಬೇಸಿಕ್ ತರಗತಿಗಳು ಪೂರ್ತಿ ಉಚಿತವಾಗಿವೆ ಎಂದು ತಿಳಿಸಿದರು.

ಈಗಾಗಲೇ ವಿ ಧ್ಯಾನ್ ವತಿಯಿಂದ ಬೆಂಗಳೂರು, ಹುಬ್ಬಳ್ಳಿ, ವಿಶಾಖಪಟ್ಟಣ, ಕೊಯಂಬತ್ತೂರು ಸೇರಿದಂತೆ ಸಾವಿರಾರು ಜನರನ್ನು ಒಳಗೊಂಡ ಉಚಿತ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ನಾರ್ವೆ, ದುಬೈ, ಯುರೋಪಿನ ಹಲವು ದೇಶಗಳಲ್ಲಿ ನಮ್ಮ ಶಾಖೆಗಳು ಈಗಾಗಲೇ ಪ್ರಾರಂಭವಾಗಿವೆ. ಸಾವಿರಾರು ಸಮಸ್ಯೆಗಳಿಗೆ ಧ್ಯಾನದ ಮೂಲಕವೇ ಪರಿಹಾರವನ್ನು ಕಂಡುಕೊಳ್ಳಲಾಗಿದೆ. ಇವೆಲ್ಲವನ್ನೂ ಉಚಿತವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಸೌಂಡ್ ಹೀಲಿಂಗ್, ಆಪ್ತ ಸಮಾಲೋಚನೆ ಸೇರಿದಂತೆ ವ್ಯಕ್ತಿಗತ ಸೇವೆಗಳಿಗೆ ಮಾತ್ರ ಕನಿಷ್ಠ ಶುಲ್ಕವನ್ನು ನಿಗದಿಪಡಿಸಲಾಗಿದೆ. ಮೆಡಿಟೇಶನ್ ಟೂರ್ ಗಳಿಗೆ ಕೇವಲ ಪ್ರಯಾಣ ವೆಚ್ಚವನ್ನು ಭರಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.

ನಾನು 20 ವರ್ಷಗಳಿಂದ ಧ್ಯಾನವನ್ನು ಅಭ್ಯಸಿಸಿ ಅದರ ಅನುಭೂತಿಯನ್ನು ಪಡಿದಿದ್ದೇನೆ. ಇದೇ ಮಾದರಿಯಲ್ಲಿ ಮಹಿಳೆಯರನ್ನು ಮಾನಸಿಕವಾಗಿ ಉನ್ನತೀಕರಿಸಿ ಅವರನ್ನು ಸಬಲರನ್ನಾಗಿ ಮಾಡುವುದು ಪ್ರಥಮ ಆದ್ಯತೆಯಾಗಿದೆ. ಪ್ರತಿ ಪೂರ್ಣಿಮೆಯ ದಿನದಂದು ಮಹಿಳೆಯರಿಗಾಗಿಯೇ ವಿಶೇಷ ಧ್ಯಾನವನ್ನು ಅಭ್ಯಾಸ ಮಾಡಿಸುವ ಕಾರ್ಯವನ್ನು ಹಮ್ಮಿಕೊಳ್ಳುತ್ತಿದ್ದು, ಇದರಿಂದ ಕುಂಡಲಿನಿ ಜಾಗೃತವಾಗಿ ಅವರುಗಳ ಮುಂದಿನ ಹಂತದ ಪ್ರೇರೇಪಣೆಗೆ ಮುನ್ನುಡಿ ಬರೆಯಲಾಗುತ್ತದೆ ಒಟ್ಟಿನಲ್ಲಿ ಇದರಿಂದ ಸಮಾಜದ ಸ್ವಾಸ್ಥ್ಯ ಕಾಪಾಡಿದಂತಾಗುತ್ತದೆ ಎಂದರು.

ವಿಶೇಷವಾಗಿ ಭಾನುವಾರ ನಮ್ಮ ಕೇಂದ್ರವನ್ನು ತೆರೆಯಲು ನಿರ್ಧರಿಸಲಾಗಿದೆ. ಅಂದೇ ಎಲ್ಲಾ ಮಹಿಳೆಯರು ತಮ್ಮ ಕೆಲಸ ಕಾರ್ಯಗಳು ಮತ್ತು ಮನೆಯ ಜವಾಬ್ದಾರಿಯಿಂದ ಮುಕ್ತರಾಗಿರುತ್ತಾರೆ ಎನ್ನುವುದು ಈ ನಿರ್ಧಾರದ ಹಿಂದಿನ ಉದ್ದೇಶವಾಗಿದೆ ಎಂದು ಶ್ರಾವ್ಯ ಮೌಲಿಕ ತಿಳಿಸಿದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon