ಬೆಂಗಳೂರು: ಪುಟ್ಟ ಪುಟ್ಟ ಹೆಜ್ಜೆ ಹಾಕುವ ಅಪ್ಪ ಅಮ್ಮನಿಗೆ ಚಾಕೊಲೇಟ್, ಸಿಹಿತಿಂಡಿ, ಐಸ್ ಕ್ರೀಮ್ ಕೊಡಿಸುವಂತೆ ಹಠ ಹಿಡಿಯುವ ಎಳೆ ವಯಸ್ಸಿನಲ್ಲಿ ಸಿಲಿಕಾನ್ ಸಿಟಿಯ ಬಾಲಕಿ ತಾನ್ಸಿ ಸಿಂಗ್ ರಾಜ್ಯಕ್ಕೆ, ದೇಶಕ್ಕೆ ಹೆಮ್ಮೆ ಪಡುವ ಸಾಧನೆ ಮಾಡಿ ಎಲ್ಲರ ಹುಬ್ಬೇರುವಂತಹ ಸಾಧನೆಯನ್ನು ಮಾಡಿದ್ದಾಳೆ. ಜೂನಿಯರ್ ಮಿಸ್ ಕರ್ನಾಟಕ ಕಿರೀಟವನ್ನು ಮುಡಿಗೇರಿಸಿಕೊಂಡು ಮಾದರಿಯಾಗಿದ್ದಾಳೆ.
ಬೆಂಗಳೂರು ನಗರದಲ್ಲಿ ನೆಲೆಸಿರುವ ಉಪೇಂದ್ರ ಸಿಂಗ್ ಮತ್ತು ಪವಿತ್ರಾ ಸಿಂಗ್ ದಂಪತಿಗಳ ಏಕೈಕ ಪುತ್ರಿಯಾಗಿರುವ ತಾನ್ಸಿ ಸಿಂಗ್ ಟ್ಯಾಗ್ರೆಸ್ ಡ್ರಸ್ ನಲ್ಲಿ ಗ್ರ್ಯಾಂಡ್ ಫಿನಾಲೆಯಲ್ಲಿ ರ್ಯಾಂಪ್ ವಾಲ್ಕ್ ಮಾಡುವ ಮೂಲಕ ಜೂನಿಯರ್ ಮಿಸ್ ಕರ್ನಾಟಕ ಪ್ರಶಸ್ತಿಯನ್ನು ಪಡೆದು ತನ್ನ ಛಾಪನ್ನು ನಾಲ್ಕೂವರೆ ವರ್ಷಕ್ಕೇ ತೋರ್ಪಡಿಸಿದ್ದಾಳೆ. ಇಷ್ಟೇ ಅಲ್ಲದೇ ಓದು ಆಟ ಪಾಠದಲ್ಲಿಯೂ ಮುಂದಿದ್ದು, ಅಪ್ರತಿಮ ಸಾಧನೆಗೆ ಮುನ್ನುಡಿ ಬರೆದು ಮಾದರಿಯಾಗಿ ನಿಂತಿದ್ದಾಳೆ.
ಈ ಸಾಧನೆಯ ಕುರಿತು ಖಾಸಗಿ ಹೋಟೆಲ್ ನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತಾಡಿರುವ ಉಪೇಂದ್ರ ಮತ್ತು ಪವಿತ್ರಾ ದಂಪತಿಗಳು, ತಮ್ಮ ಮಗಳ ಸಾಧನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ ಈ ಸಾಧನೆ ಕೇವಲ ಇದು ತಮ್ಮ ಮಗಳ ಸಾಧನೆ ಮಾತ್ರವಲ್ಲ ರಾಜ್ಯ ರಾಷ್ಟ್ರಕ್ಕೆ ಸಮಪರ್ಪಿಸುವುದಾಗಿ ತಿಳಿಸಿ. ಎಲ್ಲ ಪೋಷಕರು ಸಹ ತಮ್ಮ ಮಕ್ಕಳನ್ನು ಕೇವಲ ಪಾಠಕ್ಕೆ ಸೀಮಿತಗೊಳಿಸದೆ ಅವರ ಒಳಗಿರುವ ಅಂತಃಶಕ್ತಿಯನ್ನು ಗುರುತಿಸಿ ಬೆಳಸುವ ಕಾರ್ಯಕ್ಕೆ ಮುಂದಾಗಬೇಕು ಎನ್ನುವ ಆಶಯವನ್ನು ವ್ಯಕ್ತಪಡಿಸಿದ್ದಾರೆ.
ಪ್ರತಿಷ್ಠಿತ ಶಾಲೆಗೆ ಸೇರಿಸಿ ಅದರಿಂದಲೇ ತಮ್ಮ ಮಕ್ಕಳ ಸರ್ವತೋಮುಖ ಬೆಳವಣೆಯಾಗುತ್ತದೆ ಎಂದು ಬಹುತೇಕ ಎಲ್ಲಾ ಪೋಷಕರ ಅಭಿಪ್ರಾಯವಾಗಿದೆ. ಅವರನ್ನು ಕೇವಲ ಪುಸ್ತಕದ ಹೋಳುಗಳನ್ನಾಗಿಸದೆ ಅವರಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಬೆಳಸುವ ಕಾರ್ಯಕ್ಕೆ ಮುಂದಾಗಬೇಕು. ತಂದೆ ತಾಯಂದರೂ ಸಹ ಮಕ್ಕಳಿಗೆ ಮಾದರಿಯಾಗಿ ನಿಂತು ಅವರನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಈ ಸ್ಪರ್ಧೆಗೆ ಕರ್ನಾಟಕದಿಂದ ಟಾಡ್ಲರ್ಸ್ ವಿಭಾಗದಲ್ಲಿ ಸ್ಪರ್ಧೆ ಮಾಡಿದ್ದಳು, ಒಟ್ಟು 94 ಸ್ಪರ್ಧಿಗಳು ಸ್ಪರ್ಧೆಗೆ ಭಾಗವಹಿಸಿದ್ದರು ಗ್ರಾಂಡ್ ಫಿನಾಲೆಗೆ 11 ಮಕ್ಕಳು ಆಯ್ಕೆಯಾಗಿದ್ದರು. ಕ್ಯಾಲಿಕಟ್ ನಲ್ಲಿ ಫಿನಾಲೆಯನ್ನು ಆಯೋಜಿಸಲಾಗಿತ್ತು. ಈ ವರ್ಷದ ಅತಿ ದೊಡ್ಡ ಈವೆಂಟ್ ಇದಾಗಿತ್ತು. ಮುಂಬರುವ ಬ್ಯಾಂಕಾಕ್ ನಲ್ಲಿ ನಡೆಯುತ್ತಿರುವ ವಿಶ್ವ ಮಟ್ಟದ ಸ್ಪರ್ಧೆಗೆ ಭಾರತವನ್ನು ಪ್ರತಿನಿಧಿಸುವ ಅರ್ಹತೆಯನ್ನು ಸಾನ್ವಿ ಪಡೆದಿದ್ದಾಳೆ. ಮಗಳು ಅತುಲ್ ಅಕಾಡೆಮಿಯಲ್ಲಿ ತನ್ನ ಮಾಡೆಲಿಂಗ್ ಅಭ್ಯಾಸವನ್ನು ಮುಂದುವರಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ನಡೆದ ಸಂಭ್ರಮ ಸಮಾರಂಭದಲ್ಲಿ ಪೇಟೆ ಹುಡುಗಿ ಹಳ್ಳಿ ಲೈಫು ಖ್ಯಾತಿಯ ಸೋನಿಯಾ ಜೋಸೆಫ್ ಹಾಜರಿದ್ದರು.















