ಹಣಕಾಸು ವಲಯದ ಉದ್ಯೋಗಾವಕಾಶಗಳಿಗಾಗಿ ಕನ್ಪ್ಲೂ ನ್ಸ್- 2026 ಸಮ್ಮೇಳನ

WhatsApp
Telegram
Facebook
Twitter
LinkedIn

ಬೆಂಗಳೂರು: ಕೃತಕ ಬುದ್ಧಿಮತ್ತೆ, ಜಾಗತಿಕ ಸಾಮರ್ಥ್ಯ ಕೇಂದ್ರಗಳು, ಬದಲಾಗುತ್ತಿರುವ ಉದ್ಯೋಗದಾತರ ನಿರೀಕ್ಷೆಗಳು, ಲೆಕ್ಕಪತ್ರ ನಿರ್ವಹಣೆ ಮತ್ತು ಹಣಕಾಸು ವೃತ್ತಿಯನ್ನು ಪರಿವರ್ತಿಸುತ್ತಿರುವ ಕುರಿತು ಚರ್ಚಿಸಲು ಸುಮಾರು 200 ಹಣಕಾಸು ವೃತ್ತಿಪರರು, ವಿದ್ಯಾರ್ಥಿಗಳು, ಶಿಕ್ಷಣತಜ್ಞರು ಮತ್ತು ಉದ್ಯಮಗಳ ಮುಖಂಡರು ಶನಿವಾರ ನಡೆದ ಸಿಮಂಧರ್ ಸಂಸ್ಥೆ ಆಯೋಜಿಸಿದ್ದ ” ಕನ್ಪ್ಲೂ ನ್ಸ್- 2026 ಎಐ ಯುಗದಲ್ಲಿ ಹಣಕಾಸಿನ ಭವಿಷ್ಯ ಸಮ್ಮೇಳನದಲ್ಲಿ ಭಾಗವಿಸಿದ್ದರು.

ಈ ಸಮ್ಮೇಳನದಲ್ಲಿ ಇನ್ಫೋಸಿಸ್, ಅಡೋಬ್, ಮೈಕ್ರೋಸಾಫ್ಟ್, ಇವೈ, ವೆಲ್ಸ್ ಫಾರ್ಗೋ, ಇನ್ವೆಸ್ಕೊ, ಲಿವ್‌ಸ್ಪೇಸ್ ಮತ್ತು ಇತರ ಪ್ರಮುಖ ಸಂಸ್ಥೆಗಳನ್ನು ಪ್ರತಿನಿಧಿಸುವ 11 ಸಿ.ಎಫ್.ಒ ಗಳು ಮತ್ತು ಹಿರಿಯ ಹಣಕಾಸು ತಜ್ಞರು ಹಣಕಾಸು ವೃತ್ತಿಜೀವನದ ಭವಿಷ್ಯ ಕುರಿತು ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಂಡರು. ಅಂತರಾಷ್ಟ್ರೀಯ ಹಣಕಾಸು ಸಲಹೆಗಾರ ಶ್ರೀಪಾಲ್ ಜೈನ್ ಬರೆದ ವಿವಿಧ ಒಳನೋಟಗಳನ್ನು ಒಳಗೊಂಡಿರುವ ಫ್ಯೂಚರ್ ಆಫ್ ಜಾಬ್ಸ್ ಇನ್ ಫೈನಾನ್ಸ್ ಇನ್ ದಿ ಎಐ ವರ್ಲ್ಡ್ ಪುಸ್ತಕವನ್ನು ಸಹ ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸ್ಥೆಯ ಸಹ ಸಂಸ್ಥಾಪಕರೂ ಆದ ಶ್ರೀಪಾಲ್ ಜೈನ್,  ಸಿಮಂಧರ್ ಸಂಸ್ಥೆ ಯು.ಎಸ್. ಸಿ.ಪಿ.ಎ ಮತ್ತು ಯುಸ್.ಸಿ.ಎಂ.ಎ ನಂತಹ ಜಾಗತಿಕವಾಗಿ ಗುರುತಿಸಲ್ಪಟ್ಟ ಅರ್ಹತೆಗಳನ್ನು ಪಡೆಯಲು ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಆಸಕ್ತಿಯನ್ನು ಗುರುತಿಸಿದೆ. ಬದಲಾಗುತ್ತಿರುವ ವೃತ್ತಿ ಆಕಾಂಕ್ಷೆಗಳು ಮತ್ತು ವಿಕಸನಗೊಳ್ಳುತ್ತಿರುವ ನೇಮಕಾತಿ ನಿರೀಕ್ಷೆಗಳನ್ನು ಮನಗಂಡಿದೆ. ಎಐ ವರ್ಲ್ಡ್‌ನ ಹಣಕಾಸಿನ ಭವಿಷ್ಯದ ಉದ್ಯೋಗಗಳು ಮತ್ತು ಪ್ರಮುಖ ಹಣಕಾಸು ವೃತ್ತಿಪರರ ದೃಷ್ಟಿಕೋನಗಳ ಮೂಲಕ ಬದಲಾವಣೆಗಳನ್ನು ಅನ್ವೇಷಿಸಲು ಉತ್ಸುಕವಾಗಿದೆ ಎಂದರು.

ನಮ್ಮ ಸಂಸ್ಥೆ  ಮುಂದಿನ ಪೀಳಿಗೆಯ ಹಣಕಾಸು ಕೌಶಲ್ಯ ಮತ್ತು ಸಾಮರ್ಥ್ಯಗಳ ಬಗ್ಗೆ ಪ್ರಾಯೋಗಿಕ ಒಳನೋಟಗಳನ್ನು ವೃತ್ತಿಪರರ ಮೂಲಕ ವಿದ್ಯಾರ್ಥಿಗಳಿಗೆ ಕಲಿಸಲು ಮುಂದಾಗಿದೆ. ಉಪಕ್ರಮದ ಅಂಗವಾಗಿ ಭಾರತದ ಪ್ರಮುಖ ಜಾಗತಿಕ ಸಾಮರ್ಥ್ಯ ಕೇಂದ್ರ ಫ್ಯೂಚರ್ ಆಫ್ ಜಾಬ್ಸ್ ಇನ್ ಫೈನಾನ್ಸ್ ಜಾಗತಿಕ ಹಣಕಾಸು ಪ್ರತಿಭೆಯ ಭವಿಷ್ಯವನ್ನು ರೂಪಿಸುವಲ್ಲಿ ಕರ್ನಾಟಕದ ಬೆಳೆಯುತ್ತಿರುವ ಪಾತ್ರವನ್ನು ಪ್ರತಿಬಿಂಬಿಸಲಿದೆ ಎಂದು ಮಾಹಿತಿ ನೀಡಿದರು.

ದೇಶದ ಅತಿದೊಡ್ಡ ಬಹುರಾಷ್ಟ್ರೀಯ ಹಣಕಾಸು ಮತ್ತು ಭಾರತದ ಪ್ರಮುಖ ಜಾಗತಿಕ ಸಾಮರ್ಥ್ಯ ಕಾರ್ಯಾಚರಣೆಗಳಲ್ಲಿ ಬೆಂಗಳೂರು ಪ್ರಮುಖ ತಾಣವಾಗಿದೆ. ಹಣಕಾಸು, ವಿಶ್ಲೇಷಣೆ, ನಿಯಂತ್ರಣ ಮತ್ತು ರೂಪಾಂತರದ ಪ್ರಮುಖ ಸ್ಥಳವಾಗಿದೆ. ಈ ಹಿನ್ನೆಲೆಯಲ್ಲಿ, ಕನ್ಪ್ಲೂ ನ್ಸ್ 2026 ಹಣಕಾಸು ನಾಯಕರು, ಶಿಕ್ಷಣ ತಜ್ಞರು ಮತ್ತು ಮಹತ್ವಾಕಾಂಕ್ಷಿ ವೃತ್ತಿಪರರನ್ನು ಒಟ್ಟುಗೂಡಿಸಿ ಎಐ ಹಣಕಾಸು ವೃತ್ತಿಜೀವನವನ್ನು ಮರುರೂಪಿಸಲು ಅತ್ಯುತ್ತಮ ವೇದಿಕೆಯಾಗಿ ಹೊರಹೊಮ್ಮಿದೆ ಎಂದು ಹೇಳಿದರು.

ಸಿಮಂಧರ್ ಸಂಸ್ಥೆ ಉದ್ಯಮದ ನಿರೀಕ್ಷೆಗಳು ಮತ್ತು ತರಗತಿ ಕಲಿಕೆಯ ನಡುವಿನ ಅಂತರವನ್ನು ಕಡಿಮೆ ಮಾಡಲು ಪಣತೊಟ್ಟಿದೆ. ಹಣಕಾಸಿನ ಉದ್ಯೋಗವಶಕ್ಕಾಗಿದ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ವೃತ್ತಿಪರರಿಗೆ ಪ್ರಾಯೋಗಿಕ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಕರ್ ವೃತ್ತಿಪರ ಶಿಕ್ಷಣದ ಅಂತರರಾಷ್ಟ್ರೀಯ ನಿರ್ದೇಶಕ ಬೆಂಜಮಿನ್ ವಾಂಗ್, ಸೇಂಟ್ ಜೋಸೆಫ್ಸ್ ವಿಶ್ವವಿದ್ಯಾಲಯದ ಕುಲಪತಿ ವಿಕ್ಟರ್ ಲೋಬೋ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon