ನಕಲಿ ಬಿಲ್ ತಯಾರಿಸಿ ಲಕ್ಷಾಂತರ ರೂಪಾಯಿ ಗುಳುಂ; ಜಾಂಬೋಟಿ ಗ್ರಾಪಂನಲ್ಲಿ ಅಕ್ರಮದ ವಾಸನೆ

WhatsApp
Telegram
Facebook
Twitter
LinkedIn

ಜಾಂಬೋಟಿ (ಬೆಳಗಾವಿ ಜಿಲ್ಲೆ): ಬೆಳಗಾವಿ ಜಿಲ್ಲೆಯ ಗಡಿ ಭಾಗದಲ್ಲಿರುವ ಜಾಂಬೋಟಿ ಗ್ರಾಮ ಪಂಚಾಯಿತಿಯಲ್ಲಿ ನಕಲಿ ಬಿಲ್ ತಯಾರಿಸಿ ಹಣ ಲಪಟಾಯಿಸಿರುವ ಆರೋಪ ಕೇಳಿ ಬಂದಿದೆ. 2023, 2024 ಹಾಗೂ 2025 ನೇ ಸಾಲಿನ 15ನೇ ಹಣಕಾಸು ಅನುದಾನದ ಅಡಿಯಲ್ಲಿನ ಕಾಮಗಾರಿಗಳ ಹೆಸರಲ್ಲಿ ನಕಲಿ ಬಿಲ್ ತಯಾರಿಸಲಾಗಿದೆ. ಈ ಬಗ್ಗೆ ಪ್ರಜಾನೆರಳು ಪತ್ರಿಕೆಗೆ ಆನ್ ಲೈನ್ ನಲ್ಲಿ ಬಿಲ್ ಗಳು ಕೂಡ ಸಿಕ್ಕಿವೆ. ಜಾಂಬೋಟಿ ಗ್ರಾಮ ಪಂಚಾಯಿತಿಯ ಪಿಡಿಒ ಪ್ರಕಾಶ ಕುಡಚಿ ಎಂಬುವರು ಈ ನಕಲಿ ಬಿಲ್ ತಯಾರಿಸಿ ಹಣ ಗುಳುಂ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ ಬಗ್ಗೆ ಈಗಾಗಲೇ ಬೆಳಗಾವಿ ಜಿಲ್ಲಾ ಎಸ್ ಪಿ ಕಚೇರಿಗೆ ದೂರು ಕೂಡ ಸಲ್ಲಿಕೆಯಾಗಿದೆ. ಜಿಲ್ಲೆಯ ದಲಿತ ಮುಖಂಡರೊಬ್ಬರು ಈ ದೂರು ಸಲ್ಲಿಸಿದ್ದಾರೆ. ಈ ಹಿಂದೆ ಇದೇ ದಲಿತ ಮುಖಂಡರು ಪಿಡಿಒ ಪ್ರಕಾಶ ಕುಡಚಿಯವರ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿ ಜಾಂಬೋಟಿ ಗ್ರಾಮ ಪಂಚಾಯಿತಿಯ ಎದುರು ಧರಣಿ ಪ್ರತಿಭಟನೆ ಮಾಡಿದ್ದರು. ಸದ್ಯ ಕಿಣಯೆ ಗ್ರಾಮ ಪಂಚಾಯಿತಿಯ ಪಿಡಿಒ ಆಗಿ ಕೆಲಸ ಮಾಡುತ್ತಿರುವ ಪ್ರಕಾಶರವರು ಜಾಂಬೋಟಿ ಪಂಚಾಯಿತಿಗೆ ಹೋಗಿ ಆ ದಲಿತ ಮುಖಂಡರನ್ನು ಭೇಟಿಯಾಗಿ ಯಾವುದೋ ಕೆಲಸ ಮಾಡಿ ಕೊಡುವುದಾಗಿ ಆಶ್ವಾಸನೆ ಕೊಟ್ಟು ಸಂಧಾನ ಮಾಡಿಕೊಂಡಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಇಷ್ಟೆಲ್ಲಾ ಅವಾಂತರಗಳು ಕಂಡು ಬಂದರೂ ತಾಪಂ ಇಒ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಈವರೆಗೂ ಈ ಪ್ರಕರಣದಲ್ಲಿ ಏನೂ ಮಾಡದೆ ಸುಮ್ಮನಿರುವುದು ಏಕೆ ಎಂದು ಜನ ಪ್ರಶ್ನಿಸುತ್ತಿದ್ದಾರೆ. ಈ ಕುರಿತು ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಲೋಕಾಯುಕ್ತರು ಸ್ವಯಂ ಪ್ರೇರಿತವಾಗಿ ತನಿಖೆಗೆ ಮುಂದಾಗಬೇಕೆಂಬುದು ಜನರ ಆಗ್ರಹವಾಗಿದೆ. ಇದೆಲ್ಲ ನಡೆಯುತ್ತಿರುವುದರ ಮಧ್ಯೆ ವ್ಯಕ್ತಿಯೊಬ್ಬರು ಜಾಂಬೋಟಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಒಂದಿಷ್ಟು ಕುರ್ಚಿ, ಟೇಬಲ್ ಗಳನ್ನು ತಂದು ಇಟ್ಟಿರುವ ವಿಚಾರ ಚರ್ಚೆಯಾಗುತ್ತಿದೆ. ಜಾಂಬೋಟಿಯ ಎಸ್ ಸಿ, ಎಸ್ ಟಿ ಜನರಿಗೆ ಹಂಚಲು ಇವನ್ನು ತಂದಿಡಲಾಗಿದೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆಯೂ ತನಿಖೆ ನಡೆಯುವುದು ಸೂಕ್ತ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon