ಬೆಂಗಳೂರು: ಅಶ್ರೇ ಬೆಂಗಳೂರು ಚಾಪ್ಟರ್ ವತಿಯಿಂದ ಜು.24ರಂದು ನಗರದ ಖಾಸಗಿ ಹೋಟೆಲ್‌ನಲ್ಲಿ ಕ್ಲೆ‘ಮಾಕಾನ್ 4.0 ಎಂಬ ಶೀರ್ಷಿಕೆಯಡಿ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ.
ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಶ್ರೇ ಬೆಂಗಳೂರು ಚಾಪ್ಟರ್‌ನ ಅಧ್ಯಕ್ಷ ಎ.ಅಮರ್ ನಾರಾಯಣ್ ಮಾತನಾಡಿ, ಈ ವಿಚಾರ ಸಂಕಿರಣದಲ್ಲಿ ಪ್ರಸಕ್ತ ಸಂದರ್ಭದಲ್ಲಿ ಜಾಗತಿಕ ತಾಪಮಾನದಿಂದ ಉಂಟಾಗುತ್ತಿರುವ ಪರಿಣಾಮಗಳ ಕುರಿತು ಚರ್ಚಿಸಿ, ಪ್ರಯತ್ನ ಮೀರಿ ಇಂಗಾಲ ತಡೆಗಟ್ಟುವ ಕುರಿತಾಗಿ ಸಂವಾದ ನಡೆಯಲಿದೆ ಎಂದು ತಿಳಿಸಿದರು.
ಪ್ರಮುಖ ಭಾಷಣಕಾರರಾಗಿ ಗೌರವ್ ಶೌರಿ, ಸ್ವಾತಿ ಪುಚಲಪಲ್ಲಿ, ಬಿ.ಗೌತಮ್ ಬಳಿಗಾ, ಪಂಕಜ್ ಹಾಗೂ ಇತರರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಶ್ರೇ ಬೆಂಗಳೂರು ಚಾಪ್ಟರ್‌ನ ರೂಪೇಶ್ ಅಯ್ಯಂಗಾರ್, ಮುನಿರಾಜು, ಸತೀಶ್ ಇತರರಿದ್ದರು.













