ಬೆಂಗಳೂರು: ಬೀದಿನಾಯಿಗಳಿಗೆ ಆಹಾರ ನೀಡುವ ಜಾಗಗಳಲ್ಲಿ ಸೂಚನಾ ಫಲಕಗಳ ಅಳವಡಿಸಲಾಗಿದೆ ಎಂದು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಹೇಳಿದ್ದಾರೆ.
ಉತ್ತರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಮಾನವೀಯ ನಿರ್ವಹಣೆ, ಸಾರ್ವಜನಿಕ ಆರೋಗ್ಯ ರಕ್ಷಣೆ ಹಾಗೂ ಪರಿಸರ ಸ್ವಚ್ಛತೆಯನ್ನು ಸಮನ್ವಯಗೊಳಿಸುವ ಉದ್ದೇಶದಿಂದ ಪಾಲಿಕೆಯ ಪ್ರಾಾಣಿ ಕಲ್ಯಾಣ ವಿಭಾಗವು 70 ನಿರ್ದಿಷ್ಟ ಸ್ಥಳಗಳನ್ನು ಬೀದಿ ನಾಯಿಗಳಿಗೆ ಆಹಾರ ನೀಡುವ ಅಧಿಕೃತ ಜಾಗಗಳಾಗಿ ಗುರುತಿಸಿದೆ. ಗುರುತಿಸಲಾದ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸರ್ವೋಚ್ಚ ನ್ಯಾಾಯಾಲಯದ ಮಾರ್ಗಸೂಚಿಗಳು, ಪ್ರಾಣಿ ಕ್ರೂರತೆ ನಿವಾರಣೆ ಕಾಯಿದೆ , 1960 ಹಾಗೂ ಸಂತಾನಹರಣ ಶಸ್ತ್ರ ಚಿಕಿತ್ಸೆೆ ನಿಯಮಾವಳಿಗಳ ಅನ್ವಯ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥಿತ ಹಾಗೂ ನಿಯಂತ್ರಿತ ರೀತಿಯಲ್ಲಿ ಆಹಾರ ನೀಡುವ ವ್ಯವಸ್ಥೆೆಯನ್ನು ರೂಪಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಗುರುತಿಸಲಾದ ಆಹಾರ ವಿತರಣೆ ಜಾಗದಲ್ಲಿ ಆಹಾರವನ್ನು ಗುರುತಿಸಿದ ಸ್ಥಳಗಳಲ್ಲೇ ನೀಡಬೇಕು. ಮುಖ್ಯ ರಸ್ತೆೆಗಳು, ಆಸ್ಪತ್ರೆೆಗಳು, ಶಾಲೆಗಳು ಹಾಗೂ ಜನಸಂದಣಿ ಪ್ರದೇಶಗಳಲ್ಲಿ ಆಹಾರ ನೀಡಬಾರದು. ಆಹಾರ ನೀಡಿದ ನಂತರ ಸ್ಥಳವನ್ನು ಸ್ವಚ್ಛವಾಗಿಡುವುದು ಆಹಾರ ನೀಡುವವರ ಜವಾಬ್ದಾರಿಯಾಗಿದೆ. ನಾಯಿಗಳಿಗೆ ಹಾನಿ ಮಾಡುವುದು ಅಥವಾ ಕಿರುಕುಳ ನೀಡುವುದು ಕಾನೂನುಬಾಹಿರವಾಗಿದೆ. ಸಾರ್ವಜನಿಕ ಸುರಕ್ಷತೆ ಕಾಪಾಡುವಂತೆ ಶಿಸ್ತಿನಿಂದ ಆಹಾರ ನೀಡಬೇಕು ಎನ್ನುವ ಸೂಚನೆಗಳನ್ನು ಪೊಮ್ಮಲ ಸುನೀಲ್ ಕುಮಾರ್ ನೀಡಿದ್ದಾರೆ.















