ಬೆಂಗಳೂರು: ಮಹಿಳಾ ಮೀಸಲಾತಿ ಮಸೂದೆಯನ್ನು ಸಂಸತ್ತಿನಲ್ಲಿ ಮತ್ತೋಮ್ಮೆ ಮಂಡಿಸುವಂತೆ ಆರ್.ಪಿ.ಐ ಪಕ್ಷ ಹಾಗೂ ಸಮತಾ ಸೈನಿಕ ದಳದ ವತಿಯಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ನೂರಾರು ಮಹಿಳೆಯರು ಭಾಗವಹಿಸಿದ್ದು ಕೂಡ ವಿಶೇಷವಾಗಿತ್ತು.
ರಿಪಬ್ಲಿಕನ್ ಪಾರ್ಟಿಯ ಬೆಂಗಳೂರು ಉಸ್ತುವಾರಿ ಚಂದ್ರಶೇಖರ್, ದಲಿತ ಸಂರಕ್ಷಣಾ ಸಮಿತಿ ಲಯನ್ ಬಾಲಕೃಷ್ಣ, ರಿಪಬ್ಲಿಕನ್ ಪಾರ್ಟಿಯ ಮಹಿಳಾ ಘಟಕ ರಾಜ್ಯಾಧ್ಯಕ್ಷೆ ರೂಪಕಲಾ, ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗರತ್ನ ಮತ್ತಿತರರು ಭಾಗವಹಿಸಿದ್ದರು.
ಪ್ರತಿಭಟನೆಯಲ್ಲಿ ಆರ್.ಪಿ.ಐ ರಾಷ್ಟ್ರೀಯ ಅಧ್ಯಕ್ಷ ವೆಂಕಟಸ್ವಾಮಿ ಮಾತನಾಡಿ, ಎನ್.ಡಿ.ಎ ಮೈತ್ರಿ ಪಕ್ಷವಾಗಿ ಆರ್.ಪಿ.ಐ ಎಲ್ಲ ರಾಜಕೀಯ ಪಕ್ಷಗಳನ್ನು ಆಗ್ರಹಿಸುತ್ತದೆ, ಮಹಿಳಾ ಮೀಸಲಾತಿ ಮಸೂದೆ ಪರ ಇಡೀ ದೇಶಾದ್ಯಂತ ನಮ್ಮ ಪಕ್ಷದ ವತಿಯಿಂದ ವಿಶೇಷ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುವುದು, ಈ ಪೂರಕ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಬೇಕೆಂದು ರಾಷ್ಟ್ರಪತಿಗಳು ಪ್ರಧಾನ ಮಂತ್ರಿಗಳಿಗೆ ಸೂಚಿಸಬೇಕು ಎಂದು ಒತ್ತಾಯಿಸಿದರು.















