ತ್ಯಾಜ್ಯ ನೀರು ಕೆರೆಗೆ; ಸಂಕಷ್ಟದಲ್ಲಿ ರೈತರು ಸುಳೇಭಾವಿ ಗ್ರಾಪಂ ಎಡವಟ್ಟು; ಮೀಟಿಂಗ್ ಗೆ ಬಾರದ ಪಿಡಿಒ!

WhatsApp
Telegram
Facebook
Twitter
LinkedIn

ಬೆಳಗಾವಿ: ತಾಲೂಕಿನ ಸುಳೇಭಾವಿ ಗ್ರಾಮದ ರೈತರು ಗ್ರಾಮ ಪಂಚಾಯಿತಿ ಹಾಗೂ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ (ಪಿಆರ್ ಇಡಿ) ಬೇಜವಾಬ್ದಾರಿತನದ ವರ್ತನೆಯಿಂದಾಗಿ ಬೆಳೆ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. 2014 ರಿಂದಲೂ ರೈತರು ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಏನೂ ಪ್ರಯೋಜನವಾಗಿಲ್ಲ. ಸುಳೇಭಾವಿ ಗ್ರಾಮದಲ್ಲಿರುವ ಕೆರೆಯು ಕಲುಷಿತಗೊಂಡಿರುವುದರಿಂದ ಈ ಕೆರೆಯ ಸುತ್ತಮುತ್ತಲಿನ ರೈತರು ತೀರಾ ಸಮಸ್ಯೆ ಎದುರಿಸುತ್ತಿದ್ದಾರೆ. ಗ್ರಾಮದಲ್ಲಿ ಉತ್ಪತ್ತಿಯಾಗುವ ಒಳಚರಂಡಿ ನೀರು ಹಾಗೂ ಇತರ ತ್ಯಾಜ್ಯ ನೀರನ್ನು ಈ ಕೆರೆಗೆ ಬಿಡುತ್ತಿರುವುದರಿಂದ ಅವಾಂತರ ಸೃಷ್ಟಿಯಾಗಿದೆ.

ಕಳೆದೊಂದು ದಶಕದಿಂದ ಸುಳೇಭಾವಿ ಗ್ರಾಮ ಪಂಚಾಯಿತಿಯವರು ಗ್ರಾಮದ ತ್ಯಾಜ್ಯ ನೀರನ್ನು ಈ ಕೆರೆಗೆ ಬಿಡುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ. ಮಳೆಗಾಲದಲ್ಲಿ ಈ ಕೆರೆ ತುಂಬಿ ಇದರಲ್ಲಿನ ತ್ಯಾಜ್ಯ ನೀರು ಹಾಗೂ ಹೊಲಸು ರೈತರ ಹೊಲಗಳಿಗೆ ನುಗ್ಗುತ್ತಿದೆ. ಇಲ್ಲಿನ ಹಲವಾರು ಕಳೆದ ಕೆಲ ವರ್ಷಗಳಿಂದ ಬೆಳೆ ಬೆಳೆಯುವುದನ್ನೇ ಬಿಟ್ಟಿದ್ದಾರೆ.

ಈ ಸಮಸ್ಯೆ ಪರಿಹರಿಸುವಂತೆ ರೈತರು ಹಲವಾರು ಬಾರಿ ಮನವಿ ಸಲ್ಲಿಸಿದರೂ ಏನೂ ಪ್ರಯೋಜನವಾಗಿಲ್ಲ. ಜಿಪಂ ಸಿಇಒ, ತಾಪಂ ಇಒ, ಪಿಆರ್ ಇಇ, ಡಿಸಿ, ತಹಶೀಲ್ದಾರ ಹೀಗೆ ಎಲ್ಲರಿಗೂ ಮನವಿ ಸಲ್ಲಿಸಿದರೂ ಏನು ಪ್ರಯೋಜನವಾಗಿಲ್ಲ ಎನ್ನುವಂತಾಗಿದೆ.

ಸಂತ್ರಸ್ತ ರೈತನ ಮಾತು:

ನಾನು ಈ ಪೈಪ್ ಲೈನ್ ಸಲುವಾಗಿ ನನ್ನ ಜಮೀನು ಇರುವ ಸರ್ವೆ ನಂಬರ್ 55/1, 55/2 ಇಲ್ಲಿ ಜಾಗವನ್ನು ಕೂಡ ಬಿಟ್ಟು ಕೊಟ್ಟಿದ್ದೇನೆ. ಗ್ರಾಪಂ ಹಾಗೂ ಮೇಲಧಿಕಾರಿಗಳಿಗೆ ಸತತವಾಗಿ ಮನವಿ ನೀಡಿದ್ದೇವೆ. ನಾವು ಕೃಷಿಯ ಮೇಲೆ ಅವಲಂಬಿತರಾಗಿದ್ದೇವೆ. ಹೀಗಾಗಿ ಈ ಸಮಸ್ಯೆಯನ್ನು ಬೇಗನೆ ಹರಿಸಲಿ ಎಂದು ರೈತರಾದ ಸಂಭಾಜಿ ಬಂಗೆನ್ನವರ ಅಳಲು ತೋಡಿಕೊಂಡಿದ್ದಾರೆ.

ಸಭೆಗೆ ಬಾರದ ಪಿಡಿಒ:

ಈ ವಿಷಯ ಕುರಿತಾಗಿ ಸೋಮವಾರ ಜನವರಿ 12 ರಂದು ಮೀಟಿಂಗ್ ಕರೆಯಲಾಗಿತ್ತು. ಆದರೆ ಪಿಡಿಒ ವಸಂತಕುಮಾರಿ ಅವರೇ ಮೀಟಿಂಗ್ ಗೆ ಬಂದಿಲ್ಲ. ಪಿಡಿಒ ಮೇಡಂ ಅವರ ಈ ನಿರ್ಲಕ್ಷತನದ ವರ್ತನೆಗೆ ರೈತರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸ್ಪಷ್ಟೀಕರಣ ಪಡೆಯಲು ಕರೆ ಮಾಡಿದರೆ ಪಿಡಿಒ ಮೇಡಂ ಕರೆಯನ್ನೇ ಸ್ವೀಕರಿಸಿಲ್ಲ.

ಸಹಾಯಕ ಕಾರ್ಯಕಾರಿ ಅಭಿಯಂತರರ ಸ್ಪಷ್ಟೀಕರಣ:

ನಾನು ಇಲ್ಲಿ ಕರ್ತವ್ಯಕ್ಕೆ ಬಂದು 3 ತಿಂಗಳಾಗಿದೆ. ನಾನು ಅಲ್ಲಿಗೆ ವಿಸಿಟ್ ಮಾಡಿದ್ದೇನೆ. ಕಾರ್ಯಸಾಧ್ಯತಾ ವರದಿ ತಯಾರಿಸಿ ಮುಂದಿನ 15 ದಿನಗಳಲ್ಲಿ ಕೆಲಸ ಆರಂಭಿಸುತ್ತೇವೆ ಎಂದು ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಕಾರ್ಯಕಾರಿ ಅಭಿಯಂತರರಾದ ಸಾವಂತ ಸ್ಪಷ್ಟಪಡಿಸಿದ್ದಾರೆ.

ಪ್ರಜಾ ನೆರಳು ಪತ್ರಿಕೆಯ ಕಳಕಳಿಯ ಮನವಿ:

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಯಶವಂತ್ ಅವರು ಸ್ವತಃ ಪರಿಶೀಲನೆ ಮಾಡಿ ಈ ಸಮಸ್ಯೆ ಬಗೆಹರಿಸಲು ಮುಂದಾಗಬೇಕೆಂದು ಪ್ರಜಾ ನೆರಳು ಪತ್ರಿಕೆಯ ಆಗ್ರಹವಾಗಿದೆ. ಅದೇ ರೀತಿ ಇಡೀ ತಾಲೂಕಿನಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಹಲವಾರು ಗ್ರಾಪಂ ಪಿಡಿಒಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿಲ್ಲ. ಈ ಬಗ್ಗೆ ಕೂಡ ಯಶವಂತ್ ಅವರು ಸ್ವತಃ ಪರಿಶೀಲಿಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon