ಅಪಾರ್ಟ್ಮೆಂಟ್ ಗಳ ಸಂಬಂಧ ಕಾನೂನಾತ್ಮಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ: ಎನ್. ಎ. ಹ್ಯಾರಿಸ್

WhatsApp
Telegram
Facebook
Twitter
LinkedIn

ಬೆಂಗಳೂರು: ಅಪಾರ್ಟ್ಮೆಂಟ್ ಮಾಲೀಕರು, ಬಿಲ್ಡರ್ಸ್ ಮತ್ತು ಇತರೆ ಸಂಬಂಧಪಟ್ಟ ಇಲಾಖೆಗಳ ನಡುವೆ ಸಮನ್ವಯ ತರಲು ರಾಜ್ಯ ಸರ್ಕಾರ ಸಾಕಷ್ಟು ಕಾನೂನಾತ್ಮಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎನ್. ಎ. ಹ್ಯಾರಿಸ್ ತಿಳಿಸಿದರು.

ಶನಿವಾರ ಸಂಜೆ ನಗರದ ಸೇಂಟ್ ಜೋಸೆಫ್ಸ್ ಲಾ ಕಾಲೇಜಿನಲ್ಲಿ ನಡೆದ ಪ್ರಾಪರಿಟಾಸ್ 2.0 ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಂಗಳೂರು ಕೂಡ ಹಳ್ಳಿ ಹಳ್ಳಿಗಳಿಂದ ಕೂಡಿ ಮಹಾನಗರವಾಗಿ ಮಾರ್ಪಟ್ಟಿದೆ. ಇಲ್ಲಿ ಕೂಡ ಜನರು ಸೌಹಾರ್ದತೆಯಿಂದ ಮತ್ತು ಸಂತಸದಿಂದ ಬದುಕುವುದು ಸಹಜ ಪ್ರಕ್ರಿಯೆಯಾಗಿದೆ. ಆದರೆ ಹಳೆಯ ಕಾನೂನು ಮತ್ತು ಪದ್ಧತಿಗಳು ಹೊಸ ಜೀವನ ಶೈಲಿಗೆ ತೊಡಕಾಗಿದ್ದವು ಇವನ್ನು ಸರಿಪಡಿಸಿ ಹೊಸ ತಂತ್ರಜ್ಞಾನ, ಕಾನೂನು ಜ್ಞಾನವನ್ನು ತರಲು ಸರ್ಕಾರದ ವತಿಯಿಂದ ಶಮಿಸಲಾಗುತ್ತಿದೆ ಎಂದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಕೂಡ ನಾನು ಅಧ್ಯಕ್ಷನಾಗಿ ಕಾರ್ಯಭಾರ ಸ್ವೀಕರಿಸಿದ ಮೇಲೆ ಸಾಕಷ್ಟು ಬದಲಾವಣೆಗಳನ್ನು ತರಲಾಗಿದೆ. ಪಾರದರ್ಶಕ ಆಡಳಿತ ವ್ಯವಸ್ಥೆ, ತಂತ್ರಜ್ಞಾನದ ಅಳವಡಿಕೆ, ಸಾರ್ವಜನಿಕ ಕುಂದು ಕೊರತೆ ಆಲಿಸಲು ಪ್ರತ್ಯೇಕ ವಿಭಾಗ ವನ್ನು ಸ್ಥಾಪಿಸಲಾಗಿದೆ. ಕಾನೂನಾತ್ಮದ ತೊಡಕುಗಳನ್ನು ನಿವಾರಿಸಲು ಅಧಿಕೃತ ಮಧ್ಯಸ್ಥಿಕೆ ಕೇಂದ್ರಗಳ ಮೂಲಕ ಪರಿಹಾರ ಕಂಡುಕೊಳ್ಳಲಾಗುತ್ತಿದೆ. ನಿಯಮಿತ ಆನ್ಲೈನ್ ಲೈವ್ ಕಾರ್ಯಕ್ರಮಗಳ ಮೂಲಕ ಕೂಡ ಸಮಸ್ಯೆಗಳನ್ನು ಬಗೆಹರಿಸುವ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಬೆಂಗಳೂರು ಅಪಾರ್ಟ್ಮೆಂಟ್ ಫೆಡರೇಷನ್ ಅಧ್ಯಕ್ಷ ಸತೀಶ್ ಬಿ ಮಲ್ಯ ಮಾತನಾಡಿ, ಕಟ್ಟಗಳ ನಿರ್ಮಾಣದ ಕಾರ್ಯಸೂಚಿ ಮತ್ತು ಕಾನೂನಿನ ಪ್ರಕ್ರಿಯೆಗಳ ಕುರಿತು ರಾಜ್ಯ ಸರ್ಕಾರ ಹೊಸ ಕಾನೂನನ್ನು ಜಾರಿಗೊಳಿಸಲು ಮುಂದಾಗಿದೆ. ಈ ಬಗ್ಗೆ ನಮ್ಮ ಸಂಘದ ಜೊತೆ ಡಿ. ಕೆ ಶಿವಕುಮಾರ್ ಅವರು ಈಗಾಗಲೆ ಸಮಾಲೋಚನೆ ನೆಡೆಸಿದ್ದಾರೆ. ನಾವು ಕೂಡ ನಮ್ಮ ಅಹವಾಲುಗಳನ್ನು ನೀಡಿದ್ದು, ಸೂಕ್ತ ಸ್ಪಂದನೆ ದೊರೆಯುವ ಭರವಸೆ ಇದೆ ಎಂದು ಹೇಳಿದರು.

ಕಾನೂನಿನ ಸಲಹೆಗಾರರು, ರೆರಾ ಮುಖ್ಯಸ್ಥರು, ರಾಜಕಾರಣಿಗಳು ಮತ್ತು ಮಾಲೀಕರ ನಡುವೆ ಸಮನ್ವಯ ಸಾಧಿಸಲು ಪ್ರಾಪರಿಟಾಸ್ ರೀತಿಯ ಕಟ್ಟಡಗಳ ಕುರಿತ ಕಾನೂನು ಅರಿವು ಕಾರ್ಯಕ್ರಮಗಳ ಅನಿವಾರ್ಯತೆ ಸಾಕಷ್ಟಿದೆ. ಕಾರ್ಯಕ್ರಮಕ್ಕೆ ಸೂಕ್ತ ಸ್ಪಂದನೆ ನೀಡಿ ಸಕಲ ಸಹಕಾರ ನೀಡಿರುವ ಸೇಂಟ್ ಜೋಸೆಫ್ಸ್ ಲಾ ಕಾಲೇಜಿನ ಆಡಳಿತ ಮಂಡಳಿ, ಸಿಬ್ಬಂದಿಗಳು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.

ನಿವೃತ್ತ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್, ರೆರಾ ಸಂಸ್ಥೆಯ ಅಧಿಕಾರಿಗಳು, ಕಾನೂನು ಸಲಹೆಗಾರರು ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon