ಬೆಂಗಳೂರು: ಬಡತನದ ಬೇಗೆಯಲ್ಲಿ ಬೆಂದು, ನೊಂದು ಇಂದು ಯಶಸ್ವಿ ಉದ್ಯಮಿಯಾಗಿದ್ದೇನೆ. ಈ ಕಾರಣಕ್ಕೆ ರಾಜಮನೆ ಫೌಂಡೇಷನ್ ಟ್ರಸ್ಟ್ ಮೂಲಕ ಸಾವಿರಾರು ಬಡವರಿಗೆ ಆಸರೆಯಾಗಿ ನಿಲ್ಲುವುದಕ್ಕೆ ಸ್ಪೂರ್ತಿ ಸಿಕ್ಕಿದೆ ಎಂದು ರಿಯಲ್ ಎಸ್ಟೇಟ್ ಉದ್ಯಮಿ, ಕೈಗಾರಿಕೋದ್ಯಮಿ ಸನ್ನಿ ಆರ್ ರಾಜಮನೆ ತಿಳಿಸಿದರು.
ಶನಿವಾರ ತಮ್ಮ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ರೇಸ್ ಕೋರ್ಸ್ ರಸ್ತೆಯ ಮೌರ್ಯ ಹೋಟೆಲ್ ಬಳಿಯ ತಮ್ಮ ಕಚೇರಿಯಲ್ಲಿ ಮಾಧ್ಯಮ ಸಂವಾದ ನಡೆಸಿ ಮಾತನಾಡಿದ ಅವರು, ನನ್ನ ಹುಟ್ಟೂರು ಚನ್ನಗಿರಿ ತಾಲೂಕಿನ ತಾಣಿಗೆರೆ ಗ್ರಾಮವಾಗಿದ್ದು, ನನ್ನ ತಂದೆ ಮಂಜಪ್ಪ, ತಾಯಿ ಸಾಕಮ್ಮ ಆಗಿದ್ದಾರೆ. ನನ್ನ ಮೂಲ ಹೆಸರು ರಂಗಸ್ವಾಮಿ ಆಗಿದ್ದರೂ, ಪ್ರೌಢಶಾಲಾ ಶಿಕ್ಷಕರೊಬ್ಬರು ಪ್ರೀತಿಯಿಂದ ಇಟ್ಟ ಹೆಸರಾದ ಸನ್ನಿ ಎನ್ನುವುದನ್ನೇ ನನ್ನ ಹೆಸರಾಗಿಸಿಕೊಂಡಿದ್ದೇನೆ ಎಂದು ತಮ್ಮ ಬಗ್ಗೆ ವಿವರಿಸಿದರು.
2005-06 ನೇ ಇಸವಿಯಲ್ಲಿ ಡಿಜಿಟಲ್ ಸ್ಟಡಿಯೋ ನನ್ನ ಮೊದಲ ಉದ್ಯಮವಾಗಿದ್ದು, ಪ್ರಿಂಟರ್ ವೃತ್ತಿಯನ್ನು ಈ ಸಮಯದಲ್ಲಿ ಸಹ ಆರಂಭಿಸಿದೆ. ಬಳಿಕ ಅನಿಮೇಷನ್ ಕೋರ್ಸ್ ಮುಗಿಸಿ 2008-09ರಲ್ಲಿ ಮೊಬೈಲ್ ರಿಪೇರಿ ಹಾಗೂ ಸೆಕೆಂಡ್ ಹ್ಯಾಂಡ್ ಮೊಬೈಲ್ ವ್ಯಾಪರ ಶುರು ಮಾಡಿದೆ. ಬಳಿಕ ಇಂಡಸ್ಟ್ರಿಯಲ್ ವಲಯದಲ್ಲಿ ನನ್ನ ವಹಿವಾಟು ಶುರು ಮಾಡಿದೆ ಎಂದರು.
ಪಿಯುಸಿ ಬಳಿಕ ಸೆಕೆಂಡ್ ಹ್ಯಾಂಡ್ ಕಂಪ್ಯೂಟರ್ ಪಡೆದು 2005-06ರಲ್ಲಿ ತಣಿಗೆರೆಯಲ್ಲಿ ಸನ್ನಿ ಡಿಜಿಟಲ್ ಸ್ಟಡಿಯೋ ಪ್ರಿಂಟರ್ಸ್ ಎಂಬ ಕಚೇರಿ ತೆರೆದು ವ್ಯಾಪಾರ ಶುರು ಮಾಡಿದರು. ಬಳಿಕ ಅನಿಮೇಷನ್ ಕೋರ್ಸ್ ಮುಗಿಸಿ 2008-09ರಲ್ಲಿ ಬಾಡದಲ್ಲಿ ಮೊಬೈಲ್ ರಿಪೇರಿ ಹಾಗೂ ಸೆಕೆಂಡ್ ಹ್ಯಾಂಡ್ ಮೊಬೈಲ್ ವ್ಯಾಪರ ಶುರು ಮಾಡಿದರು. ಬಳಿಕ ಇಂಡಸ್ಟ್ರಿಯಲ್ ವಲಯದಲ್ಲಿ ಸಕ್ರಿಯಗೊಂಡೆ. ಸಾಕಷ್ಟು ಸವಾಲುಗಳನ್ನು ಎದುರಿಸಿ ಟ್ರಾವೆಲ್ಸ್ ಕಂಪನಿ ತೆರೆದೆ ಎಂದು ತಮ್ಮ ಪ್ರಾರಂಭಿಕ ಜೀವನದ ಕುರಿತು ಮಾಹಿತಿ ನೀಡಿದರು.
ಬಳಿಕ ಇನ್ನೊವಾ, ಟೆಂಪೋ ಟ್ರಾವೆಲ್, ಎಸಿ ಬಸ್ಗಳು ಸೇರಿ 25 ರಿಂದ 30 ವಾಹನಗಳಾದವು. ಬಳಿಕ ನಾಗರಬಾವಿಯ ರಿಂಗ್ ರಸ್ತೆಯಲ್ಲಿ ಒಂದು ಹೊಸ ಕಚೇರಿ ತೆರೆದರು. ಬಳಿಕ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿ ಹಲವು ಕಡೆ ಸೈಟ್, ಅಪಾರ್ಟ್ ಮೆಂಟ್ ಗಳ ಡೆವಲಪ್ಮೆಂಟ್ ಮಾಡಿದೆ. ದಾಬಸ್ಪೇಟೆಯಲ್ಲಿ 2 ಎಕರೆ ಕೆ.ಐ.ಎ.ಡಿ.ಬಿಯಿಂದ ಪಡೆದ ನಿವೇಶನದಲ್ಲಿ ಕೆ.ಎಸ್.ಎಫ್.ಸಿ ಯಿಂದ ಸಾಲ ಪಡೆದು ವೇರ್ಹೌಸ್ ನಿರ್ಮಿಸಿದೆ. 2020ರಲ್ಲಿ ನೆಲಮಂಗಲದ ಸೊಂಡೇಕೊಪ್ಪ ರಸ್ತೆಯಲ್ಲಿ ಕೋಳಿ ಫಾರಂ ಸ್ಥಾಪಿಸಿದೆ. ನಂತರ ಕೈಗಾರಿಕಾ ನಿವೇಶನಗಳಿಗೆ ವೇರ್ ಹೌಸ್ ಕನ್ಸ್ಟ್ರಕ್ಷನ್ ಮಾಡುವಲ್ಲಿ ನಿರತನಾದೆ. 2024 ರಲ್ಲಿ ಗಾಂಧಿನಗರದ ರೇಸ್ಕೋರ್ಸ್ ರಸ್ತೆಯಲ್ಲಿ ರಾಜಮನೆ ಗ್ರೂಪ್ಸ್ ಕಚೇರಿಯನ್ನು ತೆರೆದೆ ಎಂದು ತಮ್ಮ ಸಾಧನೆಯ ಕುರಿತು ವಿವರಿಸಿದರು.
ರಾಜಮನೆ ಫೌಂಡೇಶನ್ ಸ್ಥಾಪಿಸಿದ ನಂತರ ಪ್ರತೀ ವರ್ಷ ಸುಮಾರು 10 ರಿಂದ 15 ಸಾವಿರ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಿಸುತ್ತಿದ್ದೇನೆ. ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿದ್ದೇನೆ. ಇದರಿಂದ ವಿದ್ಯೆಗಿಂತ ಸಂಸ್ಕಾರ ಮುಖ್ಯವಾಗಿದೆ. ಯಾವುದೇ ಕೆಲಸ ಸಿಗಲಿಲ್ಲ ಎಂದು ಕುಗ್ಗಬಾರದು. ಛಲ, ಶ್ರದ್ದೆ, ಪರಿಶ್ರಮದೊಂದಿಗೆ ಸ್ವಂತ ಉದ್ಯಮ ಶುರುಮಾಡಿ ಸ್ವಾವಲಂಬಿಗಳಾಗಿ ಬದುಕಬೇಕು ಎಂದು ಸಾರುವ ಉದ್ದೇಶದಿಂದ ಈ ಸಾಮಾಜಿಕ ಕೈಂಕರ್ಯ ಹಮ್ಮಿಕೊಳ್ಳುತ್ತಿದ್ದೇನೆ ಎಂದು ಅಭಿಪ್ರಾಯಪಟ್ಟರು.
ತನಗೆ ಯಾರೂ ಸಹಾಯ ಮಾಡುತ್ತಿಲ್ಲ ಎಂದು ಸುಮ್ಮನೆ ಇರುವುದಕ್ಕಿಂತ ದುಡಿದು ನಾಲ್ಕು ಜನಕ್ಕೆ ಸಹಾಯ ಮಾಡಬೇಕು ಎನ್ನುವ ಉದ್ದೇಶ ನನಗಿದೆ. ಮನುಷ್ಯನಾಗಿ ಹುಟ್ಟಿದಮೇಲೆ ನಾನು, ನನ್ನ ಮನೆ ಎಂಬ ಸ್ವಾರ್ಥವನ್ನು ಬಿಟ್ಟು ನಾಲ್ಕು ಜನಕ್ಕೆ ಉಪಯೋಗವಾಗುವ ರೀತಿ ಬದುಕಬೇಕು. ಈ ನಿಟ್ಟಿನಲ್ಲಿ 2015ರಲ್ಲಿ ಸ್ಥಾಪಿಸಿದ ರಾಜಮನೆ ಫೌಂಡೇಷನ್ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದೆ. ವೈಯಕ್ತಿಕ ಸಮಸ್ಯೆಗಳಷ್ಟೇ ಇದ್ದರೂ, ಯಾರ ಸಹಾಯವನ್ನೂ ಪಡೆಯದೆ ಯಾರಿಂದಲೂ ಏನನ್ನೂ ಬಯಸದೇ ಚನ್ನಗಿರಿ ತಾಲ್ಲೂಕಿನ 100ಕ್ಕೂ ಹೆಚ್ಚು ಶಾಲೆಯ ಸುಮಾರು 10 ರಿಂದ 15 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಯ ಮಕ್ಕಳಿಗೆ ಲಾಕ್ಡೌನ್ ಸಮಯ ಹೊರತುಪಡಿಸಿ ಕಳೆದ 12 ವರ್ಷಗಳಿಂದ ಉಚಿತ ನೋಟ್ ಪುಸ್ತಕ ಮತ್ತು ಸಾಮಾಗ್ರಿಗಳನ್ನು ನೀಡುತ್ತಾ ಬಂದಿರುವುದು ಮಾದರಿಯಾಗಿದೆ ಎಂದು ಸನ್ನಿ ಆರ್ ರಾಜಮನೆ ಹೇಳಿದರು.














