ಬೆಂಗಳೂರು: ಅಪೋಲೋ ಹಾಸ್ಪಿಟಲ್ಸ್ ಬೆಂಗಳೂರು ಹಿರಿಯ ನಾಗರಿಕರಿಗೆ ವಿಶೇಷವಾಗಿ ರೂಪಿಸಲಾದ ಸಮಗ್ರ ಜೀರಿಯಾಟ್ರಿಕ್ ಕೇರ್ ಕಾರ್ಯಕ್ರಮ ಅಪೋಲೋ ಸೀನಿಯರ್ಸ್ ಫರ್ಸ್ಟ್ ವಿಸ್ತರಿಸುವುದಾಗಿ ಪ್ರಕಟಿಸಿದೆ.
ಇದು ಭಾರತದಲ್ಲಿ ಹೆಚ್ಚು ರಚನಾತ್ಮಕ ಮತ್ತು ಸಹಯೋಗದ ವೃದ್ಧರ ಆರೈಕೆಯತ್ತ ಗಮನಾರ್ಹ ಹೆಜ್ಜೆಯಾಗಿದೆ. ಬನ್ನೇರುಘಟ್ಟ ರಸ್ತೆಯಲ್ಲಿ ಮೊದಲಿಗೆ ಪ್ರಾರಂಭಗೊಂಡ ಈ ಕಾರ್ಯಕ್ರಮ ಈಗ ಜಯನಗರ, ಶೇಷಾದ್ರಿಪುರಂ ಮತ್ತು ಸರ್ಜಾಪುರ ರಸ್ತೆಯ ಅಪೋಲೋ ಆಸ್ಪತ್ರೆಗಳಲ್ಲಿಯೂ ಲಭ್ಯವಾಗಲಿದ್ದು, ನಗರದಾದ್ಯಂತ ತನ್ನ ಏಕೀಕೃತ ಹಿರಿಯರ ಆರೈಕೆಯ ಲಭ್ಯತೆಯನ್ನು ಪೂರೈಸಲಿದೆ.
ಈ ಪ್ರಾರಂಭ ಬನ್ನೇರುಘಟ್ಟದಲ್ಲಿ ಕಾರ್ಯಕ್ರಮದ ಒಂದನೇ ವರ್ಷಾಚರಣೆಯಾಗಿದ್ದು, ಅದರಲ್ಲಿ ಹಿರಿಯರ ಆರೋಗ್ಯ ಸೇವೆಗೆ ಸತತ ರೋಗಿ-ಕೇಂದ್ರಿತ ವಿಧಾನ ರೂಪಿಸಲು ನೆರವಾಗಿದ್ದು ಇದು ಕಂತು ಕಂತಿನ ಚಿಕಿತ್ಸೆಯಿಂದ ದೀರ್ಘಾವಧಿ ಆರೋಗ್ಯ ನಿರ್ವಹಣೆ ಮತ್ತು ಪುನಶ್ಚೇತನದ ಬೆಂಬಲದತ್ತ ಮುನ್ನಡೆಯುತ್ತದೆ.
ಈ ಕುರಿತು ಜಿರಿಯಾಟ್ರಿಕ್ ಸ್ಪೆಷಲಿಸ್ಟ್ ಡಾ. ಸ್ಟೀವ್ ಪಾಲ್ ಮಾತನಾಡಿ, ವೃದ್ಧಾಪ್ಯದ ಆರೈಕೆಯು ಪ್ರತಿಕ್ರಿಯಾತ್ಮಕಕ್ಕಿಂತ ಕ್ರಿಯಾತ್ಮಕ ಮತ್ತು ರೋಗತಡೆಯ ಆರೋಗ್ಯ ನಿರ್ವಹಣೆ ಅಗತ್ಯವಾಗಿದೆ. ಸೀನಿಯರ್ಸ್ ಫರ್ಸ್ಟ್ ರಿಸ್ಕ್ ಗಳನ್ನು ನಿರೀಕ್ಷಿಸುವ, ಸಂಕೀರ್ಣತೆಗಳನ್ನು ಕಡಿಮೆ ಮಾಡುವ ಮತ್ತು ರಚನಾತ್ಮಕ ಪುನಶ್ಚೇತನ ಮಾರ್ಗಗಳನ್ನು ಒದಗಿಸುವ, ರೋಗಿಗಳಿಗೆ ಸ್ವತಂತ್ರ ಮತ್ತು ದೀರ್ಘಕಾಲ ಜೀವನದ ಗುಣಮಟ್ಟ ನೀಡಲು ನೆರವಾಗಲು ವಿನ್ಯಾಸಗೊಳಿಸಲಾಗಿದೆ ಎಂದಿದ್ದಾರೆ.
ಈ ವಿಸ್ತರಣೆ ಕುರಿತು ಅಪೋಲೋ ಹಾಸ್ಪಿಟಲ್ಸ್ ಸಿಇಒ ಅಕ್ಷಯ್ ಓಲೇಟಿ ಮಾತನಾಡಿ, ಸೀನಿಯರ್ಸ್ ಫರ್ಸ್ಟ್ ಮೂಲಕ ನಾವು ಹಿರಿಯ ನಾಗರಿಕರಿಗೆ ಆರೈಕೆ ನೀಡಲಾಗುತ್ತದೆ ಎನ್ನುವುದನ್ನು ಮರು ರೂಪಿಸುತ್ತಿದ್ದೇವೆ. ಆರೈಕೆಯು ಆಸ್ಪತ್ರೆಯಿಂದ ಬಿಡುಗಡೆ ಆದಾಗ ಕೊನೆಗೊಳ್ಳಬಾರದು ಬದಲಿಗೆ ಅದು ಪುನಶ್ಚೇತನ ಮತ್ತು ದೀರ್ಘಾವಧಿ ಸ್ವಾಸ್ಥ್ಯದೊಂದಿಗೆ ಮುಂದುವರಿಯಬೇಕು. ಈ ಏಕೀಕೃತ ವಿಧಾನವು ಉತ್ತಮ ಆರೋಗ್ಯ ಫಲಿತಾಂಶಗಳನ್ನು ನೀಡುವುದಲ್ಲದೆ ಕುಟುಂಬಗಳು ಮತ್ತು ಆರೈಕೆ ಮಾಡುವವರಿಗೂ ಬೆಂಬಲಿಸುತ್ತದೆ ಎಂದು ತಿಳಿಸಿದ್ದಾರೆ.














