ಬೆಂಗಳೂರು: ಎಂಕೆ ಅಗ್ರೋಟೆಕ್‌ನ (ಮಾಸೂಮ್ ಗ್ರೂಪ್ ಕಂಪನಿ) ಪ್ರಮುಖ ಖಾದ್ಯ ತೈಲ ಬ್ರಾಂಡ್ ಆಗಿರುವ ಸನ್‌ಪ್ಯೂರ್, ತನ್ನ ಐಕಾನಿಕ್ ಬ್ರಾಂಡ್ ಅಭಿಯಾನವನ್ನು ನಟ ಕಿಚ್ಚ ಸುದೀಪ್ ಮತ್ತು ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ ಪ್ರಿಯಾಮಣಿ ಅನಾವರಣಗೊಳಿಸಿದರು.
ಭಾರತದ ಏಕೈಕ ಭೌತಿಕವಾಗಿ ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆ- ಸನ್‌ಪ್ಯೂರ್ ರಿಫೈನ್ಡ್ ಸೂರ್ಯಕಾಂತಿ ಎಣ್ಣೆಯ ಮೇಲೆ ಕೇಂದ್ರಿಕೃತವಾಗಿದೆ. ಈ ಎಣ್ಣೆಯು ತಲೆಮಾರುಗಳಿಂದ ದಕ್ಷಿಣ ಮತ್ತು ಪಶ್ಚಿಮ ಭಾರತದಾದ್ಯಂತದ ಗ್ರಾಹಕರಿಗೆ ವಿಶ್ವಾಸಾರ್ಹ ಆಯ್ಕೆಯಾಗಿದ್ದು, ಬ್ರ‍್ಯಾಂಡ್‌ನ ಪ್ರಮುಖ ಉತ್ಪನ್ನವಾಗಿದೆ.
ಮೂರು ದಶಕಗಳಿಂದಲೂ, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳು ನಾಡು, ಕೇರಳ, ಮಹಾರಾಷ್ಟ್ರ, ಗೋವಾ ಮತ್ತು ಓಡಿಶಾದ ಅಡುಗೆ ಮನೆಗಳಲ್ಲಿ, ಸನ್‌ಪ್ಯೂರ್ ರಿಫೈನ್ಡ್ ಸೂರ್ಯಕಾಂತಿ ಎಣ್ಣೆ ಒಂದು ನಂಬಿಕಾರ್ಹ ಆಯ್ಕೆಯಾಗಿ ಬಳಕೆಯಾಗಿದ್ದು, ತನ್ನ ಶುದ್ಧತೆ, ಗುಣಮಟ್ಟ ಮತ್ತು ಸ್ಥಿರತೆಯಿಂದ ಲಕ್ಷಾಂತರ ಮನೆಗಳ ಅಚಲ ಬದ್ಧತೆಯನ್ನು ಗಳಿಸಿದೆ. ಈ ಹೊಸ ಅಭಿಯಾನವು, ಈ ಶಾಶ್ವತ ಗ್ರಾಹಕ ಸಂಬಂಧಕ್ಕೆ ಗೌರವ ಸಲ್ಲಿಸುವದಲ್ಲದೆ, ಪ್ರತಿಯೊಂದು ಊಟದ ಮೇಜಿನ ಸುತ್ತ ಪ್ರಾರಂಭವಾಗುವ ಪ್ರೀತಿಯ ಕ್ಷಣಗಳು, ಒಂದುಗೂಡುವಿಕೆ ಮತ್ತು ಸಂತೋಷದ ಸರಳ ಕ್ಷಣಗಳನ್ನು ಸಂಭ್ರಮಿಸುತ್ತದೆ.
ಈ ಕುರಿತು ಮಾತನಾಡಿದ ಮಾಸೂಮ್ ಗ್ರೂಪ್‌ನ ನಿರ್ದೇಶಕ ಮನ್ನನ್ ಖಾನ್, ನಾವು ಪ್ರತಿದಿನ ಲಕ್ಷಾಂತರ ಕುಟುಂಬಗಳಿಗೆ, ಅವರ ವಿಶ್ವಾಸಾರ್ಹ ಉತ್ಪನ್ನಗಳನ್ನು ತಲುಪಿಸುತ್ತಿರುವ ಪ್ರಯಾಣದ 30 ವರ್ಷಗಳನ್ನು ಆಚರಿಸುತ್ತಿರುವದರಿಂದ, ಸನ್‌ಪ್ಯೂರ್‌ನ ಪ್ರಯಾಣದಲ್ಲಿ ಈ ವರ್ಷ ಮಹತ್ವದ ಮೈಲಿಗಲ್ಲಾಗಿದೆ. ನಮ್ಮ ಈ ಹೊಸ ಅಭಿಯಾನವು ಆ ಶಾಶ್ವತ ಸಂಬಂಧ ಮತ್ತು ನಮ್ಮ ಬ್ರ‍್ಯಾಂಡ್‌ನ ಶುದ್ಧತೆ, ಗುಣಮಟ್ಟ, ಕಾಳಜಿ ಮತ್ತು ಒಗ್ಗಟ್ಟನ್ನು ಪ್ರದರ್ಶಿಸುವ ಮೌಲ್ಯಗಳ ಆಚರಣೆಯಾಗಿದೆ. ಪ್ರೇಕ್ಷಕರೊಂದಿಗೆ ಕಿಚ್ಚ ಸುದೀಪ್ ಮತ್ತು ಪ್ರಿಯಾಮಣಿ ಅಪಾರ ವಿಶ್ವಾಸಾರ್ಹತೆ ಮತ್ತು ಭಾವನಾತ್ಮಕ ಸಂಪರ್ಕವನ್ನು ಹೊಂದಿರುವ ವ್ಯಕ್ತಿಗಳಾಗಿರುವದರಿಂದ, ಅವರು ಸನ್‌ಪ್ಯೂರ್‌ಗೆ ಸೂಕ್ತ ಮತ್ತು ಪರಿಪೂರ್ಣ ರಾಯಭಾರಿಗಳಾಗಿದ್ದಾರೆ ಎಂದರು.
ಮಾಸೂಮ್ ಗ್ರೂಪ್‌ನ ನಿರ್ದೇಶಕಿ ಫರಾಹ್ ಖಾನ್ ಮಾತನಾಡಿ, ಆಕರ್ಷಕ ಜಿಂಗಲ್ ಮತ್ತು ಸನ್‌ಪ್ಯೂರ್ ಎಲ್ಲಿದೆ, ಸಂತೋಷ ಅಲ್ಲಿದೆ ಎಂಬ ಟ್ಯಾಗ್‌ಲೈನ್ ಜಾಹೀರಾತಿನ ಭಾವನಾತ್ಮಕ ಬೇರಾಗಿದೆ. ಕಿಚ್ಚ ಸುದೀಪ್ ಮತ್ತು ಪ್ರಿಯಾಮಣಿ ಅವರ ಮೂಲಕ, ಈ ಜಾಹೀರಾತು, ಉತ್ತಮ ಆಹಾರ ಮತ್ತು ಒಗ್ಗಟ್ಟಿನ ಮೂಲಕ ಪ್ರತಿ ಮನೆಯ ತರುವ ಸಂತೋಷವನ್ನು ಆಚರಿಸುತ್ತದೆ. ಪ್ರೇಕ್ಷಕರು ಜಾಹೀರಾತಿನೊಂದಿಗೆ ನಗುತ್ತಾ, ಪದೇ ಪದೇ ನೆನಪಿಸಿಕೊಳ್ಳುತ್ತಾ ಮತ್ತು ಉತ್ಪನ್ನದ ಜೊತೆ ಕೂಡಲೇ ಭಾವನಾತ್ಮಕ ಸಾಂಗತ್ಯ ಬೆಳಸಬೇಕು ಎಂದು ನಾವು ಬಯಸಿದ್ದೇವೆ. ಹಲವು ವರ್ಷಗಳಿಂದ, ಲಕ್ಷಾಂತರ ಕುಟುಂಬಗಳಿಗೆ ಸನ್‌ಪ್ಯೂರ್ ಪ್ರತಿನಿಧಿಸಿದ್ದು ಇದನ್ನೇ ಎಂದು ಹೇಳಿದರು.














